ಫಾಸ್ಟ್ ಫುಡ್ ಬೌದ್ಧಿಕ ಸಾಮರ್ಥ್ಯವನ್ನೂ ಫಾಸ್ಟ್ ಆಗಿ ಕುಂಠಿತಗೊಳಿಸುತ್ತೆ!

fast foof
Published on

ಬೆಂಗಳೂರು: ಯಾರಿಗೆಲ್ಲ ಪಿಜ್ಜಾ-ಬರ್ಗರ್, ಗೋಬಿ ಮಂಚೂರಿಯನ್ ಮುಂತಾದ ರುಚಿಕರ ತಿನಿಸು ಇಷ್ಟ ಇಲ್ಲ ಹೇಳಿ? ಪ್ರತಿಯೊಬ್ಬರಿಗೂ ಒಮ್ಮೆಯಾದರೂ ಈ ತಿನಿಸುಗಳನ್ನು ತಿನ್ನಬೇಕು ಎಂದು ಎನಿಸಿರುತ್ತದೆ. ಆದರೆ ಈ ತಿನಿಸುಗಳಲ್ಲಿ ಬಳಸುವುದು ಪ್ರೊಸೆಸ್ಡ್ ಆಹಾರ ಪದಾರ್ಥಗಳನ್ನು. ಇವು ಹೊಟ್ಟೆಗೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದನ್ನು ಈಗಾಗಲೇ ಅನೇಕ ಬಾರಿ ಕೇಳಿದ್ದೇವೆ? ಈಗಾಗಲೇ ಹಲವಾರು ಅಧ್ಯಯನಗಳು ಸಂಸ್ಕರಿಸಿದ ಆಹಾರಗಳ ಸೇವನೆಯಿಂದ ಉರಿಯೂತದ ಕರುಳಿನ ಕಾಯಿಲೆ (ಐಬಿಡಿ), ಕ್ಯಾನ್ಸರ್, ಬೊಜ್ಜು ಮುಂತಾದ ಆರೋಗ್ಯ ಸಮಸ್ಯೆಗೆ ಕಾರಣ ಆಗುತ್ತೆ ಎಂದು ಹೇಳಿವೆ. ಈಗ ಹೇಳುತ್ತಿರುವುದು ಹೊಸ ಸಂಗತಿಯನ್ನು.

ಇತ್ತೀಚೆಗೆ ಬಿಡುಗಡೆ ಆಗಿರುವ ಹೊಸ ಅಧ್ಯಯನ, ಈ ಸಿದ್ಧ ಆಹಾರಗಳು ವಯಸ್ಸಾದಂತೆ ಅರಿವಿನ ಕುಸಿತದ ಅಪಾಯಕ್ಕೆ ಕಾರಣವಾಗಬಹುದು ಎಂದು ಕಂಡುಹಿಡಿದಿದೆ. ಅದಲ್ಲದೇ ಈ ಪರಿಣಾಮ ಉಂಟಾಗಲು ನೀವು ಹೆಚ್ಚು ಫಾಸ್ಟ್ ಫುಡ್ ತಿನ್ನಬೇಕಾಗಿಲ್ಲ! ಅಧ್ಯಯನದ ಪ್ರಕಾರ, ಪ್ರತಿದಿನ ಸಾಮಾನ್ಯವಾಗಿ ಜನ ಸೇವಿಸುವ 2,000 ಕ್ಯಾಲೊರಿಗಳಲ್ಲಿ ಸಂಸ್ಕರಿಸಿದ ಆಹಾರದ ಪ್ರಮಾಣ ಸುಮಾರು 20% ಆಗಿರುತ್ತದೆಯಂತೆ. ಇಷ್ಟು ಪ್ರಮಾಣ ಸಾಮಾನ್ಯ ಮೆಕ್ಡೊನಾಲ್ಡ್ ಚೀಸ್ ಬರ್ಗರ್ ಮತ್ತು ಫ್ರೆಂಚ್ ಫ್ರೈಗಳಿಗೆ ಸಮನಾಗಿದೆಯಂತೆ

ಇತ್ತೀಚಿನ ಅಧ್ಯಯನವು ಬ್ರೆಜಿಲಿಯನ್ ಲಾಂಗಿಟ್ಯೂಡಿನಲ್ ಸ್ಟಡಿಯಲ್ಲಿ ವಯಸ್ಕರ ಆರೋಗ್ಯದ ಮೇಲೆ ನಡೆದಿತ್ತು. ಇದರಲ್ಲಿ ಸುಮಾರು 10,775 ಜನ ಸ್ವಯಂಸೇವಕರು ಭಾಗಿ ಆಗಿದ್ದರು.

ಈ ಅಧ್ಯಯನದಲ್ಲಿ ಅತಿ ಕಡಿಮೆ ಪ್ರಮಾಣದ ಸಂಸ್ಕರಿತ ಆಹಾರಗಳನ್ನು ಸೇವಿಸಿದ ಜನರಿಗೆ ಹೋಲಿಸಿದರೆ, ಹೆಚ್ಚು ಸೇವಿಸಿದವರಲ್ಲಿ ಶೇಕಡ 28% ರಷ್ಟು ವೇಗದಲ್ಲಿ ಅವರ ಪರಿಸರದ ಅವೇರ್ನೆಸ್ ಅಥವಾ ಅರಿವಿನ ಮಟ್ಟ ಕಡಿಮೆಯಾಗಿತ್ತು.  ಜೊತೆಗೆ ಇವರ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಕೂಡ ಶೆಕಡ 25% ರಷ್ಟು ವೇಗದಲ್ಲಿ ಕಡಿಮೆಯಾಗುತ್ತಿತ್ತು. ಈ ಅಧ್ಯಯನದಲ್ಲಿ ಫಾಸ್ಟ್ ಫುಡ್ ನಮ್ಮ ಬೌದ್ಧಿಕ ಹಾಗೂ ಮಾನಸಿಕವನ್ನು ಕೂಡ ಫಾಸ್ಟ್ ಆಗಿಯೇ ಕಡಿಮೆ ಮಾಡುತ್ತೆ ಎನ್ನುವುದಂತೂ ಸ್ಪಷ್ಟವಾಗಿದೆ!

ಈ ಅಧ್ಯಯನವನ್ನು JAMA ನ್ಯೂರಾಲಜಿ ಜರ್ನಲ್ ನಲ್ಲಿ ಪ್ರಕಟಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net