ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿರುದ್ಧ ಬೀದಿಗಿಳಿದ ಕಾಲೇಜು ಯುವತಿಯರು..!

afghanistan protest
Published on

ಕಾಬೂಲ್:

ಕಾಬೂಲ್: ಅಮೆರಿಕ ಸೇನೆ ಅಫ್ಘಾನಿಸ್ತಾನದಲ್ಲಿದಲ್ಲಿ ಮಣ್ಣುಮುಕ್ಕಿ ವಾಪಸ್ ಹೋದ ಮೇಲೆ ಅಲ್ಲಿ ತಾಲಿಬಾನಿಗಳ ಅಟ್ಟಹಾಸ ಶುರುವಾಗಿತ್ತು. ಆ ಸಂದರ್ಭದಲ್ಲಿ ಪರಿಸ್ಥಿತಿ ಎಷ್ಟು ಬಿಗಡಾಯಿಸಿತ್ತು ಎಂದರೆ ‘ಹೀಗಾದರೂ ಅವರ ಮಕ್ಕಳು ಉಳಿದುಕೊಳ್ಳಲಿ, ಈ ಕಷ್ಟ ನಮಗೇ ಇರಲಿ’ ಎಂದುಕೊಂಡು ಮಹಿಳೆಯರು ಚಿಕ್ಕ ಚಿಕ್ಕ ಹಸುಳೆಗಳನ್ನು ಅಮೆರಿಕ ಸೈನ್ಯದ ಕ್ಯಾಂಪ್ ಒಳಕ್ಕೆ ಎಸೆಯುತ್ತಿದ್ದರು. ಆದರೆ ದುರಂತವೆಂದರೆ ಕ್ಯಾಂಪ್ ನ ಆ ಬದಿಗೂ ಮುಳ್ಳು ತಂತಿ ಇದ್ದ ವೈಯರ್ ಗಳೇ ಇದ್ದದ್ದು. ಅದೇ ಸಂದರ್ಭದಲ್ಲಿ ಅಫ್ಘಾನಿಸ್ತಾನದಲ್ಲಿ ದಿಂದ ಹೊರಡುತ್ತಿದ್ದ ವಿಮಾನಗಳ ರೆಕ್ಕೆ ಮೇಲೆ ಕುಳಿತುಕೊಂಡು ಜನ ಅಲ್ಲಿಂದ ಪಾರಾಗಲು ಪ್ರಯತ್ನಿಸಿ ಪ್ರಾಣ ಕಳೆದುಕೊಂಡದ್ದು.

ಅದಾದ ಮೇಲೆ ಮಹಿಳೆಯರ ಹಕ್ಕನ್ನು ಒಂದೊಂದಗಿಯೇ ತಾಲಿಬಾನ್ ಕಿತ್ತುಕೊಳ್ಳುತ್ತಾ ಬಂದಿತ್ತು. ಈ ವಿರುದ್ಧ ಅಫ್ಘಾನಿಸ್ತಾನದಲ್ಲಿ ದಲ್ಲಿ ತಾಲಿಬಾನ್ ವಿರುದ್ಧ ಮಹಿಳೆಯರು ಬೀದಿಗಿಳಿದು ಆಕ್ರೋಶ ಹೊರಹಾಕಿದ್ದಾರೆ! ಇದಕ್ಕೆ ರುವಾರಿ ಕಾಲೇಜು ಹುಡುಗಿಯರು! ಇವರು ಇದೇ ಮೊದಲ ಬಾರಿಗೆ ತಾಲಿಬಾನ್ ವಿರುದ್ಧ ಬೀದಿಗೆ ಇಳಿದಿದ್ದಾರೆ.

ಇತ್ತೀಚೆಗೆ ತಾಲಿಬಾನ್ ಮಹಿಳೆಯರ ಉನ್ನತ ಶಿಕ್ಷಣವನ್ನೂ ನಿಷೇಧ ಮಾಡಿತ್ತು. ಈ ವಿರುದ್ಧ ಮಹಿಳೆಯರು ಅಸಮಾಧಾನವನ್ನು ವ್ಯಕ್ತಪಡಿಸಿದ್ದು ಬೀದಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ. ‘ತಾಲಿಬಾನಿಗಳು ನಮ್ಮ ಶಾಲೆಗಳನ್ನು ಮುಚ್ಚಿದಾಗಲೂ ಜಗತ್ತು ಮೌನವಾಗಿತ್ತು. ಈಗ ನಮ್ಮ ಪಾಲಿಗೆ ವಿಶ್ವವಿದ್ಯಾಲಯಗಳನ್ನು ಬಂದ್ ಮಾಡಿದ್ದಾರೆ. ಈಗಲೂ ಇಡೀ ಜಗತ್ತು ಮೌನವಾಗಿದೆ’  ಎಂದು ಮಹಿಳೆಯರು ಆಕ್ರೋಶ ಹೊರ ಹಾಕಿದ್ದಾರೆ. ಇನ್ನೂ ಮುಂದಕ್ಕೆ ಹೋಗಿರುವ ಮಹಿಳೆಯರು ‘ಇದೇ ರೀತಿ ಮುಂದುವರಿದರೆ ನಾವು ಆತ್ಮಹತ್ಯೆ  ಮಾಡಿಕೊಳ್ಳಬೇಕಾಗುತ್ತದೆ’ ಎಂದೂ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net