ವಿಜಯವಾಣಿ ವಿಜಯೋತ್ಸವ ವಿಜೇತರಿಗೆ ಬಹುಮಾನ ವಿತರಣೆ; ಡಾ. ಆನಂದ ಸಂಕೇಶ್ವರ, ನಟಿ ಅನುಷಾ ರೈ ಹಸ್ತಾಂತರ

VV Lucky Draw
11ನೇ ಆವೃತ್ತಿಯ ವಿಜಯವಾಣಿ ವಿಜಯೋತ್ಸವ ಲಕ್ಕಿ ಡ್ರಾನಲ್ಲಿ ವಿಜೇತರಾದ ಅದೃಷ್ಟಶಾಲಿಗಳಿಗೆ ಬೆಂಗಳೂರಿನ ವಿಜಯವಾಣಿ ಕಚೇರಿಯಲ್ಲಿ ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಹಾಗೂ ನಟಿ ಅನುಷಾ ರೈ ಬಹುಮಾನಗಳನ್ನು ವಿತರಿಸಿದರು. ಜಯಶಾಲಿಗಳಾದ ಸಂಗೀತಾ, ದಿವ್ಯಾ, ಪುರುಷೋತ್ತಮ, ರಘು, ಗುರುರಾಜ್, ಶಿವರಾಜು ಮತ್ತು ಹರೀಶ್ ಉಪಸ್ಥಿತರಿದ್ದರು.
Published on

ಬೆಂಗಳೂರು: ಕನ್ನಡದ ನಂ.1 ಪತ್ರಿಕೆ ವಿಜಯವಾಣಿ ಆಯೋಜಿಸಿದ್ದ ‘ವಿಜಯೋತ್ಸವ ಲಕ್ಕಿ ಡ್ರಾ’ನಲ್ಲಿ ಆಯ್ಕೆಯಾದ ವಿಜೇತರಿಗೆ ಬೆಂಗಳೂರಿನ ವಿಜಯವಾಣಿ ಕಚೇರಿಯಲ್ಲಿ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಕಾರು, ಬೈಕ್ ಸೇರಿ ಹಲವು ಬಹುಮಾನಗಳನ್ನು ವಿತರಿಸಲಾಯಿತು.

ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ ಹಾಗೂ ನಟಿ ಅನುಷಾ ರೈ ವಿಜೇತರಿಗೆ ಬಹುಮಾನ ವಿತರಿಸಿದರು. ಕಾರು ವಿಜೇತ ಬೆಂಗಳೂರಿನ ಶಿವರಾಜು ದಂಪತಿ, ಬೈಕ್ ವಿಜೇತ ಕೋಲಾರದ ಹರೀಶ್ ಅವರಿಗೆ ಕೀಗಳನ್ನು ಹಸ್ತಾಂತರ ಮಾಡಲಾಯಿತು. ಒಟ್ಟಾರೆ ಬಹುಮಾನ ಸ್ವೀಕರಿಸಿದ ಎಲ್ಲ ಜಯಶಾಲಿಗಳು ಸಂತಸ ವ್ಯಕ್ತಪಡಿಸಿದರು. ಈ ಬಾರಿಯ ವಿಜಯೋತ್ಸವದಲ್ಲಿ ಒಟ್ಟು 4.96 ಲಕ್ಷ ಜನರು ವಿವಿಧ ಮಳಿಗೆಗಳಲ್ಲಿ ಚಿನ್ನ, ಬಟ್ಟೆ, ಎಲೆಕ್ಟ್ರಾನಿಕ್ಸ್ ವಸ್ತುಗಳು ಸೇರಿ ಹಲವು ವಸ್ತುಗಳನ್ನು ಖರೀದಿಸುವ ಮೂಲಕ ಲಕ್ಕಿ ಕೂಪನ್ ಪಡೆದಿದ್ದರು. ಇದರಲ್ಲಿ 2,800 ಜನರು ಅದೃಷ್ಟಶಾಲಿಗಳಾಗಿ ಬಹುಮಾನ ಪಡೆದಿದ್ದಾರೆ.

