ದೂರದರ್ಶನದ ಮೊದಲ ಇಂಗ್ಲೀಷ್ ಸುದ್ದಿ ವಾಚಕಿ ಗೀತಾಂಜಲಿ ಅಯ್ಯರ್ ನಿಧನ

Gitanjali Aiyar
Published on

ನವದೆಹಲಿ: ದೇಶದ ಮೊಟ್ಟ ಮೊದಲ ಇಂಗ್ಲೀಷ್ ಸುದ್ದಿ ನಿರೂಪಕಿ ಗೀತಾಂಜಲಿ ಅಯ್ಯರ್ ಅವರು ನಿಧನರಾಗಿದ್ದಾರೆ. 1971ರಲ್ಲಿ ದೂರದರ್ಶನ ಸೇರಿದ್ದ ಅವರು, 30 ವರ್ಷಗಳ ಕಾಲ ನಿರೂಪಕಿಯಾಗಿ ರಾಷ್ಟ್ರೀಯ ಸುದ್ದಿ ವಾಚನದ ಮೂಲಕ ಜನರಿಗೆ ಚಿರಪರಿಚಿತರಾಗಿದ್ದರು.

ಮೂರು ದಶಕಗಳ ವೃತ್ತಿ ಜೀವನದಲ್ಲಿ ನಾಲ್ಕು ಬಾರಿ ಅತ್ಯತ್ತಮ ನಿರೂಪಕಿ ಪ್ರಶಸ್ತಿ ಪಡೆದುಕೊಂಡಿದ್ದರು. ವೃತ್ತಿ ಹಾಗೂ ಸಾಧನೆಗಳಿಗಾಗಿ 1989ರಲ್ಲಿ ಮಹಿಳೆಯರಿಗಾಗಿ ನೀಡುವ 'ಇಂದಿರಾ ಗಾಂಧಿ ಪ್ರಿಯದರ್ಶಿನಿ' ಪ್ರಶಸ್ತಿಗೆ ಭಾಜನರಾಗಿದ್ದರು. ಜತೆಗೆ 'ಖಂಡಾನ್' ಎಂಬ ಧಾರಾವಾಹಿಯಲ್ಲಿ ನಟಿಸಿದ್ದರು.

ದೂರದರ್ಶನದಲ್ಲಿ ಸುದ್ದಿ ನಿರೂಪಕಿಯಾಗಿದ್ದ ಗೀತಾಂಜಲಿ ಅಯ್ಯರ್, ನಿವೃತ್ತಿಯ ನಂತರ ಗೀತಾಂಜಲಿ ಕಾರ್ಪೊರೇಟ್ ಸಂವಹನ, ಸರ್ಕಾರಿ ಸಂಪರ್ಕ ಮತ್ತು ಮಾರ್ಕೆಟಿಂಗ್‌ ಕ್ಷೇತ್ರ ಪ್ರವೇಶಿಸಿದ್ದರು. ಜತೆಗೆ ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ(CII)ಯಲ್ಲಿ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net