

ನವದೆಹಲಿ: ಕಾಮನ್ ವೆಲ್ತ್ ಗೇಮ್ಸ್‌ನಲ್ಲಿ ಬಂಗಾರದ ಪದಕ ಗೆದ್ದ ಆಸ್ಟ್ರೇಲಿಯನ್ ವೇಟ್‌ಲಿಫ್ಟರ್ ಮತ್ತು ಕ್ರಾಸ್‌ಫಿಟ್ ಗೇಮ್ಸ್ ಅಥ್ಲೀಟ್, ಟಿಯಾ ಕ್ಲೇರ್ ಟೂಮೀ ಹೆರಿಗೆಗೆ ಎರಡು ವಾರವಿರುವಾಗ ಮಾಡಿದ ವರ್ಕೌಟ್ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಟಿಯಾ ಕ್ಲೇರ್ ಟೂಮೀ ಅವರು ಕ್ರೀಡಾಪಟು ಆಗಿರುವುದರಿಂದ ಆರೋಗ್ಯ ಮತ್ತು ಫಿಟ್ನೆಸ್ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಿದ್ದರು. ಹೀಗಾಗಿ ತುಂಬುಗರ್ಭಿಣಿ ಆಗಿದ್ದರು ಕೂಡಾ ವರ್ಕೌಟ್ ಮಾಡುವುದನ್ನು ಮಾತ್ರ ಬಿಟ್ಟಿರಲಿಲ್ಲ. ತುಂಬುಗರ್ಭಿಣಿ ಆಗಿದ್ದ ವೇಳೆ ಜಿಮ್ನಲ್ಲಿ ವರ್ಕೌಟ್ ಮಾಡುತ್ತಾ ಬೆವರು ಹರಿಸಿದ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಈಕೆ ಹೀಗೆ ಇಂಥ ಸಂದರ್ಭದಲ್ಲಿ ಅಜಾಗರೂಕತೆಯಿಂದ ವರ್ತಿಸಲು ಸಾಧ್ಯವೆ? ಮಗು ಜೋಪಾನ..ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಇಂತಹ ಪ್ರಯತ್ನವನ್ನು ಯಾರು ಮಾಡಬೇಡಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಟಿಯಾ ಕ್ಲೇರ್ ಮೇ 9ರಂದು ಮುದ್ದಾದ ಹೆಣ್ಣುಮಗುವಿಗೆ ಜನ್ಮಕೊಟ್ಟಿದ್ದಾಳೆ. ಈ ಮಗುವಿಗೆ ವಿಲ್ಲೋ ಕ್ಲೇರ್ ಆರ್ ಎಂಬ ಹೆಸರನ್ನು ಇಟ್ಟಿದ್ದಾರೆ. ತನ್ನ ಬದುಕನ್ನು ಸುಂದರಗೊಳಿಸಿದ ಮಗಳು ಮತ್ತು ಪತಿ ಶೇನ್ ಓರ್ಗೆ ಧನ್ಯವಾದ ತಿಳಿಸಿದ್ಧಾಳೆ.
ಕಾಮನ್ ವೆಲ್ತ್ ಗೇಮ್ಸ್‌ನಲ್ಲಿ ಬಂಗಾರದ ಪದಕ ಗೆದ್ದ ಟಿಯಾ ಕ್ಲೇರ್ ಟೂಮೀ ಆರ್ ಆಸ್ಟ್ರೇಲಿಯನ್ ವೇಟ್‌ಲಿಫ್ಟರ್ ಮತ್ತು ಕ್ರಾಸ್‌ಫಿಟ್ ಗೇಮ್ಸ್ ಅಥ್ಲೀಟ್. ಕ್ರಾಸ್‌ಫಿಟ್ ಗೇಮ್ಸ್‌ನಲ್ಲಿ ಸತತ ಆರು ಬಾರಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.