ದೀರ್ಘಕಾಲದ ಆಯಾಸವನ್ನು ನಿವಾರಿಸಲು ಪೃಥ್ವಿ ಮುದ್ರೆ

Prithvi Mudre
Published on
ಸಂಸ್ಕೃದಲ್ಲಿ, ಪೃಥ್ವಿ ಎಂದರೆ ಭೂಮಿ ಮತ್ತು ಮುದ್ರೆ ಎಂದರೆ ಕೈಗಳ ಸೂಚಕ. ಆದ್ದರಿಂದ ಪೃಥ್ವಿ ಮುದ್ರೆಯು ನಮ್ಮ ದೇಹದಲ್ಲಿನ ಭೂಮಿಯ ಅಂಶವನ್ನು ಜಾಗೃತಗೊಳಿಸಲು ಸಹಾಯ ಮಾಡುತ್ತದೆ. ಪೃಥ್ವಿ ಮುದ್ರೆಯನ್ನು ಆಶೀರ್ವಾದ ಅಥವಾ ಆಶೀರ್ವಾದದ ಸಂಕೇತ ಎಂದೂ ಕರೆಯಲಾಗುತ್ತದೆ.

ಇದು ಚಿಕಿತ್ಸಾ ಮುದ್ರೆಯಾಗಿದೆ. ಈ ಮುದ್ರೆಯನ್ನು ನಿಯಮಿತವಾಗಿ ಮಾಡುವುದರಿಂದ ದೇಹದಲ್ಲಿಯ ಬೆಂಕಿ ಅಂಶವನ್ನು ಕಡಿಮೆಗೊಳಿಸುವುದು. ಇದಕ್ಕೆ ಅಗ್ನಿ ಶಾಮಕ ಮುದ್ರೆ ಎಂಬ ಹೆಸರೂ ಇದೆ. ದೇಹದ ಬಲವನ್ನು ವೃದ್ಧಿಸಲು ಈ ಮುದ್ರೆ ಉಪಯುಕ್ತವಾಗಿದೆ. ಉಂಗುರ ಬೆರಳು ಮತ್ತು ಹೆಬ್ಬೆರಳಿನ ಅಗ್ರ ಭಾಗ ಮೃದುವಾಗಿ ರ್ಸ³ಸಿದಾಗ ಮೂಳೆಗಳು, ಚರ್ಮ, ಕೂದಲು, ಉಗುರುಗಳು, ಮಾಂಸಖಂಡಗಳು, ಸ್ನಾಯು ಇತ್ಯಾದಿಗಳು ಸುಸ್ಥಿತಿಗೊಳ್ಳುತ್ತದೆ. ಹಾಗೂ ಸಹಿಷ್ಣುತೆ ಹೆಚ್ಚುತ್ತದೆ. ಇದರಲ್ಲಿ ಪೃಥ್ವಿ ತತ್ವ ಹೆಚ್ಚುತ್ತದೆ. ಹಾಗೇ ಅಗ್ನಿ ತತ್ವ ಕಡಿಮೆಯಾಗುತ್ತದೆ.

ವಿಧಾನ: ಹೆಬ್ಬೆರಳು ಮತ್ತು ಉಂಗುರ ಬೆರಳುಗಳ ತುದಿಯನ್ನು ಜೋಡಿಸಬೇಕು. ಉಳಿದ ಬೆರಳುಗಳು ನೇರವಾಗಿರಲಿ. ಕೈಗಳು ಮೇಲ್ಮುಖವಾಗಿರಲಿ. ಈ ಮುದ್ರೆಯನ್ನು 15 ರಿಂದ 45 ನಿಮಿಷ ಮಾಡಬಹುದಾಗಿದೆ. ದೈಹಿಕವಾಗಿ ದುರ್ಬಲರಾದ ವ್ಯಕ್ತಿಗಳು ಈ ಮುದ್ರೆಯನ್ನು ಅಭ್ಯಾಸ ಮಾಡಿದಲ್ಲಿ ಪ್ರಯೋಜನ ದೊರಕುತ್ತದೆ. ಈ ಮುದ್ರೆಯನ್ನು 15 ನಿಮಿಷದಂತೆ 3 ಬಾರಿ ಅಭ್ಯಾಸ ಮಾಡಬಹುದು. ಪೃಥ್ವಿ ಮುದ್ರೆಯಲ್ಲಿ ‘ಓಂ ಶ್ರೀಂ ಭೂದೇವಿಯೈ ನಮಃ’ ಎಂದು 108 ಬಾರಿ ಮಂತ್ರ ಪಠಿಸಿ.

