ವೇಶ್ಯಾವಾಟಿಕೆ ದಂಧೆ; ಇಬ್ಬರಿಗೆ 8 ವರ್ಷ ಜೈಲು

court
Published on

ಬೆಂಗಳೂರು: ಹೊರರಾಜ್ಯದ ಹೆಣ್ಣು ಮಕ್ಕಳಿಗೆ ನೌಕರಿ ಆಮಿಷವೊಡ್ಡಿ ಕರೆತಂದು ವೇಶ್ಯಾವಾಟಿಕೆ ದಂಧೆಗೆ ದೂಡಿದ್ದ ಇಬ್ಬರು ಅಪರಾಧಿಗಳಿಗೆ ತಲಾ 8 ವರ್ಷ ಜೈಲು ಶಿಕ್ಷೆ ವಿಧಿಸಿ 71ನೇ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.

ಆರ್.ಟಿ.ನಗರದ ಶೇಕ್ ರಿಯಾಜುದ್ದೀನ್ ಮೊಹಮ್ಮದ್ ಮತ್ತು ಎಸ್.ಎಸ್. ದೇವಿದಾಸ್ ಅಪರಾಧಿಗಳು. 71ನೇ ಸೆಷನ್ಸ್ ನ್ಯಾಯಾಲಯದ ನ್ಯಾಯಧೀಶ ಬಾಲಚಂದ್ರ ಭಟ್ ತೀಪು ನೀಡಿದ್ದಾರೆ. ಸಂತ್ರಸ್ತೆ ಪರವಾಗಿ ಸರ್ಕಾರಿ ಅಭಿಯೋಜಕಿ ಎಚ್.ಆರ್. ಸತ್ಯವತಿ ವಾದ ಮಂಡಿಸಿದ್ದರು.

ಬೆಂಗಳೂರಿನಲ್ಲಿ ಲೈವ್ ಬ್ಯಾಂಡ್‌ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಪಂಜಾಬ್ ಮತ್ತು ಹಿಮಾಚಲ್ ಪ್ರದೇಶದ ಯುವತಿಯರಿಗೆ ಆಮಿಷವೊಡ್ಡಿ ಮಾನವ ಸಾಗಾಣೆ ಮಾಡಿಕೊಂಡು ಅಪರಾಧಿಗಳು ಬಂದಿದ್ದರು. ಬಳಿಕ ಆರ್.ಟಿ.ನಗರದ ಆರ್.ಟಿ.ನಗರದಲ್ಲಿ ಮನೆಯಲ್ಲಿ ಕೂಡಿ ಹಾಕಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಆರ್.ಟಿ.ನಗರ ಪೊಲೀಸರು ದಾಳಿ ನಡೆಸಿ ಯುವತಿಯನ್ನು ರಕ್ಷಣೆ ಮಾಡಿ ಶೇಕ್ ಮತ್ತು ದೇವಿದಾಸ್‌ನ್ನು ಬಂಧಿಸಿದ್ದರು. ತನಿಖೆ ನಡೆಸಿ ಪೊಲೀಸರು ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದು, ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ತೀರ್ಪು ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net