ಹೃದಯಾಘಾತ: ಹಿರಿಯ ನಿರ್ಮಾಪಕ ನಿತಿನ್​ ಮನ್​ಮೋಹನ್​ ನಿಧನ

Nitin Manmohan
Published on

ಮುಂಬೈ: ಬಾಲಿವುಡ್​ನ ಹಿರಿಯ ನಿರ್ಮಾಪಕ ನಿತಿನ್ ಮನ್​ಮೋಹನ್(64) ಅವರು ತೀವ್ರ ಹೃದಯಾಘಾತದಿಂದ ಗುರುವಾರ ನಿಧನರಾದರು.

ಬಾಘಿ, ಲಾಡ್ಲಾ ಸೇರಿಂದಂತೆ ಹಲವು ಸೂಪರ್​ಹಿಟ್​ ಚಿತ್ರಗಳನ್ನು ನಿರ್ಮಿಸಿದ್ದ ನಿತಿನ್ ಅವರು ಬಾಲಿವುಡ್ ನಟ, ದಿ. ಮನ್​ಮೋಹನ್ ಅವರ ಮಗ. ಡಿ.24ರಂದು ನಿತಿನ್​ ಹೃದಯಾಘಾತಕ್ಕೆ ಒಳಗಾಗಿದ್ದರು. ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ನಿನ್ನೆ(ಬುಧವಾರ) ರಾತ್ರಿ ತೀವ್ರ ಹೃದಯಾಘಾತವಾಗಿದ್ದು ಗಂಭೀರ ಸ್ಥಿತಿಯಲ್ಲಿದ್ದ ನಿತಿನ್​ ಅವನ್ನ ನವಿ ಮುಂಬೈನ ಕೋಕಿಲಾಬೆನ್ ಧೀರೂಬಾಯಿ ಅಂಬಾನಿ ಆಸ್ಪತ್ರೆಗೆ ಸ್ಥಳಾಂತರಿಲಾಗಿತ್ತು. ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಯಿತ್ತಾದರೂ ಫಲಿಸದೆ ಗುರುವಾರ ಕೊನೆಯುಸಿರೆಳೆದರು. ನಿತಿನ್​ರ ನಿಧನದ ಸುದ್ದಿ ಕೇಳಿ ಕುಟುಂಬಸ್ಥರು ಮತ್ತು ಚಿತ್ರರಂಗ ಕಂಬನಿ ಮಿಡಿದಿದೆ (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net