ಕುಬಟೂರು ಗ್ರಾಮದ ಅಭಿವೃದ್ಧಿಗೆ ಆದ್ಯತೆ

srb r
ಆನವಟ್ಟಿ ಪಪಂ ವ್ಯಾಪ್ತಿಯ ಕುಬಟೂರು ಗ್ರಾಮದಲ್ಲಿ ಕಾಂಕ್ರಿಟ್ ರಸ್ತೆ ಹಾಗೂ ಬಾಕ್ಸ್ ಚರಂಡಿ ನಿರ್ಮಾಣಕ್ಕೆ ಸಚಿವ ಮಧು ಬಂಗಾರಪ್ಪ ಭೂಮಿಪೂಜೆ ನೆರವೇರಿಸಿದರು. ಕೆ.ಪಿ.ರುದ್ರಗೌಡ, ಶಿವಲಿಂಗೇಗೌಡ, ಚಂದ್ರಪ್ಪ, ತುಕಾರಾಮ್, ಹೊಳೆಲಿಂಗಪ್ಪ, ಸುರೇಶ್ ಇತರರಿದ್ದರು.
Published on

ಸೊರಬ: ನಮಗೆ ಬಾಲ್ಯವನ್ನು ಕಟ್ಟಿಕೊಟ್ಟ ಹಾಗೂ ಎಸ್.ಬಂಗಾರಪ್ಪ ಅವರಿಗೆ ಶಕ್ತಿ ನೀಡಿದ ಕ್ಷೇತ್ರ ಕುಬಟೂರು ಗ್ರಾಮಕ್ಕೆ ಸರ್ಕಾರದಿಂದ ಹೆಚ್ಚಿನ ಅನುದಾನ ತರುವ ಮೂಲಕ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.

ಆನವಟ್ಟಿ ಪಪಂ ವ್ಯಾಪ್ತಿಯ ಕುಬಟೂರು ಗ್ರಾಮದಲ್ಲಿ 15ನೇ ಹಣಕಾಸು ಯೋಜನೆ ಅನುದಾನದಡಿ ಗ್ರಾಮದ ಪರಿಶಿಷ್ಟರ ಕಾಲನಿಗೆ 20 ಲಕ್ಷ ರೂ. ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಬಾಕ್ಸ್ ಚರಂಡಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಸರ್ಕಾರದಿಂದ ಮನೆಗಳ ನಿರ್ಮಾಣಕ್ಕೆ ಶೀಘ್ರವೇ ಅನುದಾನ ದೊರೆಯಲಿದೆ. ಅರ್ಹರನ್ನು ವಾರ್ಡ್ ಸಭೆಗಳ ಮೂಲಕ ಆಯ್ಕೆ ಮಾಡುವ ಕೆಲಸ ಗ್ರಾಮಸ್ಥರದಾಗಿದೆ. ಆನವಟ್ಟಿ ಪಪಂ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆಯಾಗಿದೆ. ಪಪಂ ವ್ಯಾಪ್ತಿಯ ಅಗತ್ಯವಿರುವ ಗ್ರಾಮಕ್ಕೆ ಡಾಂಬರು ರಸ್ತೆ ನಿರ್ಮಿಸಲಾಗುವುದು ಎಂದರು.

ತವರೂರನ್ನು ಅಭಿವೃದ್ಧಿಪಡಿಸುವುದು ನನ್ನ ಹೊಣೆ. ಶಾಸಕನಾಗಿದ್ದಾಗ ಕೆಲವು ಕಾಮಗಾರಿ ಮಾಡಲಾಗಿತ್ತು. ಈಗ ಪರಿಶಿಷ್ಟರು ವಾಸಮಾಡುವ ಕಾಲನಿಯ ಬೀದಿಯನ್ನು ಕಾಂಕ್ರಿಟೀಕರಣಕ್ಕೆ ಚಾಲನೆ ನೀಡಲಾಗಿದೆ. ಇಲ್ಲಿನ ದುರ್ಗಮ್ಮದೇವಿ ಗುಡಿಗೆ 20 ಲಕ್ಷ ರೂ. ಅನುದಾನದಲ್ಲಿ ಸಮುದಾಯ ಭವನ ನಿರ್ಮಿಸಲಾಗುವುದು. ಈ ಕಾಲನಿಗೆ ನೀರಿನ ಹರಿವು ತಪ್ಪಿಸಲು ಒಂದು ತಡೆಗೋಡೆ ಅವಶ್ಯವಿದ್ದು, ಶೀಘ್ರವೇ ನಿರ್ಮಿಸಿ ಕೊಡಲಾಗುವುದು ಎಂದು ಮಧು ಬಂಗಾರಪ್ಪ ಭರವಸೆ ನೀಡಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಪಿ.ರುದ್ರಗೌಡ, ಕೆಡಿಪಿ ಸದಸ್ಯ ಸದಾನಂದ ಗೌಡ, ಜಿಪಂ ಮಾಜಿ ಸದಸ್ಯ ಶಿವಲಿಂಗೇಗೌಡ, ಗ್ರಾಮಸ್ಥರಾದ ಚಂದ್ರಪ್ಪ, ತುಕಾರಾಮ್, ಹೊಳೆಲಿಂಗಪ್ಪ, ಸುರೇಶ್, ಸೋಮಪ್ಪ, ಗಂಗಾಧರ್, ಮಾಲತೇಶ್, ನಾಗರಾಜ್, ಪರಶುರಾಮ್, ಸಂತೋಷ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net