ಇಸ್ಲಾಂಗೆ ಮತಾಂತರವಾಗುವಂತೆ ಒತ್ತಡ: ಗರ್ಭಿಣಿಗೆ ವಿಷಪ್ರಾಶನ

pregnant women
ಸಾಂದರ್ಭಿಕ ಚಿತ್ರ
Published on

ಶಹಜಾನ್​ಪುರ: ಇಸ್ಲಾಂಗೆ ಮತಾಂತರವಾಗುವಂತೆ ವ್ಯಕ್ತಿಯೋರ್ವ ಒತ್ತಡ ಹೇರಿದ್ದು, ಗರ್ಭಿಣಿ ಮಹಿಳೆ ಮೃತಟ್ಟಿರುವ ಆಘಾತಕಾರಿ ಘಟನೆ ಉತ್ತರಪ್ರದೇಶದ ಶಹಜಾನ್​ಪುರದಲ್ಲಿ ನಡೆದಿದೆ.

ಲಖಿಂಪುರದ ಸೀಮಾ ಗೌತಮ್(24) ಮೃತಮಹಿಳೆಯಾಗಿದ್ದು, ಆಕೆಗೆ ವಿಷಪ್ರಾಶನ ಮಾಡಿಸಿ ಕೊಲೆ ಮಾಡಲಾಗಿದೆ ಎಂದು ಆಕೆಯ ಸಹೋದರ ಆರೋಪಿಸಿದ್ದಾನೆ.

ಇನ್ನು, ನಾವೇದ್ ಹಾಗೂ ಸೀಮಾ ಕಳೆದ ಒಂದೂವರೆ ವರ್ಷದಿಂದ ಲಿವ್​ ಇನ್​ ರಿಲೇಷನ್​ ಶಿಪ್​ನಲ್ಲಿದ್ದು, ಬಾಡಿಗೆ ಮನೆಯೊಂದರಲ್ಲಿ ಒಟ್ಟಾಗಿ ವಾಸಿಸುತ್ತಿದ್ದ ವೇಳೆ ಗರ್ಭಿಣಿ ಕೂಡ ಆಗಿದ್ದಳು. ಈ ಸಂದರ್ಭದಲ್ಲಿ ನಾವೇದ್​ ಆಕೆಗೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಡ ಹೇರುತ್ತಿದ್ದ.

ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ನಾವೇದ್ ಮತ್ತು ಫರ್ಹಾನ್ ಎಂಬುವರು ಸೀಮಾಳನ್ನು ಆಸ್ಪತ್ರೆಗೆ ಕರೆತಂದಿದ್ದರು. ಆಗ ಮಹಿಳೆಯನ್ನು ನಾವೇದ್ ಪತ್ನಿ ಜೋಯಾ ಸಿದ್ದಿಕಿ ಎಂದು ಇಬ್ಬರೂ ಆರೋಪಿಗಳು ಆಸ್ಪತ್ರೆಯ ಅಧಿಕಾರಿಗಳಿಗೆ ತಿಳಿಸಿದ್ದರು. ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ ಕೂಡಲೇ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net