More

  1 ದಿನ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಯುವಕ ಇನ್ನಿಲ್ಲ!

  ಛತ್ತೀಸ್​ಗಢ: 24 ಗಂಟೆಗಳ ಕಾಲ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಶೈಲೇಂದ್ರ ಧ್ರುವ್(18) ಗುಣಪಡಿಸಲಾಗದ ಪ್ರೊಜೆರಿಯಾ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಗರಿಯಾಬಂದ್ ಗ್ರಾಮದ ಮೆಡ್ಕಿ ದಬ್ರಿ ಗ್ರಾಮದ ನಿವಾಸಿಯಾಗಿದ್ದ ಶೈಲೇಂದ್ರನಿಗೆ ಬಾಲ್ಯದಿಂದಲೂ ಜಿಲ್ಲಾಧಿಕಾರಿ ಆಗಬೇಕೆಂಬ ಕನಸಿತ್ತು.

  ಗುಣಪಡಿಸಲಾಗದ ಪ್ರೊಜೆರಿಯಾ ಕಾಯಿಲೆಗೆ ತುತ್ತಾಗಿದ್ದ ಶೈಲೇಂದ್ರ ಅವರ ಕನಸು ನನಸು ಮಾಡಲೆಂದು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರನ್ನು 2021ರಲ್ಲಿ ಒಂದು ದಿನ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಿದ್ದರು. ಅಲ್ಲದೇ ತಮ್ಮ ಮನೆಗೆ ಆಹ್ವಾನಿಸಿ ಜತೆಗೆ ಕೂತು ಊಟ ಮಾಡಿದ್ದರು.

  ಇದನ್ನೂ ಓದಿ: ನೀವು ದಿನಚರಿ ಹೇಗೆ ಪ್ರಾರಂಭಿಸುತ್ತೀರಿ? ಸ್ಮೃತಿ ಇರಾನಿ ನೀಡಿದ ಸಲಹೆ ಹೀಗಿದೆ…

  ಶೈಲೇಂದ್ರ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ್ದು, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣ ಹೊಂದಿದ್ದ. ಮುಂದೆಯೂ ಕಾಲೇಜಿಗೆ ಹೋಗಬೇಕೆಂದು ಬಯಸಿದ್ದ. ಆದರೆ ಅವರ ದೇಹ ಬೆಂಬಲ ಕೊಡುತ್ತಿರಲಿಲ್ಲ. ಪ್ರೊಜೆರಿಯಾ ಕಾಯಿಲೆಯಿಂದಾಗಿ 18 ವರ್ಷಕ್ಕೇ ದೇಹ 70 ವರ್ಷದ ಮುದುಕನಂತೆ ಕಾಣುತ್ತಿತ್ತು.

  ಶೈಲೇಂದ್ರ ಅವರ ನಿಧನಕ್ಕೆ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಸಂತಾಪ ವ್ಯಕ್ತಪಡಿಸಿದ್ದಾರೆ. ‘ಬೆಳಿಗ್ಗೆ ದುಃಖದ ಸುದ್ದಿ ತಿಳಿಯಿತು. ಆತನಿಗಿದ್ದ ಜಿಲ್ಲಾಧಿಕಾರಿ ಆಗಬೇಕೆಂಬ ಕನಸನ್ನು ಪೂರೈಸಿದ್ದೇವೆ. ಆದರೆ ದೇವರಿಗೆ ಬೇರೆ ಆಸೆ ಇತ್ತು. ದೇವರು ಅವನನ್ನು ನೋಡಿಕೊಳ್ಳಲಿ, ಕುಟುಂಬಕ್ಕೆ ಧೈರ್ಯ ಸಿಗಲಿ’ ಎಂದು ಪ್ರತಿಕ್ರಿಯಿಸಿದ್ದಾರೆ.

  ರಾಜ್ಯೋತ್ಸವ ರಸಪ್ರಶ್ನೆ - 21

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts