ಬಾಡಿ ಶೇಮಿಂಗ್ ಮಾಡೋರಿಗೆ ಪ್ರಿಯಾಮಣಿ ಕೊಟ್ಟರು ಮುಟ್ಟಿ ನೋಡಿಕೊಳ್ಳುವ ಉತ್ತರ

priyamani
Published on

ಬೆಂಗಳೂರು: ಚರ್ಮದ ಬಣ್ಣ ಮತ್ತು ದೇಹದ ಆಧಾರದ ಮೇಲೆ ನಟಿಯರನ್ನು ಟೀಕಿಸಿದವರು ಅನೇಕರಿದ್ದಾರೆ.. ಅನೇಕ ನಾಯಕಿಯರು ಈ ರೀತಿಯ ಬಾಡಿ ಶೇಮಿಂಗ್ ಟೀಕೆಗಳನ್ನು ಎದುರಿಸಿದ್ದಾರೆ. ಸೋಷಿಯಲ್ ಮೀಡಿಯಾ ಬಳಕೆ ಹೆಚ್ಚಾದಾಗಿ ನಿಂದ ಸೆಲೆಬ್ರಿಟಿಗಳ ನಾಯಕಿಯರ ಬಗ್ಗೆ ಒಂದಷ್ಟು ಸುದ್ದಿಗಳು ವೈರಲ್ ಆಗುತ್ತಿವೆ. ಇದೀಗ ನಟಿ ಪ್ರಿಯಾಮಣಿ ಕೂಡಾ ತಾವು ಎದುರಿಸಿದ್ದ ಕೆಲವು ವಿಚಾರವಾಗಿ ಬಹಿರಂಗ ಪಡಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಅನೇಕ ನಾಯಕಿಯರು ಟ್ರೋಲ್​​ಗೆ ಬಲಿಯಾಗಿದ್ದಾರೆ. ಇತ್ತೀಚೆಗಷ್ಟೇ ಪ್ರಿಯಾಮಣಿ ಇಂಟರೆಸ್ಟಿಂಗ್ ಕಾಮೆಂಟ್‌ಗಳನ್ನು ಮಾಡಿದ್ದರು.

ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಪ್ರಿಯಾಮಣಿ ಆಘಾತಕಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಜೀರೋ ಸೈಜ್ ವಿಷಯದ ಕುರಿತು ಅವರು ಮಾತನಾಡಿದರು. ಬಾಲಿವುಡ್ ಎಂದರೆ ಗ್ಲಾಮರ್. ಆದರೆ, ಮಲಯಾಳಂ ಸೇರಿದಂತೆ ದಕ್ಷಿಣದ ಕೆಲವು ಭಾಷೆಗಳಲ್ಲಿ ಗ್ಲಾಮರ್‌ಗಿಂತ ನಟನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.

