ಮಾಲೆ ಧರಿಸಿ ಶಬರಿಮಲೆ ದರ್ಶನಕ್ಕೆ ಸಿದ್ದರಾದ ಕ್ರೈಸ್ತ ಪಾದ್ರಿ; ತೀವ್ರ ವಿರೋಧ

church Father
Published on

ತಿರುವನಂತಪುರಂ: ಅಯ್ಯಪ್ಪಸ್ವಾಮಿಯ ದರ್ಶನ ಪಡೆಯಬೇಕೆಂಬ ಬಯಕೆಯೊಂದಿಗೆ ಚರ್ಚ್​ ಒಂದರ ಪಾದ್ರಿಯೊಬ್ಬರು ತಮ್ಮ ಪರವಾನಗಿಯನ್ನು ಹಿಂತಿರುಗಿಸಿರುವ ಘಟನೆ ಕೇರಳದ ತಿರುವನಂತಪುರದಲ್ಲಿ ನಡೆದಿದೆ.

ತಿರುವನಂತಪುರ ಮೂಲದ ರೇವ್​ ಮನೋಜ್​ ಕೆ.ಜಿ (50) ಎನ್ನುವ ಪಾದ್ರಿ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ 41ದಿನಗಳ ಕಠಿಣ ವ್ರತ ಕೈಗೊಂಡು ಆಂಗ್ಲಿಕನ್​ ಚರ್ಚ್​ ಆಫ್​ ಇಂಡಿಯಾ ಅಡಿಯಲ್ಲಿ ಬರುವ ಚರ್ಚ್​​ ಕೆಲಸಕ್ಕೆ ರಾಜೀನಾಮೆ ನೀಡಿ ಬಂದಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ರೇವ್​ ಮನೋಜ್​ ನನ್ನ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಚರ್ಚ್​ ಆಡಳಿತ ಮಂಡಳಿಯು ಹೇಳಿತ್ತು. ತಮ್ಮ ನಿರ್ಧಾರದ ಕುರಿತು ವಿವರವಾದ ವಿವರಣೆಯನ್ನು ನೀಡುವಂತೆ ಆಡಳಿತ ಮಂಡಳಿ ಕೇಳಿತ್ತು. ನಾನು ಆಡಳಿತ ಮಂಡಳಿಗೆ ವಿವರಣೆ ನೀಡುವ ಬದಲು ನನಗೆ ನೀಡಲಾಗಿದ್ದ ಪರವಾನಗಿ ಹಾಗೂ ಐಡಿ ಕಾರ್ಡ್​ಅನ್ನು ಹಿಂತಿರುಗಿಸಿದ್ದೇನೆ.

Priest Manoj

ನಾನು ಮೊದಲಿಗೆ ದೇವರ ಸಿದ್ದಾಂತಗಳನ್ನು ಅಳವಡಿಸಿಕೊಂಡವನು. ದೇವರು ಯಾವುದೇ ಜಾತಿ, ಮತ, ಧರ್ಮ ಲೆಕ್ಕಿಸದೆ ಪ್ರೀತಿ ಮಾಡು ಎನ್ನುತ್ತಾರೆ. ಹೀಗಾಗಿ ಚರ್ಚ್​ಅನ್ನು ಪ್ರೀತಿಸಬೇಕೋ ಅಥವಾ ದೇವರನ್ನೋ ಎಂದು ನನಗೆ ತಿಳಿಯಲಿಲ್ಲ. ಚರ್ಚ್​ನ ಸಿದ್ದಾಂತಗಳಿಗೆ ತಕ್ಕಂತೆ ನಾನು ಕೆಲಸ ಮಾಡುವವನಲ್ಲ ಎಂದು ಹೇಳಿದ್ದಾರೆ.

ಈ ಮೊದಲು ಸಾಫ್ಟ್​ವೇರ್​ ಇಂಜಿನಿಯರ್​ ಆಗಿದ್ದ ನಾನು ಅಧ್ಯಾತ್ಮಿಕ ಭೋಧನೆಗಳಿಗೆ ಮಾಹಿತಿ ಕಲೆ ಹಾಕಲು ಪಾದ್ರಿಯಾದೆ. ನಾನು ಯಾವ ತಪ್ಪನ್ನೂ ಮಾಡಿಲ್ಲ ಎಂಬ ಭಾವನೆ ನನಗಿದೆ. ಹಿಂದೂ ಧರ್ಮ ಮತ್ತು ಅದರಲ್ಲಿನ ಆಚರಣೆಗಳನ್ನು ಮೀರಿ ಅರ್ಥ ಮಾಡಿಕೊಳ್ಳುವುದು ನನ್ನ ಉದ್ದೇಶವಾಗಿದೆ ಎಂದು ಪಾದ್ರಿ ಮನೋಜ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net