ಪ್ರಯೋಜನ: ಮೂಲಾಧಾರ (ಬೇರುಚಕ್ರ) ಚಕ್ರದ ಸುಸ್ಥಿತಿಗೆ ಈ ಮುದ್ರೆ ಸಹಕಾರಿ. ತ್ರಾಣವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ದೀರ್ಘಕಾಲದ ಆಯಾಸವನ್ನು ನಿವಾರಿಸಲು ಪೃಥ್ವಿ ಮುದ್ರೆಯು ಸಹಾಯ ಮಾಡುತ್ತದೆ. ಪೃಥ್ವಿ ಮುದ್ರೆಯು ಪ್ರಾಣವು ಬೆನ್ನುಮೂಳೆಯ ಮತ್ತು ದೇಹದ ಇತರ ಭಾಗಗಳ ಮೂಲಕ ಉತ್ತಮವಾಗಿ ಹರಿಯಲು ಸಹಾಯ ಮಾಡುತ್ತದೆ. ಪ್ರಾಣವು ಸಂಸ್ಕೃದ ಉಸಿರಿನ ಪದವಾಗಿದೆ ಮತ್ತು ಜೀವ ಶಕ್ತಿ ಎಂದು ಸೂಚಿಸುತ್ತದೆ. ಪ್ರಾಣದ ಹರಿವು ದೇಹದ ಎಲ್ಲಾ ಭಾಗಗಳಲ್ಲಿ ಶಕ್ತಿಯ ಹರಿವನ್ನು ಖಾತ್ರಿಗೊಳಿಸುತ್ತದೆ ಮತ್ತು ದೇಹವನ್ನು ಶಕ್ತಿಯುತವಾಗಿರಿಸುತ್ತದೆ ಅಸ್ಥಿ ಸಂಧಿವಾತಕ್ಕೆ ಪೃಥ್ವಿ ಮುದ್ರೆಯು ಸಹಾಯ ಮಾಡುತ್ತದೆ. ಕಾಮಾಲೆ ಜ್ವರದವರಿಗೆ ಈ ಮುದ್ರೆ ಸಹಕಾರಿಯಾಗುತ್ತದೆ. ಅಸ್ಟಿಯಾ ಫ್ಲೊರೋಸಿಸ್, ಮೂಳೆ ಮುರಿತ, ದೌರ್ಬಲ್ಯದ ಸಮಸ್ಯೆಯ ನಿಯಂತ್ರಣಕ್ಕೆ ಈ ಮುದ್ರೆ ಉಪಯುಕ್ತವಾಗಿದೆ. ಪಾರ್ಶ್ವವಾಯು, ಪೋಲಿಯೋ ಸಮಸ್ಯೆ ಇದ್ದವರು ಈ ಮುದ್ರೆಯನ್ನು ದಿನಾಲು ಅಭ್ಯಾಸ ಮಾಡಿದರೆ ಸಹಾಯವಾಗುತ್ತದೆ. ಹೊಟ್ಟೆಹುಣ್ಣು, ಬಾಯಿ ಹುಣ್ಣು ಸಮಸ್ಯೆ ನಿಯಂತ್ರಣಕ್ಕೆ ಈ ಮುದ್ರೆ ಸಹಕಾರಿ. ಶರೀರದ ಸರ್ವಾಂಗೀಣ ಬೆಳವಣಿಗೆಗೆ ಅಂದರೆ ದೃಢಕಾಯಕ್ಕೆ ಹಾಗೂ ಜೀವನೋತ್ಸಾಹ ವೃದ್ಧಿಸುವಿಕೆಗೆ ಈ ಪೃಥ್ವಿ ಮುದ್ರೆ ಕಾರಣವಾಗುತ್ತದೆ.

ಜ್ವರ ಇಳಿಸಲು ಸಹಾಯ ಮಾಡುತ್ತದೆ. ರಕ್ತದೊತ್ತಡವನ್ನು ಸುಗಮಗೊಳಿಸುತ್ತದೆ. ಶರೀರಕ್ಕೆ ಹೊಸ ಚೈತನ್ಯ, ದೃಢತೆಯನ್ನು ನೀಡುವುದರೊಂದಿಗೆ ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ತರುತ್ತದೆ. ಸಿಟ್ಟನ್ನು ಶಮನಗೊಳಿಸುತ್ತದೆ. ದೇಹವು ಚುರುಕಾಗಿ ಮುಖಕ್ಕೆ ಒಂದು ಬಗೆಯ ಹೊಳಪು ಬರಲು ಸಹಾಯಕವಾಗುತ್ತದೆ. ಉಗುರಿನ ಕಾಂತಿ ಹೆಚ್ಚುತ್ತದೆ. ಕೂದಲು ಉದುರುವ ಸಮಸ್ಯೆಯೂ ಶಮನವಾಗುತ್ತದೆ. ಪಿತ್ತ ದೋಷ ನಿವಾರಣೆಗೆ, ಬಾವು ಕಡಿಮೆಯಾಗಲು, ಸ್ನಾಯುಗಳ ಬಲವರ್ಧನೆಗೆ ಅಲ್ಲದೆ ಶರೀರದ ತೂಕ ಹೆಚ್ಚಾಗಲು ಈ ಮುದ್ರೆ ಸಹಾಯ ಮಾಡುತ್ತದೆ. ಶರೀರದಲ್ಲಿರುವ ಕಲ್ಮಶಗಳನ್ನು ವಿಸರ್ಜಿಸುವ ಕಾರ್ಯವನ್ನು ಸಮರ್ಥವಾಗಿ ನಡೆಸುತ್ತದೆ. ಕಾಲು ಒಡೆತ, ಒಣ ಚರ್ಮದ ಸಮಸ್ಯಯನ್ನು ನಿವಾರಿಸುತ್ತದೆ. ಹೊಟ್ಟೆ ಹುಣ್ಣು ಕಡಿಮೆಯಾಗಲು ಸಹಕಾರಿ. ಕಫದ ಸಮಸ್ಯೆ ಇದ್ದವರು ತುಂಬಾ ಹೊತ್ತು ಅಭ್ಯಾಸ ಮಾಡುವುದು ಬೇಡ. ದಿನ ನಿತ್ಯ ಈ ಮುದ್ರೆಯನ್ನು ಅಭ್ಯಾಸ ಮಾಡುತ್ತಿದ್ದರೆ ಮನಸ್ಸಿನಲ್ಲಿ ಶಾಂತಿ ಮೂಡಿ, ಆಧ್ಯಾತ್ಮಿಕ ಸಾಧನೆಗೆ ಮುಂದುವರಿಯಲು ಸಹಾಯವಾಗುತ್ತದೆ. ಮುದ್ರೆಯನ್ನು ಎರಡೂ ಕೈಗಳಿಂದ ಮಾಡಿದರೆ ಉತ್ತಮ ಲಾಭವನ್ನು ಪಡೆಯಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net