ವಿಜೇತರಿಗೆ ಕಾರು, ಬೈಕ್, ರೆಫ್ರಿಜರೇಟರ್, ಗೋಲ್ಡ್ ಕಾಯಿನ್, ವಾಷಿನ್ ಮಷಿನ್ ಹೀಗೆ ಹತ್ತಾರು ಬಹುಮಾನಗಳನ್ನು ಕೊಡ ಲಾಯಿತು. ಬಹುಮಾನ ಬರುತ್ತದೆ ಎಂದು ನಾವು ನಿರೀಕ್ಷೆ ಮಾಡಿರಲಿಲ್ಲ. ಬಹುಮಾನ ಬಂದಿರುವುದು ನಮಗೆ ಸಖತ್ ಖುಷಿ ನೀಡಿದೆ. ವಿಜಯವಾಣಿಯ ಕೂಪನ್ ವಿತರಣೆ ಕಾರ್ಯ ಹೀಗೆ ಮುಂದುವರಿಯಲಿ. ಹಾಗೆಯೇ ವಿಜಯವಾಣಿಗೆ ಒಳ್ಳೆಯದಾಗಲಿ. ತನ್ನ ಯಶಸ್ಸಿನ ನಡೆಯನ್ನು ಮುಂದುವರಿಸಲಿ ಎಂದು ವಿಜೇತರು ಹಾರೈಸಿದರು.

ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ, ವಿಜಯವಾಣಿ ಆರಂಭವಾಗಿ 12 ವರ್ಷಗಳಾಗಿದ್ದು, 11ನೇ ವರ್ಷದ ‘ವಿಜಯೋತ್ಸವ’ವನ್ನು ಆಚರಿಸಲಾಗುತ್ತಿದೆ. ಈ 11 ವರ್ಷದಲ್ಲಿ 25 ಸಾವಿರಕ್ಕೂ ಹೆಚ್ಚಿನ ಜನರಿಗೆ ಬಹುಮಾನ ವಿತರಿಸಲಾಗಿದೆ. ಈ ಬಾರಿಯೂ ಕಾರು, ಬೈಕ್, ರೆಫ್ರಿಜರೇಟರ್ ಸೇರಿ ಹಲವು ಬಹುಮಾನಗಳನ್ನು ಕೊಡಲಾಗಿದೆ. ಈ ಮೂಲಕ ಇದೊಂದು ಪತ್ರಿಕೆ, ಓದುಗರು ಮತ್ತು ಮಳಿಗೆಗಳನ್ನು ಬೆಸೆಯುವ ಕಾರ್ಯಕ್ರಮವಾಗಿದೆ. ಸಾಮಾನ್ಯವಾಗಿ ದಸರಾ ಮತ್ತು ದೀಪಾವಳಿ ಸಮಯದಲ್ಲಿ ಕೂಪನ್ ನೀಡಲಾಗುತ್ತದೆ. ನಂತರ ಆಯ್ಕೆಯಾದ ಅದೃಷ್ಟಶಾಲಿಗಳಿಗೆ ಬಹುಮಾನ ವಿತರಿಸಲಾಗುತ್ತದೆ ಎಂದು ವಿವರಿಸಿದರು.

ಹಲವು ಚಟುವಟಿಕೆ: ವಿಜಯವಾಣಿಯು ವರ್ಷದ 12 ತಿಂಗಳು ಕೂಡ ಒಂದಲ್ಲ ಒಂದು ಚಟುವಟಿಕೆಗಳಿಂದ ಕೂಡಿರುತ್ತದೆ. ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸೈಕ್ಲಥಾನ್​ನಲ್ಲಿ 3 ಸಾವಿರಕ್ಕೂ ಹೆಚ್ಚಿನ ಸೈಕಲ್ ಸವಾರರು ಪಾಲ್ಗೊಂಡಿದ್ದರು. ಹಾಗೆಯೇ, ಏಪ್ರಿಲ್-ಮೇ ತಿಂಗಳಿನಲ್ಲಿ ಎಜುಕೇಷನ್ ಎಕ್ಸ್ ಪೋ, ಪ್ರಾಪರ್ಟಿ ಎಕ್ಸ್​ಪೋ, ಶ್ರೀಕೃಷ್ಣ ಜಯಂತಿ ಸಮಯದಲ್ಲಿ ಮಕ್ಕಳಿಗೆ ವೇಷಭೂಷಣ ಸ್ಪರ್ಧೆ ಮತ್ತು ಪರಿಸರ ದಿನದ ಅಂಗವಾಗಿ ಚಿತ್ರಕಲಾ ಸ್ಪರ್ಧೆ ಸೇರಿ ಹಲವು ಚಟುವಟಿಕೆಗಳನ್ನು ಓದುಗರು ಮತ್ತು ರಾಜ್ಯದ ಜನರಿಗಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದು ಡಾ.ಆನಂದ ಸಂಕೇಶ್ವರ ಹೇಳಿದರು.

