ವಿರಾಟ್​-ರೋಹಿತ್​ ತೆಗೆದುಕೊಂಡ ಆ ಒಂದು ನಿರ್ಧಾರ ಭಾರತ ಕಪ್​ ಗೆಲ್ಲಲು ಮುಖ್ಯ ಕಾರಣ; ಅಚ್ಚರಿಯ ಹೇಳಿಕೆ ನೀಡಿದ ಬಿಸಿಸಿಐ ಅಧಿಕಾರಿ

Virat Sharma
Published on

ನವದೆಹಲಿ: ಯುಎಸ್​ಎ-ವೆಸ್ಟ್​ ಇಂಡೀಸ್​ ಆತಿಥ್ಯದಲ್ಲಿ ನಡೆದ 09ನೇ ಆವೃತ್ತಿಯ ಟಿ20 ವಿಶ್ವ ಸಮರದಲ್ಲಿ ಟೀಮ್​ ಇಂಡಿಯಾ ಗೆದ್ದು ಬೀಗಿದ್ದು, ಎರಡನೇ ಬಾರಿಗೆ ಚುಟುಕು ಕ್ರಿಕೆಟ್​ನ ಚಾಂಪಿಯನ್ಸ್​ ಆಗಿ ಹೊರಹೊಮ್ಮಿದೆ. ಇನ್ನೂ ಈ ಬಾರಿಯ ಟೂರ್ನಿಯಲ್ಲಿ ಭಾರತ ಕಪ್​ ಗೆಲ್ಲಲು ರೋಹಿತ್​ ಹಾಗೂ ವಿರಾಟ್ ತೆಗೆದುಕೊಂಡ ಆ ಪ್ರಮುಖ ನಿರ್ಧಾರವೇ ಮುಖ್ಯ ಕಾರಣ ಎಂದು ತಿಳಿದು ಬಂದಿದ್ದು, ರೋಹಿತ್​ ಹಾಗೂ ವಿರಾಟ್​ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ.

ಟಿ20 ವಿಶ್ವಕಪ್​ ಶುರುವಾಗುವುದಕ್ಕೂ ಮುನ್ನ ಭವಿಷ್ಯದ ದೃಷ್ಠಿಯಿಂದ ವಿರಾಟ್​ ಹಾಗೂ ರೋಹಿತ್​ರನ್ನು ತಂಡದಿಂದ ಕೈ ಬಿಡುವಂತೆ ಒತ್ತಾಯ ಕೇಳಿ ಬಂದಿತ್ತು. ಇದರ ಹೊರತಾಗಿಯೂ ರೋಹಿತ್​ ಹಾಗೂ ವಿರಾಟ್​ರನ್ನು ಆಯ್ಕೆ ಮಾಡುವ ಮೂಲಕ ಬಿಸಿಸಿಐ ಈ ಇಬ್ಬರು ಆಟಗಾರರ ಮೇಲೆ ತನಗೆ ಸಂಪೂರ್ಣ ವಿಶ್ವಾಸ ಇರುವುದಾಗಿ ತೋರಿಸಿತ್ತು. ಅದಕ್ಕೆ ತಕ್ಕಂತೆ ಈ ಇಬ್ಬರು ಆಟಗಾರರು ತಂಡಕ್ಕೆ ಕಪ್​ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಇದೀಗ ಈ ಕುರಿತು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ನೀಡಿರುವ ಹೇಳಿಕೆ ಸಖತ್​ ವೈರಲ್​ ಆಗುತ್ತಿದೆ.

Team India

ಕಳಪೆ ಫಾರ್ಮ್​ ನಡುವೆಯೂ ಹಾರ್ದಿಕ್​ರನ್ನು ತಂಡಕ್ಕೆ ಸೇರಿಸಿಕೊಳ್ಳುವಂತೆ ಕೊಹ್ಲಿ ಹಾಗೂ ರೋಹಿತ್​ ತೆಗೆದುಕೊಂಡ ನಿರ್ಧಾರವೇ ಇಂದು ಭಾರತ ವಿಶ್ವಕಪ್​ ಗೆಲ್ಲಲು ಸಾಧ್ಯವಾಯಿತು. ಹಾರ್ದಿಕ್​ ಆಲ್ರೌಂಡ್​ ಪ್ರದರ್ಶನದ ಮೂಲಕ ತಂಡಕ್ಕೆ ಕಪ್​ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಹೀಗಾಗಿ ರೋಹಿತ್​ ಹಾಗೂ ವಿರಾಟ್​ ತೆಗೆದುಕೊಂಡ ನಿರ್ಧಾರ ಭಾರತ ಕಪ್​ ಗೆಲ್ಲಲು ಸಹಕಾರಿಯಾಯ್ತು ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು, ಟಿ20 ವಿಶ್ವಕಪ್​ ಶುರುವಾಗುವುದಕ್ಕೂ ಮುನ್ನ ಹಾರ್ದಿಕ್​ ಪಾಂಡ್ಯ ರೋಹಿತ್​ ಹಾಗೂ ವಿರಾಟ್​ ಅನುಪಸ್ಥಿತಿಯಲ್ಲಿ ತಂಡವನ್ನು ಕೆಲ ಟೂರ್ನಿಗಳಲ್ಲಿ ಮುನ್ನಡೆಸಿದ್ದರು. ಇದಾದ ಬಳಿಕ ಹಾರ್ದಿಕ್​ ಪಾಂಡ್ಯ ಪೂರ್ಣ ಪ್ರಮಾಣದ ನಾಯಕರಾಗಲಿದ್ದಾರೆ ಎಂಬ ವದಂತಿ ಜೋರಾಗಿ ಹರಡಲು ಶುರುವಾಯಿತು. ಆ ವೇಳೆ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್​ ಅಗರ್ಕರ್​ ರೋಹಿತ್​ ಹಾಗೂ ಕೊಹ್ಲಿ ಅವರೊಂದಿಗೆ ಈ ಗಾಯದಿಂದ ಚೇತರಿಸಿಕೊಂಡಿದ್ದ ಹಾರ್ದಿಕ್​ರನ್ನು ತಂಡಕ್ಕೆ ಸೇರಿಸಿಕೊಳ್ಳುವ ಬಗ್ಗೆ ಮಾತುಕತೆ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net