

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಸಹಚರರು ಪರಪ್ಪನ ಅಗ್ರಹಾರ ಸೇರಿದ್ದು, ಆರೋಪಿಗಳು ಜೈಲಿನಲ್ಲಿ ದಿನ ದೂಡುತ್ತಿದ್ದಾರೆ. ಇತ್ತ ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರೆಸಿದ್ದು, ನಿಜಜೀವನದಲ್ಲಿ ಮಾದರಿಯಾಗಬೇಕಿದ್ದ ಸ್ಟಾರ್ನಟನೊಬ್ಬನ ಈ ಕೃತ್ಯ ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಟ-ನಟಿಯರು ದರ್ಶನ್ಗೆ ಬೆಂಬಲ ಸೂಚಿಸುತ್ತಿದ್ದು, ದಾಸನನ್ನು ಭೇಟಿ ಮಾಡಲು ಜೈಲಿಗೆ ಬರುತ್ತಿದ್ದಾರೆ. ಇನ್ನೂ ಈ ಕುರಿತು ಮಾತನಾಡಿರುವ ನಿರ್ಮಾಪಕ ಕೆ. ಮಂಜು ನಟ ದರ್ಶನ್ ಪರ ಬ್ಯಾಟ್ ಬೀಸಿದ್ದು, ದರ್ಶನ್ ಹೊರಬರದಂತೆ ರಾಜಕೀಯ ನಾಯಕರ ಕೈವಾಡ ಇದೆ ಎಂದು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿದ ನಿರ್ಮಾಪಕ ಕೆ. ಮಂಜು, ನಾನು ಲಂಕೇಶ್ ಪತ್ರಿಕೆ ಸಿನಿಮಾ ನಿರ್ಮಿಸಿದಾಗ ನೋಡಿದ ದರ್ಶನ್ ಹೇಗಿದ್ದರೋ ಈಗಲೂ ಹಾಗೆಯೇ ಇದ್ದಾರೆ. ತುಂಬಾ ಬಡತನದಿಂದ ಬಂದ ಹುಡುಗ ಆತ ಕೆಟ್ಟವನಲ್ಲ. ನನ್ನಿಂದ ಒಳ್ಳೆಯದಾಗುತ್ತದೆ ಎಂದರೆ ಸಿನಿಮಾ ಮಾಡೋಣ ಬನ್ನಿ ಎನ್ನುತ್ತಿದ್ದರು. ಆ ವ್ಯಕ್ತಿ ಕೆಲಸದ ವಿಷಯದಲ್ಲಿ, ಹಣದ ವಿಷಯದಲ್ಲಿ ಬಹಳ ಕಟ್ಟುನಿಟ್ಟು, ಯಾವುದೇ ನಿರ್ಮಾಪಕರಿಗೆ ಸಮಸ್ಯೆ ಕೊಟ್ಟವರಲ್ಲ. ನಾನು ಸಿನಿಮಾ ಮಾಡಿದಾಗಲೂ ಸಹ ಇಷ್ಟು ಹಣ ಕೊಡಿ, ಇಷ್ಟು ದಿನ ಬರುವೆ, ಹೇಳಿದ ಕೆಲಸ ಮಾಡಿಕೊಡುವೆ ಎಂದು ಶಿಸ್ತಾಗಿ ಹೇಳಿದ್ದರು. ಹಾಗೆಯೇ ಕೆಲಸ ಮಾಡಿಕೊಟ್ಟರು.
ಇತ್ತೀಚಿಗೆ ದರ್ಶನ್ ಅವರನ್ನು ಭೇಟಿ ಮಾಡಿ ಸಿನಿಮಾ ಮಾಡಿಕೊಡುವಂತೆ ಅಡ್ವಾನ್ಸ್ ಕೊಟ್ಟು ಬಂದಿದೆ. ದರ್ಶನ್ ಜೈಲಿನಿಂದ ಬಿಡುಗಡೆಯಾದ ಬಳಿಕ ರೇಣುಕಸ್ವಾಮಿ ಅವರ ಕುಟುಂಬಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ. ದರ್ಶನ್ ಅವರು ತಪ್ಪು ಮಾಡಿದ್ದಾರೋ ಇಲ್ಲವೋ ಎಂಬುದನ್ನು ನ್ಯಾಯಾಲಯ ತೀರ್ಮಾನಿಸುತ್ತದೆ. ತಪ್ಪು ಎಲ್ಲರೂ ಮಾಡಿದ್ದಾರೆ. ಭೂಮಿಯ ಮೇಲೆ ಯಾರು ತಪ್ಪು ಮಾಡಿಲ್ಲ. ಈಗ ದರ್ಶನ್ ಜೈಲಿನಲ್ಲಿ ಪಶ್ಚಾತಾಪ ಪಡುತ್ತಿರುತ್ತಾರೆ. ಅವರಿಂದ ಅಪರಾಧ ಆಗಿಲ್ಲ ಎಂಬುದೇ ನನ್ನ ನಂಬಿಕೆ. ಅವರಿಗೆ ಶಿಕ್ಷೆ ಆಗದೆ ಇರಲಿ ಎಂದು ನಾನು ಬೇಡಿಕೊಳ್ಳುತ್ತೇನೆ.
