ನೇಪಾಳದಲ್ಲಿ ಪ್ರತಿಭಟನೆ; ಹಣಕಾಸುವ ಸಚಿವ ಪೌಡೆಲ್​​ರನ್ನು ಬೀದಿಯಲ್ಲಿ ಅಟ್ಟಾಡಿಸಿ ಹಲ್ಲೆ; ವಿಡಿಯೋ ವೈರಲ್| Bishnu Prasad Paudel

FotoJet (27) (1)
Published on

Bishnu Prasad Paudel: ನೇಪಾಳದಲ್ಲಿ ಸೋಷಿಯಲ್ ಮೀಡಿಯಾ ಬ್ಯಾನ್​ ಮಾಡಿದ್ದರಿಂದ ಹುಟ್ಟಿಕೊಂಡ ಪ್ರತಿಭಟನೆ ತೀವ್ರ ಹಿಂಸಾಚಾರದ ಸ್ವರೂಪ ಪಡೆದಿದೆ. ಪ್ರಧಾನಿಯಾಗಿದ್ದ ಕೆ.ಪಿ.ಶರ್ಮಾ ಓಲಿ ಮನೆಗೆ ಬೆಂಕಿ ಹಚ್ಚಲಾಗಿದ್ದು, ಹಣಕಾಸು ಸಚಿವ ಬಿಷ್ಣು ಪ್ರಸಾದ್ ಪೌಡೆಲ್​ ಅವರನ್ನು ಕಠ್ಮಂಡು ಬೀದಿಗಳಲ್ಲಿ ಅಟ್ಟಾಡಿಸಿ ಹಲ್ಲೆ ಮಾಡಿದ ವಿಡಿಯೋ ವೈರಲ್ ಆಗಿದೆ.

ಸರ್ಕಾರ ಸಾಮಾಜಿಕ ಮಾಧ್ಯಮಗಳ ಮೇಲಿನ ನಿಷೇಧವನ್ನು ತೆಗೆದುಹಾಕಬೇಕು ಮತ್ತು ಭ್ರಷ್ಟಾಚಾರವನ್ನು ಹತ್ತಿಕ್ಕಬೇಕು ಎಂಬ ಬೇಡಿಕೆಗಳೊಂದಿಗೆ ಸೋಮವಾರ ಪ್ರಾರಂಭವಾದ ಪ್ರತಿಭಟನೆಗಳು, ಸರ್ಕಾರ ಆದೇಶ ವಾಪಸ್ ಪಡೆದು ಜಾಲತಾಣಗಳು ಮರಳಿ ಬಂದ್ರು ಆಕ್ರೋಶ ಕಡಿಮೆಯಾಗುತ್ತಿಲ್ಲ.

65 ವರ್ಷದ ನೇಪಾಳ ಹಣಕಾಸು ಮಂತ್ರಿ ಬಿಷ್ಣು ಪ್ರಸಾದ್ ಪೌಡೆಲ್, ಕಠ್ಮಂಡುವಿನ ಬೀದಿಗಳಲ್ಲಿ ಓಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಅವರ ಹಿಂದೆ ಸಾವಿರಾರು ಜನ ಅಟ್ಟಾಡಿಸಿಕೊಂಡು ಹೋಗುತ್ತಿದ್ದಾರೆ. ಎದುರು ದಿಕ್ಕಿನಿಂದ ಬಂದ ಯುವ ಪ್ರತಿಭಟನಾಕಾರನೊಬ್ಬ ಸಚಿವರನ್ನು ಹಾರಿ ಒದ್ದು ಕೆಳಕ್ಕೆ ತಳ್ಳುತ್ತಾನೆ. ಸಮತೋಲನ ತಪ್ಪಿ ಪೌಡೆಲ್​ ಅವರು ಕೆಂಪು ಗೋಡೆಗೆ ಡಿಕ್ಕಿ ಹೊಡೆದಿದ್ದು, ಅಲ್ಲಿಂದ ಮತ್ತೆ ಎದ್ದು ರಸ್ತೆಯಲ್ಲಿ ಓಡುವುದು ವಿಡಿಯೋದಲ್ಲಿ ದಾಖಲಾಗಿದೆ.

30 ಮಿಲಿಯನ್ ಜನರಿರುವ ನೇಪಾಳದಲ್ಲಿ ಶುಕ್ರವಾರ ಸರ್ಕಾರವು 26 ನೋಂದಾಯಿಸದ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಿಗೆ ನಿರ್ಬಂಧ ಹೇರಿತು. ಫೇಸ್‌ಬುಕ್, ಯೂಟ್ಯೂಬ್ ಮತ್ತು ಎಕ್ಸ್ ಸೇರಿದಂತೆ ಹಲವಾರು ಸಾಮಾಜಿಕ ಮಾಧ್ಯಮ ಸೈಟ್‌ಗಳನ್ನು ವರ್ಕ್​ ಮಾಡಲಿಲ್ಲ.

ಶುಕ್ರವಾರದಿಂದ ಸಾಮಾನ್ಯ ನೇಪಾಳಿಗಳ ಹೋರಾಟಗಳನ್ನು ರಾಜಕಾರಣಿಗಳ ಮಕ್ಕಳು ಐಷಾರಾಮಿ ವಸ್ತುಗಳು ಮತ್ತು ದುಬಾರಿ ರಜೆಗಳನ್ನು ಪ್ರದರ್ಶಿಸುವುದರೊಂದಿಗೆ ಹೋಲಿಸುವ ವೀಡಿಯೊಗಳು ವೈರಲ್ ಆಗಿ ನಿಷೇಧವನ್ನು ಹಿಂಪಡೆಯಬೇಕು. ಪ್ರಧಾನಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದರು.

ಕಳೆದ ವರ್ಷ ತಮ್ಮ ಕಮ್ಯುನಿಸ್ಟ್ ಪಕ್ಷವು ಕೇಂದ್ರ-ಎಡ ನೇಪಾಳಿ ಕಾಂಗ್ರೆಸ್ ಜೊತೆ ಸಮ್ಮಿಶ್ರ ಸರ್ಕಾರವನ್ನು ರಚಿಸಿದ ನಂತರ ನಾಲ್ಕನೇ ಬಾರಿಗೆ ಪ್ರಧಾನಿಯಾಗಿ ಕೆ.ಪಿ. ಶರ್ಮಾ ಓಲಿ ಅಧಿಕಾರ ನಡೆಸುತ್ತಿದ್ದರು. ಸೋಷಿಯಲ್ ಮೀಡಿಯಾ ಬ್ಯಾನ್ ಮಾಡಿದ ಹಿನ್ನೆಲೆ ಯುವ ಪ್ರತಿಭಟನಾಕಾರರು ದೇಶಾದ್ಯಂತ ಪ್ರತಿಭಟನೆ ಆರಂಭಿಸಿದದರು. ಆರಂಭದಲ್ಲಿ ಪೊಲೀಸ್, ಸೇನೆ ಬಳಸಿ ಪ್ರತಿಭಟನೆ ಹತ್ತಿಕ್ಕಲು ನೋಡಿದ್ರೂ ಹೋರಾಟ ನಿಲ್ಲಲಿಲ್ಲ. ಗೋಲಿಬಾರ್ ನಡೆದು 19 ಮಂದಿ ಮೃತಪಟ್ಟರು. ಇಂದು ಅವರ ನಿವಾಸಕ್ಕೆ ನುಗ್ಗಿ ಬೆಂಕಿ ಹಚ್ಚಿದ್ದು, ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net