ನವಗ್ರಹ ವಿಗ್ರಹಗಳ ಮೆರವಣಿಗೆ

IMG_20231209_221153
Published on

ಬೈಲಕುಪ್ಪೆ: ಪಿರಿಯಾಪಟ್ಟಣ ತಾಲೂಕಿನ ಚಿಕ್ಕಹೊನ್ನೂರಿನ ಶ್ರೀ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭಕ್ತರು ದಾನವಾಗಿ ನೀಡಿದ್ದ ನವಗ್ರಹ ವಿಗ್ರಹಗಳನ್ನು ಗ್ರಾಮಸ್ಥರು ಶನಿವಾರ ರಾತ್ರಿ ಮೆರವಣಿಗೆ ನಡೆಸಿದರು.


ನವಗ್ರಹಗಳಿಗೆ ಪೂಜೆ-ಪುನಸ್ಕಾರ, ಹೋಮ-ಹವನಗಳನ್ನು ನಡೆಸಿ ವಾಹನದ ಮೇಲಿರಿಸಿ, ಡೊಳ್ಳು ಕುಣಿತ, ವಾದ್ಯಗೋಷ್ಠಿಗಳೊಂದಿಗೆ ಚಿಕ್ಕ ಹೊನ್ನೂರು, ದೊಡ್ಡ ಹುನ್ನೂರು ಗೇಟ್, ಬೈಲಕುಪ್ಪೆ, ತಿರುಮಲಾಪುರ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮಹಿಳೆಯರು ಪ್ರತಿ ಮನೆ ಬಳಿ ಉತ್ಸವ ಬಂದಾಗ ಪೂಜೆ ಸಲ್ಲಿಸಿದರು. ಮೆರವಣಿಗೆಯಲ್ಲಿ ಯುವಕರು ತಮಟೆ ಸದ್ದಿಗೆ ಕುಣಿದು ಕುಪ್ಪಳಿಸಿದರು. ನಂತರ ಮೂಲಸ್ಥಾನವಾದ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಮೆರವಣಿಗೆ ತೆರಳಿತು.


ಗ್ರಾಮಸ್ಥರಾದ ನರಸಿಂಹ, ದೊಡ್ಡಯ್ಯ, ಬೈರಪ್ಪ, ಭಕ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net