'ಚೆನ್ನಾಗಿ ಕಾಣಲು ಏನು ಮಾಡಬೇಕೋ ಅದನ್ನೇ ಮಾಡಬೇಕು. ಅದು ನಿಮ್ಮ ವೈಯಕ್ತಿಕ ಆಯ್ಕೆ. ನಾನು ಇರುವ ಇಂಡಸ್ಟ್ರಿಯಲ್ಲಿ ಹೋಲಿಕೆಗಳು ಯಾವಾಗಲೂ ನಡೆಯುತ್ತಿರುತ್ತವೆ. ದಕ್ಷಿಣದಲ್ಲಿ ಜಿರೋ ಸೈಜ್​ ಇರಬೇಕು ಎಂದು ಯಾರೂ ಹೇಳಲಿಲ್ಲ. ನಮ್ಮ ನಟಿಯರು ಇಂದು ತುಂಬಾ ಫಿಟ್ ಆಗಿದ್ದಾರೆ. ಅವರು ಏನನ್ನು ತಿನ್ನುತ್ತಾರೆ? ಅವರು ಹೇಗೆ ಕಾಣುತ್ತಾರೆ? ಅದು ನಿಮ್ಮ ವೈಯಕ್ತಿಕ ಆಯ್ಕೆ. ನಾನು ಇರುವ ಇಂಡಸ್ಟ್ರಿ ಹೇಗಿದೆ ಎಂದರೆ ಇಲ್ಲಿ ಹೋಲಿಕೆಗಳು ನಡೆಯುತ್ತಲೇ ಇರುತ್ತವೆ. ದಕ್ಷಿಣದಲ್ಲಿ ನನಗೆ ಯಾರೂ ಜೀರೋ ಸೈಜ್ ಮಾಡಿಕೊಳ್ಳಿ ಎಂದು ಹೇಳಿಲ್ಲ.ನಿಮ್ಮ ಮೇಲೆ ನೆಗಟಿವ್ ಕಮೆಂಟ್ ಮಾಡುವ ಉದ್ದೇಶ ಹೊಂದಿರುವುದಿಲ್ಲ. ಅವರು ನಿಮ್ಮನ್ನು ಡುಮ್ಮಿ ಎಂದು ಕರೆಯುವುದಿಲ್ಲ. ಇತ್ತೀಚೆಗೆ ಸೈಜ್ ಜೀರೋ ವಿಚಾರ ಚರ್ಚೆಗೆ ಗ್ರಾಸವಾಗಿದೆ' ಎಂದರು ಪ್ರಿಯಾಮಣಿ.

ಪ್ರಿಯಾಮಣಿ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕೆ ಹಲವರು ಟೀಕಿಸಿದ್ದಾರೆ. ಆದರೆ ಈ ಟೀಕೆಗಳಿಗೆ ಪತಿ ನನ್ನ ಜತೆ ನಿಂತಿದ್ದಾರೆ. ಸಿನಿಮಾ ಮಾಡಲು ಪತಿಯಿಂದ ಬೆಂಬಲ ಸಿಗುತ್ತಿದೆ. ಪತಿ ಮೇಲಿನ ಟ್ರೋಲ್‌ಗಳು ತನಗೆ ಮತ್ತು ತನ್ನ ಕುಟುಂಬದ ಮೇಲೆ ಪರಿಣಾಮ ಬೀರದಂತೆ ನೋಡಿಕೊಂಡಿದ್ದೇನೆ ಎಂದು ಪ್ರಿಯಾಮಣಿ ಹೇಳಿದ್ದಾರೆ.

ಇತ್ತೀಚಿಗೆ ಪ್ರಿಯಾಮಣಿ ಸಾಲು ಸಾಲು ಯಶಸ್ಸನ್ನು ಪಡೆಯುತ್ತಿದ್ದಾರೆ. ಆಕೆಯ ಅಭಿನಯದ 'ಜವಾನ್' ದೊಡ್ಡ ಹಿಟ್ ಆಗಿತ್ತು. ಇತ್ತೀಚೆಗಷ್ಟೇ ‘ಮೈದಾನ’ ಸಿನಿಮಾ ಕೂಡ ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿತ್ತು. ನಟಿ ಪ್ರಸ್ತುತ ಬ್ಯಾಕ್-ಟು-ಬ್ಯಾಕ್ ಹಿಟ್‌ಗಳೊಂದಿಗೆ ತಮ್ಮ ವೃತ್ತಿಜೀವನದ ಅತ್ಯುತ್ತಮ ಹಂತದಲ್ಲಿದ್ದಾರೆ. ಅವರ ‘ಜವಾನ್’, ‘ಆರ್ಟಿಕಲ್ 370’ ಅಥವಾ ಬಹುನಿರೀಕ್ಷಿತ ‘ಮೈದಾನ್​’ ಸಿನಿಮಾ ಮೂಲಕವಾಗಿ ಪ್ರಿಯಾಮಣಿ ತನ್ನನ್ನು ಸಾಬೀತುಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net