ದರ್ಶನ್ ಅಂಥಹಾ ಘೋರ ಅಪರಾಧ ಮಾಡುವವರಲ್ಲ, ಏನೋ ಅಚಾನಕ್ಕಾಗಿ ಅಥವಾ ಅವರ ಜೊತೆಗಿದ್ದವರು ಹಾಗೆ ಮಾಡಿರಬಹುದೇನೋ ಆದರೆ ದರ್ಶನ್ ಮನುಷ್ಯತ್ವ ಇರುವ ವ್ಯಕ್ತಿ. ಒಂದೊಮ್ಮೆ ಅವರು ಜೈಲಿನಿಂದ ಹೊರಬಂದರೆ ಅವರೊಟ್ಟಿಗೆ ಸಿನಿಮಾ ಮಾಡುವೆ. ಅದರಲ್ಲೂ ಒಳ್ಳೆಯ ಹೀರೋ ಸಬ್ಜೆಕ್ಟ್ ಇಟ್ಟುಕೊಂಡೇಡೆ ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ದಾರೆ.
ಪ್ರಕರಣದಲ್ಲಿ ರಾಜಕಾರಣಿಗಳು ಕಯವಾಡ ಇದೆ ಎಂದು ಹೇಳುವುದು ತಪ್ಪಾಗುತ್ತದೆ. ಕುಮಾರಸ್ವಾಮಿ ಅವರ ಹೆಸರು ಹೇಳುತ್ತಿದ್ದಾರೆ ಅದು ಸರಿಯಲ್ಲ. ಕುಮಾರಸ್ವಾಮಿಯವರು ಆ ರೀತಿಯ ವ್ಯಕ್ತಿಯಲ್ಲ. ಅವರಿಗೆ ಸಿನಿಮಾದವರೆಂದರೆ ಬಹಳ ಪ್ರೀತಿ, ಗೌರವ ಇದೆ. ಇಂಥಹಾ ಚಿಲ್ಲರೆ ಕೆಲಸ ಮಾಡುವ ವ್ಯಕ್ತಿ ಅವರಲ್ಲ. ಮಂಡ್ಯದಲ್ಲಿ ಕುಮಾರಸ್ವಾಮಿ ವಿರುದ್ಧ ಪ್ರಚಾರ ಮಾಡಿದ್ದಕ್ಕಾಗಿ ಕೆಲವರು ಹೀಗೆಲ್ಲ ಮಾತನಾಡುತ್ತಿದ್ದಾರೆ ಆದರೆ ಕುಮಾರಸ್ವಾಮಿ ಅವರು ಆ ರೀತಿಯ ವ್ಯಕ್ತಿಯಲ್ಲ. ಒಂದು ವೇಳೆ ದರ್ಶನ್ ಈ ಪ್ರಕರಣದಲ್ಲಿ ಅಪರಾಧಿ ಆದರೆ ಯಾವ ಯಾವ ನಿರ್ಮಾಪಕರು ಹಣ ಕೊಟ್ಟಿದ್ದಾರೆ ಅವರಿಗೆ ವಾಪಸ್ ಕೊಡ್ತಾರೆ ಅನ್ನೋ ನಂಬಿಕೆ ಇದೆ. ಚಿತ್ರರಂಗ ಅಂದರೆ ಅವರಿಗೆ ಒಳ್ಳೆ ಗೌರವ ಇದೆ ಎಂದು ನಿರ್ಮಾಪಕ ಕೆ. ಮಂಜು ನಟ ದರ್ಶನ್ ಪರ ಬ್ಯಾಟ್ ಬೀಸಿದ್ದಾರೆ.