ನೇಪಾಳದಲ್ಲಿ ಹಿಂಸಾಚಾರ: ಪ್ರಧಾನಿ ರಾಜೀನಾಮೆ ಬಳಿಕ ಸಂಸತ್ತಿಗೆ ಬೆಂಕಿ ಇಟ್ಟ ಪ್ರತಿಭಟನಾಕಾರರು! |Violence in Nepal

Untitled design - 2025-09-09T170921.351
Published on

Violence in Nepal: ನೆರೆಯ ರಾಷ್ಟ್ರ ನೇಪಾಳದಲ್ಲಿ ಸರ್ಕಾರ ಸೋಷಿಯಲ್ ಮೀಡಿಯಾ ಬ್ಯಾನ್ ಮಾಡಿದ ಪರಿಣಾಮದ ಹಿನ್ನೆಲೆ ಶುರುವಾಗ ಜನರಲ್ -ಝೆಡ್ ಪ್ರತಿಭಟನೆ ಹಿಂಸಾಚಾರದ ಸ್ವರೂಪ ಪಡೆದಿದೆ. ಭಾರೀ ಪ್ರತಿಭಟನೆಯಲ್ಲಿ 20 ಜನರು ಬಲಿಯಾಗಿದ್ದು, ಪ್ರಧಾನಿ ಪ್ರಸಾದ್​ ಶರ್ಮಾ ಓಲಿ ರಾಜೀನಾಮೆ ನೀಡಿ ಪಾಲಾಯನಗೈದಿದ್ದಾರೆ. ಇದರ ನಡುವೆ ಇದೀಗ ಪ್ರತಿಭಟನೆಕಾರರು ಪಾರ್ಲಿಮೆಂಟ್​ ಕಟ್ಟಕ್ಕೆ ನುಗ್ಗಿ ಬೆಂಕಿ ಹಾಕಿದ್ದಾರೆ.ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಬೆಂಕಿ ಹೊತ್ತಿ ಉರಿಯುವ ವಿಡಿಯೋಗಳು ಹರಿದಾಡುತ್ತಿವೆ.

ಕರ್ಫ್ಯೂ ಧಿಕ್ಕರಿಸಿ, ಪ್ರತಿಭಟನಾಕಾರರು ದೇಶದ ಸಂಸತ್ತಿಗೆ ನುಗ್ಗಿ ಕಟ್ಟಡಕ್ಕೆ ಬೆಂಕಿ ಹಚ್ಚಿದರು ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ, ಇದಕ್ಕೂ ಮೊದಲು ಅವರು ದೇಶದ ಅತಿದೊಡ್ಡ ಪಕ್ಷವಾದ ನೇಪಾಳಿ ಕಾಂಗ್ರೆಸ್ ಕಚೇರಿ ಮತ್ತು ಹಲವಾರು ಪ್ರಮುಖ ರಾಜಕಾರಣಿಗಳ ನಿವಾಸಗಳಿಗೆ ನುಗ್ಗಿದ್ದರು ಎಂದು ವರದಿಯಾಗಿದೆ.

ನೇಪಾಳದಲ್ಲಿ 20 ಜನರ ಸಾವಿಗೆ ಕಾರಣವಾದ ಸರ್ಕಾರಿ ಭ್ರಷ್ಟಾಚಾರದ ವಿರುದ್ಧ ನಡೆದ ಮಾರಕ ಪ್ರತಿಭಟನೆಗಳ ನಂತರ, ಅವರ ಮೂವರು ಸಚಿವರು ರಾಜೀನಾಮೆ ನೀಡಿದ ನಂತರ, ಪ್ರಧಾನಿ ಖಡ್ಗ ಪ್ರಸಾದ್ ಶರ್ಮಾ ಓಲಿ ರಾಜೀನಾಮೆ ನೀಡಿದ್ದಾರೆ.

ಇನ್ನು ಪ್ರತಿಭಟನೆ ಹಿಂಸಾಚಾರ ಸ್ಪರೂಪ ಹಿನ್ನೆಲೆ ಭಾರತದಿಂದ ಕಠ್ಮಂಡುವಿಗೆ ಹೊರಡಬೇಕಿದ್ದ ನಾಲ್ಕು ವಿಮಾನಗಳನ್ನು ಏರ್​ ಇಂಡಿಯಾ ರದ್ದುಗೊಳಿಸಿದೆ ಎಂದು ಮಂಗಳವಾರ(ಸೆ. 09) ವರದಿಯಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net