More

    1.6 ಕೋಟಿ ರೂ. ತೆರಿಗೆ ಪಾವತಿಸುವಂತೆ 23 ಬಾರಿ ನೋಟಿಸ್‌; ಕಂಗಾಲಾದ ರೈತ!

    ಉತ್ತರ ಪ್ರದೇಶ: ರೈತರೊಬ್ಬರಿಗೆ 1.6 ಕೋಟಿ ರೂಪಾಯಿ ತೆರಿಗೆ ಬಾಕಿ ಪಾವತಿಸುವಂತೆ ಕಳೆದ ಒಂದು ವರ್ಷದಲ್ಲಿ ಆದಾಯ ತೆರಿಗೆ ಇಲಾಖೆ 23 ಬಾರಿ ನೋಟಿಸ್‌ ನೀಡಿರುವ ಘಟನೆ ಫಲೋಡಾ ಗ್ರಾಮದಲ್ಲಿ ನಡೆದಿದೆ. ಅಂತಿಮವಾಗಿ ಒಂದಷ್ಟು ತನಿಖೆ ನಡೆದ ಬಳಿಕ ಸಮಸ್ಯೆ ಇತ್ಯರ್ಥವಾಗಿದೆ.

    ಮುಜಾಫರ್‌ನಗರ ಜಿಲ್ಲೆಯ ಫಲೋಡಾ ಗ್ರಾಮದ ನಿವಾಸಿ ಉಪದೇಶ ತ್ಯಾಗಿ ಎಂಬ ರೈತರೊಬ್ಬರಿಗೆ 2023ರ ಮಾರ್ಚ್‌ 22ರಂದು ಐಟಿ ಇಲಾಖೆಯಿಂದ ನೋಟಿಸ್‌ ಬಂದಿದೆ. ಕೋಟಕ್‌ ಮಹೀಂದ್ರಾ ಬ್ಯಾಂಕ್​ನಲ್ಲಿನ ತಮ್ಮ ಖಾತೆಯಿಂದ ನಡೆದ 4 ಕೋಟಿ 6 ಲಕ್ಷ ರೂ.ಗಳ ವಹಿವಾಟಿನ ಬಗ್ಗೆ ವರದಿ ನೀಡಬೇಕು. ಜತೆಗೆ 1.6 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿತ್ತು.

    ಇದನ್ನೂ ಓದಿ: ಕೆ.ಜಿ.ಗಟ್ಟಲೆ ಬಂಗಾರ ಧರಿಸಿ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುವುದು ಈ ಕುಟುಂಬದ ಸಂಪ್ರದಾಯವಂತೆ!

    ಐಟಿ ಅಧಿಕಾರಿಗಳು ಕಳುಹಿಸಿದ್ದ ನೋಟಿಸ್ ನೋಡಿ ಒಂದು ಕ್ಷಣ ಕಂಗಾಲಾಗಿ ಹೋದೆ. ನಾನೊಬ್ಬ ಸಣ್ಣ ರೈತ. ಹೇಗೆ ಇಷ್ಟೊಂದು ಮೊತ್ತದ ತೆರಿಗೆ ಹೊಂದಲು ಸಾಧ್ಯ ಎಂದು ಚಿಂತೆಗೀಡು ಮಾಡಿತು. ಕೊನೆಗೆ ಬ್ಯಾಂಕ್ ವ್ಯವಹಾರಗಳ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದಾಗ ಅವರೂ ಸರಿಯಾದ ಉತ್ತರ ನೀಡಿಲ್ಲ. ಇದರಿಂದ ಪ್ರತಿ ಎರಡು ತಿಂಗಳಿಗೊಮ್ಮೆ ಐಟಿ ಇಲಾಖೆಯಿಂದ ನೋಟಿಸ್‌ ಪಡೆಯುತ್ತಿದ್ದೆ. ಅಂತಿಮವಾಗಿ ತೆರಿಗೆ ಕಟ್ಟುವಂತೆ ಐಟಿ ಅಧಿಕಾರಿಗಳು ಒತ್ತಡ ಹಾಕಲು ಪ್ರಾರಂಭಿಸಿದರು. ಎರಡು-ಮೂರು ಕಾರುಗಳಲ್ಲಿ ಅಧಿಕಾರಿಗಳು ಮನೆಗೆ ಬಂದು ಪರಿಶೀಲನೆಯನ್ನೂ ನಡೆಸಿದ್ದರು.

    ಕೊನೆಗೆ ರಾಜಕೀಯ ಮುಖಂಡರೊಬ್ಬರ ಸಹಾಯದೊಂದಿಗೆ ಮುಜಾಫರ್‌ನಗರ ಆದಾಯ ತೆರಿಗೆ ಅಧಿಕಾರಿ ರಜನೀಶ್ ರಸ್ತೋಗಿ ಅವರನ್ನು ಭೇಟಿಯಾಗಿ ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ವಿವರಿಸಿದೆ. ಅವರು ಪರಿಶೀಲಿಸಿ ಶೀಘ್ರದಲ್ಲೇ ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು ಎಂದು ರೈತ ತ್ಯಾಗಿ ಹೇಳಿಕೊಂಡಿದ್ದಾನೆ.

    ಇದನ್ನೂ ಓದಿ: VIDEO | ಸಿನಿಮಾ ಸ್ಟೈಲ್​ನಲ್ಲಿ ಮದುವೆ ಹೆಣ್ಣನ್ನು ಬೈಕ್​ನಲ್ಲಿ ಹೊತ್ತೊಯ್ದ ಕುಟುಂಬಸ್ಥರು! ಯಾಕೆ ಅನ್ನೋದೇ ಕುತೂಹಲ

    ‘ಪಾನ್ ಕಾರ್ಡ್‌ನ ಕೆಲವು ತಪ್ಪಾದ ವಿವರಗಳಿಂದ ರೈತ ತ್ಯಾಗಿ ಸಮಸ್ಯೆ ಎದುರಿಸುವಂತಾಗಿದೆ. ಬ್ಯಾಂಕ್ ಪೋರ್ಟಲ್‌ನಲ್ಲಿ ತಪ್ಪಾದ ವಿವರಗಳನ್ನು ಅಪ್‌ಲೋಡ್ ಮಾಡಿದ್ದು, ನಮೂದಿಸಿದ ಪ್ಯಾನ್ ಸಂಖ್ಯೆ ಅಭಿಷೇಕ್ ಎಂಬ ವ್ಯಕ್ತಿಗೆ ಸೇರಿತ್ತು. ಹೀಗಾಗಿ ರೈತ ಉಪದೇಶ ತ್ಯಾಗಿ ಅವರಿಗೆ 1.6 ಕೋಟಿ ರೂಪಾಯಿ ತೆರಿಗೆ ಪಾವತಿಸುವಂತೆ ನೋಟಿಸ್ ಬಂದಿದೆ. ಈ ಬಗ್ಗೆ ಆದಾಯ ತೆರಿಗೆ ಅಧಿಕಾರಿ ರಜನೀಶ್ ರಸ್ತೋಗಿ ಪ್ರತಿಕ್ರಿಯಿಸಿ, ಪ್ರಕರಣದ ಬಗ್ಗೆ ಸೂಕ್ತ ಕ್ರಮ ಕೈಗೊಂಡಿದ್ದೇವೆ. ಶೀಘ್ರದಲ್ಲೇ ಆಗಿರುವ ತಪ್ಪನ್ನು ಸರಿಪಡಿಸಲಾಗುವುದು ಎಂದು ಹೇಳಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts