

ಬೆಂಗಳೂರು: ವಿದ್ಯಾರ್ಥಿಗಳು ಗುಂಡಾಗಿರಿ ನಡೆಸಿರುವ ಘಟನೆ ನಿನ್ನೆ, ಯಲಹಂಕ ತಾಲೂಕಿನ ರಾಜನುಕುಂಟೆ ಬಳಿಯ ದಿಬ್ಬೂರಿನ ಪ್ರತಿಷ್ಠಿತ ಪ್ರಸಿಡೆನ್ಸಿ ಕಾಲೇಜು ಬಳಿ ನಡೆದಿದೆ. ಕೆಲ ವಿದ್ಯಾರ್ಥಿಗಳು ರೌಡಿಗಳಂತೆ ದೊಣ್ಣೆ ಹಿಡಿದು ಗುಂಡಾಗಿರಿ ನಡೆಸುತ್ತಿರೋದನ್ನು ಕೆಲ ವಿದ್ಯಾರ್ಥಿನಿಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಪ್ರೆಸೆಡೆನ್ಸಿ ಕಾಲೇಜಿಗೆ ದೇಶದ ನಾನಾ ರಾಜ್ಯಗಳಿಂದ ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿಗಳು ಬಂದಿದ್ದಾರೆ. ಆದ್ರೆ ಈ ಕಾಲೇಜಿನಲ್ಲಿ ಕೆಲ ರೌಡಿಗಳಂತೆ ವರ್ತಿಸೋ ವಿದ್ಯಾರ್ಥಿಗಳು ನಡು ರಸ್ತೆಯಲ್ಲಿ ಕೈನಲ್ಲಿ ವಿಕೆಟ್ ಮತ್ತು ದೊಣ್ಣೆಗಳಿಡಿದು ಓಡಾಡುವ ದೃಶ್ಯ ಕಾಣ ಸಿಕ್ಕಿದೆ. ಪ್ರತಿನಿತ್ಯ ಕಾಲೇಜು ಬಳಿ ಪುಂಡ ಯುವಕರ ಗ್ಯಾಂಗ್ ಈ ರೀತಿ ದೊಣ್ಣೆ ಹಿಡಿದುಕೊಂಡು ದಾಂದಲೆ ನಡೆಸುತ್ತಿದ್ದಾರೆ. ಇದನ್ನು ಕೆಲ ವಿದ್ಯಾರ್ಥಿಗಳು ನೆನ್ನೆ ಸಂಜೆ ಮೊಬೈಲ್ನಲ್ಲಿ ಶೂಟ್ ಮಾಡಿ ವೈರಲ್ ಮಾಡಿದ್ದಾರೆ.
ಇದೀಗ ಪ್ರತಿಷ್ಠಿತ ಕಾಲೇಜಿನ ವಾಯ್ಸ್ ಪ್ರೆಸಿಡೆಂಟ್ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದ್ದು. ತನ್ನ ಕಾಲೇಜು ವಿರುದ್ಧ ಪ್ರತಿಭಟನೆ ಮಾಡಿದ್ದಕ್ಕೆ ಯುವಕನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಆರೋಪ ಕೇಳಿಬರುತ್ತಿದೆ. ಪ್ರೆಸಿಡೆನ್ಸಿ ಕಾಲೇಜು ವಯ್ಸ್ ಪ್ರೆಸಿಡೆಂಟ್ ಸಲ್ಮಾನ್ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದ್ದು. NSUI ನ್ಯಾಶನಲ್ ಕೋ ಆರ್ಡಿನೇಟರ್ ಫಾಹದ್ ಎಂಬಾತ ಆರೋಪ ಮಾಡಿದ್ದಾನೆ.
ಜನವರಿಯಲ್ಲಿ ಪ್ರೆಸಿಡೆನ್ಸಿ ಕಾಲೇಜು ವಿರುದ್ಧ ಫಾಹದ್, ಪರೀಕ್ಷೆ ಮುಂದೂಡಿಕೆ ವಿಚಾರವಾಗಿ ವಿದ್ಯಾರ್ಥಿಗಳ ಪರ ಪ್ರತಿಭಟನೆ ಮಾಡಿದ್ದ. ಈಗ ಅದೇ ದ್ವೇಷದಲ್ಲಿ ಹಲ್ಲೆ ಮಾಡಿ, ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.
ಇತ್ತೀಚೆಗೆ ಕಬ್ಬನ್ ಪಾರ್ಕ್ ಠಾಣಾ ವ್ಯಾಪ್ತಿಯಲ್ಲಿ ಫಿಫಾ ವರ್ಡ್ ಕಪ್ ಮ್ಯಾಚ್ ನೋಡೋಕೆ ಫಾಹದ್ ಬಂದಿದ್ದ. ಈ ವೇಳೆ ಬಂದಿದ್ದ ಸಲ್ಮಾನ್, ಫಾಹದ್ ಮೇಲೆ ಹಲ್ಲೆ ಮಾಡಿ ಬೆದರಿಕೆ ಒಡ್ಡಿದ್ದಾನೆ ಎಂದು ತಿಳಿದುಬಂದಿದೆ. ‘ನನ್ನ ಕಾಲೇಜು ವಿರುದ್ಧ ಪ್ರತಿಭಟನೆ ಮಾಡ್ತೀಯಾ’ ಎಂದು ಗೂಂಡಾಗಿರಿ ಮಾಡಿರುವ ಆರೋಪ ಕೇಳಿಬಂದಿದ್ದು ಈ ಬಗ್ಗೆ ಫಾಹದ್ ಕಬ್ಬನ್ ಪಾರ್ಕ್ ಠಾಣೆಗೆ ದೂರು ನೀಡಿದ್ದಾನೆ. ಸದ್ಯಕ್ಕೆ ಪ್ರಕರಣವನ್ನು ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಾ ಇದ್ದಾರೆ.