ಅಧ್ಯಕ್ಷರಾಗಿ ಪ್ರೇಮಕುಮಾರ್ ಆಯ್ಕೆ

13HANGODU1
Published on

ಹನಗೋಡು: ಹೋಬಳಿಯ ಕರಣಕುಪ್ಪೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಪ್ರೇಮಕುಮಾರ್, ಉಪಾಧ್ಯಕ್ಷರಾಗಿ ಶೈಲಜಾ ಅವಿರೋಧವಾಗಿ ಆಯ್ಕೆಯಾದರು.

ಕರಣಕುಪ್ಪೆ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಶನಿವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪ್ರೇಮಕುಮಾರ್, ಉಪಾಧ್ಯಕ್ಷ ಸ್ಥಾನಕ್ಕೆ ಶೈಲಜಾ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಸಹಕಾರ ಇಲಾಖೆಯ ಗಿರೀಶ್ ಚುನಾವಣಾಧಿಕರಿಯಾಗಿ ಕರ್ತವ್ಯ ನಿರ್ವಹಿಸಿದರು. ನಿರ್ದೇಶಕರಾದ ಕೆ.ಎಸ್. ವಿರೂಪಾಕ್ಷ, ನಂಜುಂಡಪ್ಪ, ಕೆ.ಪಿ. ರವೀಂದ್ರ, ಕೆ.ಎನ್. ರಾಜಶೇಖರ್, ಚೇತನ್ ಕುಮಾರ್, ಕೆ.ಆರ್. ಲೋಕೇಶ್, ಮಂಜುಳಾ, ಪುಟ್ಟನಂಜಶೆಟ್ಟಿ, ಕುಳ್ಳಶೆಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net