

ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗಬೇಕು ಎನ್ನುವುದು ಇಂದು ನಿನ್ನೆಯ ಹೋರಾಟ ಅಲ್ಲ. ಬೆಳಗಾವಿಯಲ್ಲಿ ಅಧಿವೇಶನ ಶುರುವಾಗಿದ್ದು ಅದು ಮುಗಿಯುವುದರ ಒಳಗಾಗಿ ಮೀಸಲಾತಿ ನೀಡಬೇಕು ಎಂದು ಬಸವ ಮೃತ್ಯುಂಜಯ ಸ್ವಾಮೀಜಿ ಡೆಡ್ ಲೈನ್ ಕೂಡ ನೀಡಿದ್ದಾರೆ. ಇದೀಗ ಕಾಂಗ್ರೆಸ್ ನಾಯಕ ಲಕ್ಷ್ಮಣ್ ಹೊಸ ಬಾಂಬ್ ಸಿಡಿಸಿದ್ದು ಮುಸ್ಲಿಂ ಸಮುದಾಯದ ಮೀಸಲಾತಿ ತೆಗೆದು ಪಂಚಮಸಾಲಿ ಸಮುದಾಯಕ್ಕೆ ಬಿಜೆಪಿ ಸರ್ಕಾರ ನೀಡಲಿದೆ ಎಂದಿದ್ದಾರೆ.
ಕಾಂಗ್ರೆಸ್ ಮುಖಂಡ ಲಕ್ಷ್ಮಣ್ ಹೇಳಿಕೆ ನೀಡಿದ್ದು ’ನನಗೆ ಬಂದ ಖಚಿತ ಮಾಹಿತಿಯ ಪ್ರಕಾರ ಪಂಚಮಸಾಲಿ ಸಮುದಾಯದವರಿಗೆ ಸರ್ಕಾರ 2% ಮೀಸಲಾತಿ ಹೆಚ್ಚಿಸಲು ಮುಂದಾಗಿದೆ. ಮುಸ್ಲಿಂ ಸಮುದಾಯದ ೨ಬಿ ಕೋಟಾದಿಂದ 2% ಕಡಿತ ಮಾಡಿ ಪಂಚಮಸಾಲಿ ಸಮಯದಾಯಕ್ಕೆ ಕೊಡಲು ಸರಕಾರ ನಿರ್ಧರಿಸಿದೆ. ಮುಸ್ಲಿಮರ ಮೀಸಲಾತಿಯಲ್ಲಿ ಕಡಿತ ಮಾಡಿ ಕೊಡಲು ಆರ್.ಎಸ್.ಎಸ್ ಹಾಗೂ ಕೇಂದ್ರದ ಬಿಜೆಪಿ ಸೂಚನೆ ನೀಡಿದೆ.
ಪಂಚಮಸಾಲಿ ಸಮುದಾಯ ಇನ್ನೊಂದು ಸಮುದಾಯಕ್ಕೆ ಕಡಿತ ಮಾಡಿ ಮೀಸಲಾತಿ ಪಡೆಯುವುದು ಬೇಡ. 2ಎ ಗೆ ಸೇರಿಸಿ ಅನ್ನೋದು ಅವರ ಬೇಡಿಕೆ. ಹೋರಾಟ ಮಾಡ್ತಿದಾರೆ ಮಾಡಲಿ. ಆದರೆ ಸರ್ಕಾರ ಇನ್ನೊಂದು ಸಮುದಾಯದ ಮೀಸಲಾತಿ ಕೊಡಲು ಮುಂದಾಗಿದೆ’ ಎಂದಿದ್ದಾರೆ. ಇನ್ನೊಂದು ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಲಕ್ಷ್ಮಣ್, ಬಿಜೆಪಿ ಸರ್ಕಾರ ಇವತ್ತೇ ಆ ಘೋಷಣೆ ಮಾಡಿದರೂ ಮಾಡಬಹುದು ಎಂದಿದ್ದಾರೆ!
ಬಿಜೆಪಿ ಸರ್ಕಾರ ಹಾಗೆ ಮಾಡಿದಲ್ಲಿ ವಿರಾಟ ಪಂಚಶಕ್ತಿ ಯಾತ್ರೆ ವಿಜಯೋತ್ಸವ ಆಗಿ ಬದಲಾಗುತ್ತದೆ.