ಧಾರಾಕಾರ ಮಳೆ ನಡುವೆಯೇ ಕಾಣಿಸಿಕೊಂಡ ಹೆರಿಗೆ ನೋವು! JCB ಸಹಾಯದಿಂದ ಹೊಳೆ ದಾಟಿಸಿದ ಸ್ಥಳೀಯರು

telengana
Published on

ತೆಲಂಗಾಣ: ಧಾರಾಕಾರ ಮಳೆ ನಡುವೆಯೇ ಮಹಿಳೆಯೊಬ್ಬಳಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಹೆರಿಗೆ ನೋವಿನಿಂದ ಬಳಲುತ್ತಿದ್ದ ಆಕೆಯನ್ನು ಸ್ಥಳೀಯರು ಕಷ್ಟಪಟ್ಟು ಜೆಸಿಬಿ ಸಹಾಯದಿಂದ ನದಿ ದಾಟಿಸಿದ್ದಾರೆ. ಜಗಿತ್ಯಾಲ ಜಿಲ್ಲೆಯ ಮೇಡಿಪಲ್ಲಿ ಮಂಡಲದ ರಾಜಲಿಂಗಂಪೇಟೆಯಲ್ಲಿ ಈ ಘಟನೆ ನಡೆದಿದೆ.

ಹೆರಿಗೆ ನೋವು ಕಾಣಿಸಿಕೊಂಡಾಗ ಕುಟುಂಬಸ್ಥರು ಆಕೆಯನ್ನು ಕೋರುಟ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲು ಯತ್ನಿಸಿದ್ದಾರೆ. ಆದರೆ, ಗ್ರಾಮದ ಸಮೀಪ ರಸ್ತೆಗೆ ಅಡ್ಡಲಾಗಿ ನೀರು ಹರಿಯುತ್ತಿದ್ದರಿಂದ ರಸ್ತೆ ದಾಟಲು ಸಾಧ್ಯವಾಗಲಿಲ್ಲ.

ಜಲಾವೃತಗೊಂಡ ರಸ್ತೆಯನ್ನು ದಾಟುವುದು ಹೇಗೆ ಎಂದು ಯೋಚಿಸಿದ್ದಾರೆ. ಅಸಹಾಯಕರಾದ ಕುಟುಂಬಸ್ಥರು ಗ್ರಾಮ ಪಂಚಾಯತಿ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ನಂತರ ಜೆಸಿಬಿ ವ್ಯವಸ್ಥೆ ಮಾಡುವ ಮೂಲಕ ಮಹಿಳೆಗೆ ರಸ್ತೆ ದಾಟಲು ಸಹಾಯ ಮಾಡಿದರು. ನಂತರ, ರಸ್ತೆಯ ಇನ್ನೊಂದು ಬದಿಯಲ್ಲಿ ಸಿದ್ಧವಾಗಿದ್ದ ಆಂಬ್ಯುಲೆನ್ಸ್‌ನಲ್ಲಿ ಆಕೆಯನ್ನು ಕೋರುಟ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net