More

    ಭಾರತದಲ್ಲಿ ಅಲ್ಪಸಂಖ್ಯಾತರನ್ನು ಹತ್ತಿಕ್ಕುತ್ತಿರುವುದು ನಾಚಿಕೆಗೇಡಿನ ಸಂಗತಿ: ರಾಹುಲ್​ ಗಾಂಧಿ

    ನವದೆಹಲಿ: ದೇಶದ ಹೆಸರನ್ನು ಬದಲಾಯಿಸಲು ಹೊರಟಿರುವವರು ಮುಂಬರುವ ದಿನಗಳಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ.

    ಪ್ಯಾರಿಸ್​ನಲ್ಲಿರುವ ಪಿಒ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ರಾಹುಲ್​ ಗಾಂಧಿ ದೇಶದ ಹೆಸರನ್ನು ಬದಲಾಯಿಸಲು ಹೊರಟಿರುವವರು ಮೂಲ ಇತಿಹಾಸವನ್ನು ತಿಳಿಯಲು ನಿರಾಕರಿಸುತ್ತಿದ್ದಾರೆ. ಈ ರೀತಿ ಹೆಸರು ಬದಲಾಯಿಸುವ ಮೂಲಕ ದೇಶದ ಮೇಲೆ ದಾಳಿ ಮಾಡಲು ಹೊರಟಿರುವವರು ಮುಂದಿನ ದಿನಗಳಲ್ಲಿ ತಕ್ಕ ಬೆಲೆ ತೆರಲಿದ್ದಾರೆ.

    ದೇಶವನ್ನು ಭಾರತ ಅಥವಾ ಇಂಡಿಯಾ ಎಂದು ಕರೆದರೂ ಯಾವ ತೊಂದರೆ ಇಲ್ಲ. ಆದರೆ ಹೆಸರು ಬದಲಾವಣೆ ಮಾಡಲು ಯಾಕಿಷ್ಟು ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ವಿಪಕ್ಷಗಳ ಒಕ್ಕೂಟ ತಮ್ಮ ಮೈತ್ರಿಕೂಟಕ್ಕೆ I.N.D.I.A ಎಂದು ಹೆಸರಿಟ್ಟ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ನಿರ್ಧಾರ ಮಾಡಿರುವುದು ನನಗೆ ಆಶ್ಚರ್ಯ ಮೂಡಿಸಿದೆ.

    Rahul Gandhi

    ಇದನ್ನೂ ಓದಿ: ಜಿ-20 ಶೃಂಗಸಭೆಯಲ್ಲಿ ನ್ಯೂ ಡೆಲ್ಲಿ ಡಿಕ್ಲರೇಷನ್​ ಅಂಗೀಕಾರ; ಭಾರತದ ಅಧ್ಯಕ್ಷತೆಗೆ ಮಹತ್ವದ ಗೆಲುವು

    ನಾಚಿಕೆಗೇಡಿನ ಸಂಗತಿ

    ಭಾರತದ ಸಂವಿಧಾನವು ಎರಡು ಹೆಸರುಗಳನ್ನು ಬಳಸುತ್ತದೆ. ಎರಡು ಹೆಸರುಗಳೂ ಸರಿಯಾಗಿವೆ. ಆದರೆ, ವಿಪಕ್ಷಗಳ ಮೈತ್ರಿಕೂಟ I.N.D.I.A ಎಂಬ ಹೆಸರಿನಿಂದ ಕೇಂದ್ರ ಬಿಜೆಪಿ ಸರ್ಕಾರ ಭಯಗೊಂಡಂತೆ ಕಾಣುತ್ತಿದೆ. ಅದಕ್ಕೆ ಅವರು ದೇಶದ ಹೆಸರನ್ನು ಬದಲಾಯಿಸಲು ಹೊರಟ್ಟಿದ್ಧಾರೆ ಎಂದು ರಾಹುಲ್​ ಗಾಂಧಿ ಟೀಕಿಸಿದ್ದಾರೆ.

    ಬಿಜೆಪಿ ಹಾಗೂ ಆರ್​ಎಸ್​ಎಸ್​ ಎರಡು ಕೂಡ ಅಲ್ಪಸಂಖ್ಯಾತರನ್ನು ದಮನ ಮಾಡುತ್ತಿದೆ. ಅವರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದ್ದು, ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಇದು ದೇಶಕ್ಕೆ ನಾಚಿಕೆಗೇಡಿನ ವಿಷಯವಾಗಿದ್ದು, ಅಲ್ಪಸಂಖ್ಯಾತರು ತಮ್ಮದೇ ದೇಶದಲ್ಲಿ ಅನಾನುಕೂಲತೆಯನ್ನು ಅನುಭವಿಸುತ್ತಿದ್ದಾರೆ.

    ಸಂವಾದ ಕಾರ್ಯಕ್ರಮದಲ್ಲಿ ಬಿಜೆಪಿಯ ಸಿದ್ದಾಂತವನ್ನು ಟೀಕಿಸಿದ ರಾಹುಲ್​ ಗಾಂಧಿ ಹಿಂದೂ ಮಹಾಕಾವ್ಯಗಳಲ್ಲಿ ಕಲಿಸಲಾಗಿರುವ ಸಿದ್ದಾಂತಗಳೊಂದಿಗೆ ಇವರ ಆಡಳಿತ ಹೊಂದಿಕೆಯಾಗುವುದಿಲ್ಲ. ನಾನು ಭಗವದ್ಗೀತೆ ಸೇರಿದಂತೆ ಹಿಂದೂ ಧರ್ಮಗ್ರಂಥಗಳನ್ನು ಓದಿದ್ಧೇನೆ. ಆದರೆ, ಬಿಜೆಪಿಯವರು ಹೇಳಿರುವ ತರಹ ಎಂದು ನಡೆದುಕೊಂಡಿಲ್ಲ. ಅಧಿಕ್ಕಾರಕಾಗಿ ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ ಎಂದು ರಾಹುಲ್​ ಗಾಂಧಿ ಪ್ಯಾರಿಸ್​ನ ಪಿಒ ವಿಶ್ವವಿದ್ಯಾಲಯದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts