ಕೂಲಿ ಕೆಲಸಕ್ಕಾಗಿ ಜಾರ್ಖಂಡ್​ನಿಂದ ಕರೆತಂದಿದ್ದ ಮಕ್ಕಳ ರಕ್ಷಣೆ

Railway Police
Published on

ಬೆಂಗಳೂರು: ಜಾರ್ಖಂಡ್ ರಾಜ್ಯದಿಂದ ಕೂಲಿ ಕೆಲಸಕ್ಕೆ ಕರೆತಂದ 11 ಅಪ್ರಾಪ್ತ ಬಾಲಕಿಯರು ಮತ್ತು ಒಬ್ಬ ಅಪ್ರಾಪ್ತ ಬಾಲಕನನ್ನು ಬೆಂಗಳೂರು ವಿಭಾಗದ ಆರ್‌ಪಿಎಫ್ ಮಾನವ ಕಳ್ಳಸಾಗಣೆ ತಡೆ ಘಟಕದಿಂದ ರಕ್ಷಣೆ ಮಾಡಲಾಗಿದೆ.

ಆರ್‌ಪಿಎಫ್ ಅಧಿಕಾರಿಗಳು ಕೆಎಸ್‌ಆರ್‌ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಇಬ್ಬರು ವೃದ್ಧರೊಂದಿಗೆ ಅನುಮಾನಾಸ್ಪದವಾಗಿ ಅಪ್ರಾಪ್ತ ವಯಸ್ಸಿನ ಮಕ್ಕಳು ಕುಳಿತಿರುವುದನ್ನು ಕಂಡಿದ್ದಾರೆ. ಕೂಡಲೇ ಅನುಮಾನ ಬಂದ ಅಧಿಕಾರಿಗಳು ಇಬ್ಬರು ವೃದ್ಧರನ್ನು ವಿಚಾರಿಸಿದ್ದಾರೆ.

ಆರ್‌ಪಿಎಫ್ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಇಬ್ಬರು ವೃದ್ಧರು ಸೂಕ್ತ ಉತ್ತರ ನೀಡಲ್ಲ. ಈ ವೇಳೆ ವೃದ್ಧರಿಬ್ಬರು ಕೂಲಿ ಕೆಲಸಕ್ಕಾಗಿ ಮಕ್ಕಳನ್ನು ಕರೆತಂದಿರುವುದು ಗೊತ್ತಾಗಿದೆ. ಕೂಡಲೇ ಎಚ್ಚೆತ್ತ ಅಧಿಕಾರಿಗಳು ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ರಕ್ಷಿಸಿದ್ದಾರೆ. ನಂತರ ಬಾಲಕಿಯರನ್ನು ಬೆಂಗಳೂರಿನ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿ, ರೈಲ್ವೆ ಚೈಲ್ಡ್ ಲೈನ್​ಗೆ ಹಸ್ತಾಂತರಿಸಲಾಗಿದೆ. ಬಾಲಕನನ್ನು ಬಾಸ್ಕೋ ಮಕ್ಕಳ ಆಶ್ರಯಕ್ಕೆ ದಾಖಲಿಸಲಾಗಿದೆ.

ಸದ್ಯ ಮಕ್ಕಳನ್ನು ಕರೆದುಕೊಂಡು ಬಂದಿದ್ದಾರೆ ಎನ್ನಲಾಗಿರುವ ಇಬ್ಬರು ವೃದ್ಧರನ್ನು ರೈಲ್ವೇ ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ರಕ್ಷಿಸುವಲ್ಲಿ ರೈಲ್ವೇ ರಕ್ಷಣಾದಳದ ಸಹಾಯಕ. ಸಬ್-ಇನ್ಸ್‌ಪೆಕ್ಟರ್ ವಿ.ಭಾಗ್ಯಲಕ್ಷ್ಮಿ ಹಾಗೂ ಮಹಿಳಾ ಕಾನ್ಸ್‌ಟೇಬಲ್ ನವ್ಯಾ ಕೆ.ಎಲ್ ಯಶಸ್ವಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net