ಧರ್ಮೋತ್ಥಾನ ಕಾರ್ಯಕ್ಕೆ ಆದ್ಯತೆ

temple
ಶಿಕಾರಿಪುರ ತಾಲೂಕಿನ ಶಂಕರಿಕೊಪ್ಪದ ದೇಗುಲ ಅಭಿವೃದ್ಧಿಗೆ ನೀಡಿದ ನೆರವನ್ನು ಧರ್ಮಸ್ಥಳ ಯೋಜನಾಧಿಕಾರಿ ಬಾಬು ನಾಯಕ್ ಅವರು ಗ್ರಾಮಸ್ಥರಿಗೆ ಹಸ್ತಾಂತರಿಸಿದರು. ಶಿವಾನಂದಪ್ಪ ಗೌಡ, ಮಂಜಪ್ಪ ಗೌಡ, ನಂಜುಂಡಿ, ಮಂಜುನಾಥ್, ವೀರೇಶ್ ಇತರರಿದ್ದರು.
Published on

ಶಿವಮೊಗ್ಗ: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಸಾಮಾಜಿಕ ಕಳಕಳಿಯಿಂದಾಗಿ ದೇವಾಲಯಗಳು, ಕೆರೆಗಳು ಜೀರ್ಣೋದ್ಧಾರ ಆಗುತ್ತಿವೆ ಎಂದು ಧರ್ಮಸ್ಥಳ ಯೋಜನೆಯ ಶಿರಸಿ ಜಿಲ್ಲಾ ನಿರ್ದೇಶಕ ಬಾಬು ನಾಯಕ್ ಹೇಳಿದರು.

ಶಿಕಾರಿಪುರ ತಾಲೂಕಿನ ಶಂಕರಿಕೊಪ್ಪದ ಶ್ರೀ ಶಂಕರಲಿಂಗ ದೇವಸ್ಥಾನಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನೀಡಿದ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಒಂದು ಲಕ್ಷ ರೂ. ಮೊತ್ತದ ಡಿಡಿ ಹಸ್ತಾಂತರಿಸಿ ಮಾತನಾಡಿದ ಅವರು, ಧರ್ಮೋತ್ಥಾನ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಹೊಸ ವರ್ಷದಲ್ಲಿ ದೇವಾಲಯ ್ಕನೀಡಿದ ಮೊದಲ ಅನುದಾನ ಎಂದರು.

ಧರ್ಮಾಧಿಕಾರಿ ಅವರ ದೂರದೃಷ್ಟಿ ಮತ್ತು ಸಂಕಲ್ಪ ಶಕ್ತಿಯ ಫಲವಾಗಿ ಈ ಯೋಜನೆ ಬೇರೆ ರಾಜ್ಯಕ್ಕೂ ವಿಸ್ತರಣೆಯಾಗಿದೆ. ಒಬ್ಬ ಧರ್ಮಾಧಿಕಾರಿ ಹೇಗೆ ಸಮಾಜಸೇವೆ ಮಾಡಬೇಕು ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿ. ಈ ಯೋಜನೆ ಅವರ ಕನಸಿನ ಕೂಸು ನಿಮ್ಮೆಲ್ಲರ ಸಹಕಾರ, ಮಾರ್ಗದರ್ಶನದಿಂದ ಬೆಳೆದು ನಿಂತಿದೆ ಎಂದರು.

ದೇವಸ್ಥಾನ ಸಮಿತಿ ಅಧ್ಯಕ್ಷ ಶಿವಾನಂದಪ್ಪ ಗೌಡ, ಕಾರ್ಯದರ್ಶಿ ಮಂಜಪ್ಪ ಗೌಡ, ತಾಲೂಕಿನ ಯೋಜನಾಧಿಕಾರಿ ನಂಜುಂಡಿ, ಮೇಲ್ವಿಚಾರಕ ಮಂಜುನಾಥ್, ಸೇವಾ ಪ್ರತಿನಿಧಿ ವೀರೇಶ್, ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net