ನ್ಯೂಯಾರ್ಕ್​ನಲ್ಲಿ ಪ್ರಿಯಾಂಕಾರ ಇಂಡಿಯನ್​ ರೆಸ್ಟೋರೆಂಟ್​! ರೆಸ್ಟೋರೆಂಟ್​ ಹೇಗಿದೆ ನೋಡಿ...

sona
Published on

ನ್ಯೂಯಾರ್ಕ್​: ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಸಿನಿಮಾ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದಾಗಿದೆ. ಇದೀಗ ಹೊಸದೊಂದು ಸಾಹಸಕ್ಕೆ ಕೈ ಹಾಕಿರುವ ಪ್ರಿಯಾಂಕಾ ದೂರದ ನ್ಯೂಯಾರ್ಕ್​ನಲ್ಲೂ ಭಾರತದ ಹೆಸರನ್ನು ಬೆಳಗಿಸಲು ಹೊರಟಿದ್ದಾರೆ.

ಹೌದು. ಪ್ರಿಯಾಂಕಾ ಚೋಪ್ರಾ ನ್ಯೂಯಾರ್ಕ್​ನಲ್ಲಿ ಇಂಡಿಯನ್​ ರೆಸ್ಟೋರೆಂಟ್​ ಒಂದನ್ನು ತೆರೆದಿದ್ದಾರೆ. ಸೋನಾ ಹೆಸರಿನ ರೆಸ್ಟೋರೆಂಟ್​ನಲ್ಲಿ ಭಾರತದ ವಿಶೇಷ ಖಾದ್ಯಗಳನ್ನು ಜನರಿಗೆ ಉಣಬಡಿಸಲು ಸಿದ್ಧರಾಗಿದ್ದಾರೆ. ಸೋನಾ ರೆಸ್ಟೋರೆಂಟ್​ನ ವೆಬ್​ಸೈಟ್​ ಮತ್ತು ಇನ್​ಸ್ಟಾಗ್ರಾಂ ಖಾತೆಯನ್ನು ಶುಭ ಶುಕ್ರವಾರದಂದು ಆರಂಭಿಸಲಾಗಿದೆ.

ಪ್ರಿಯಾಂಕಾ ಅವರು ತಮ್ಮ ಸೋನಾ ರೆಸ್ಟೋರೆಂಟ್​ ಬಗ್ಗೆ ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನ್ಯೂಯಾರ್ಕ್​ನಲ್ಲಿ ಹೃದಯ ಭಾಗದಲ್ಲಿ ರೆಸ್ಟೋರೆಂಟ್​ ತೆರೆದಿದ್ದೇವೆ. ಖ್ಯಾತ ಚೆಫ್​ ಹರಿನಾಯಕ್​ ರೆಸ್ಟೋರೆಂಟ್​ನ ಕಿಚನ್​ನಲ್ಲಿ ತರೇವಾರಿ ಅಡುಗೆ ಮಾಡಲಿದ್ದಾರೆ. ಖಾಸಗಿತನ ಬಯಸುವವರಿಗಾಗಿ ಮಿಮಿ ಹೆಸರಿನ ಪ್ರೈವೇಟ್​ ರೂಮನ್ನೂ ನಿರ್ಮಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಅಲ್ಲಿ ತಯಾರಿಸಲಾಗುವ ಕೆಲ ಖಾದ್ಯಗಳ ಫೋಟೋಗಳನ್ನೂ ಶೇರ್​ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net