ವಿಜೇತರ ಪಟ್ಟಿ: ಶಿವರಾಜ್-ಕಾರು, ಹರೀಶ್-ಬೈಕ್, ಗುರುರಾಜ್-ರೆಫ್ರಿಜಿರೇಟರ್, ರಘು-ವಾಶಿಂಗ್​ವುಶಿನ್, ಪುರುಷೋತ್ತಮ-ಗೋಲ್ಡ್ ಕಾಯಿನ್, ದಿವ್ಯಾ-ಗ್ರೖೆಂಡರ್, ಸಂಗೀತಾ-ಟ್ರಾಲಿ ಬ್ಯಾಗ್.

ಸಾಯಿಗೋಲ್ಡ್ ಪ್ಯಾಲೇಸ್​ನಲ್ಲಿ ಚಿನ್ನ ಖರೀದಿ ಮಾಡಿದ್ದೆವು. ಬಳಿಕ ಆನ್​ಲೈನ್​ನಲ್ಲಿ ಕೂಪನ್ ಪಡೆದಿದ್ದೆವು. ಈಗ ನಾನೇ ಅದೃಷ್ಟಶಾಲಿಯೆಂದು ಕಾರು ಬಹುಮಾನ ನೀಡುತ್ತಿದ್ದಾರೆ. ಜೀವನದಲ್ಲಿ ಇದೊಂದು ನೆನಪಿನಲ್ಲಿ ಉಳಿಯುವ ಕ್ಷಣವಾಗಿದೆ. ವಿಜಯವಾಣಿಗೆ ಒಳ್ಳೆಯದಾಗಲಿ.

| ಶಿವರಾಜು ಕಾರು ವಿಜೇತ, ಬೆಂಗಳೂರು

ಗೃಹಬಳಕೆ ವಸ್ತುಗಳನ್ನು ಖರೀದಿ ಮಾಡಿ ಪ್ರತಿ ವರ್ಷದಂತೆ ಈ ವರ್ಷವೂ ವಿಜಯೋತ್ಸವದ ಕೂಪನ್ ಪಡೆದಿದ್ದೆ. ಬೈಕ್ ಬಹುಮಾನ ಬಂದಿರುವುದಕ್ಕೆ ತುಂಬಾ ಸಂತಸವಾಗುತ್ತಿದೆ. ಈ ಉತ್ಸವ ಹೀಗೆ ಮುಂದುವರಿಯಲಿ.

| ಹರೀಶ್ ಬೈಕ್ ವಿಜೇತ, ಕೋಲಾರ

ಶ್ರೀನಿಧಿ ಸಿಲ್ಕ್ ನಿಂದ ಬಟ್ಟೆ ಖರೀದಿಸಿ ವಿಜಯೋತ್ಸವ ದಲ್ಲಿ ಪಾಲ್ಗೊಂಡಿದ್ದೆ. ಕೂಪನ್ ಪಡೆದು ಬಹುಮಾನ ಬರಲ್ಲ ಎಂದು ಸುಮ್ಮನಾಗಿದ್ದೆವು. ಈಗ ರೆಫ್ರಿಜರೇಟರ್ ಬಂದಿರುವುದು ನಂಬುವುದಕ್ಕೆ ಸಾಧ್ಯವಾಗುತ್ತಿಲ್ಲ.

| ಗುರುರಾಜ್ ರೆಫ್ರಿಜರೇಟರ್ ವಿಜೇತ, ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net