ಮದುವೆ ವೇದಿಕೆಯಲ್ಲೇ ವಧುವಿನ ಕೆನ್ನೆ ಮುಟ್ಟಿದ ಸ್ನೇಹಿತನಿಗೆ ಶಾಕ್​ ಕೊಟ್ಟ ವರ! ವಿಡಿಯೋ ವೈರಲ್​

Bride Groom
Published on

ನವದೆಹಲಿ: ಭಾರತದಲ್ಲಿ ಪ್ರಸ್ತುತ ಮದುವೆ ಸೀಸನ್​ ನಡೆಯುತ್ತಿದೆ. ಈ ಸಂದರ್ಭದಲ್ಲಿ ಪ್ರತಿದಿನ ನೂರಾರು ಮದುವೆಗಳು ನಡೆಯುತ್ತಿರುತ್ತವೆ. ವಿವಾಹಕ್ಕೆ ಸಂಬಂಧಿಸಿದ ಅನೇಕ ವಿಡಿಯೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ ಶೇರ್​ ಮಾಡಲಾಗುತ್ತಿದೆ. ಅವುಗಳಲ್ಲಿ ಕೆಲವೊಂದಿಷ್ಟು ವಿಡಿಯೋ ವಿಶೇಷ ಕಾರಣಗಳಿಂದಾಗಿ ವೈರಲ್​ ಆಗಿಬಿಡುತ್ತವೆ. ಇದೀಗ ಆ ಸಾಲಿಗೆ ಮತ್ತೊಂದು ವಿಡಿಯೋ ಸೇರ್ಪಡೆಯಾಗಿದೆ.

ಮದುವೆಯ ವೇದಿಕೆಯಲ್ಲಿ ವರನನ್ನು ಕೆಣಕಲು ವಧುವಿನ ಕೆನ್ನೆ ಹಿಡಿದು ರೇಗಿಸಲು ಹೋದ ಸ್ನೇಹಿತನಿಗೆ ವರ ಕಪಾಳಮೋಕ್ಷ ಮಾಡಿರುವ ವಿಡಿಯೋ ಇದೀಗ ವೈರಲ್​ ಆಗಿದೆ.

ವಿಡಿಯೋದಲ್ಲಿ ಏನಿದೆ?

ವರ ಮತ್ತು ವಧು ವೇದಿಕೆ ಮೇಲೆ ಕುಳಿತಿರುವುದನ್ನು ಕಾಣಬಹುದು. ಈ ವೇಳೆ ವಧು ಕುಳಿತಿದ್ದ ಕುರ್ಚಿಯ ಹಿಂದಿನಿಂದ ಬರುವ ವರನ ಸ್ನೇಹಿತನೊಬ್ಬ, ವಧುವಿನ ಕೆನ್ನೆಗೆ ಕೈಹಾಕಿ ಕೀಟಲೆ ಮಾಡಲು ಆರಂಭಿಸುತ್ತಾನೆ. ಇದರಿಂದ ವಧು ಅಸಮಾಧಾನಗೊಂಡಿರುವಂತೆ ಕಾಣುತ್ತಾನೆ. ಇದನ್ನು ನೋಡಿದ ವರ ತಕ್ಷಣ ಮೇಲೆದ್ದು ಸ್ನೇಹಿತನಿಗೆ ಕೆನ್ನೆಗೆ ಬಾರಿಸುತ್ತಾನೆ.

ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಆಶಿಕ್​ ಬಿಲ್ಲೋಟ ಹೆಸರಿನ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಪೋಸ್ಟ್​ ಮಾಡಲಾಗಿದ್ದು, ಈವರೆಗೂ 45 ಸಾವಿರಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ಅಲ್ಲದೆ, 2 ಸಾವಿರಕ್ಕೂ ಹೆಚ್ಚು ಲೈಕ್ಸ್​ ಬಂದಿವೆ.

ವಿಡಿಯೋ ನೋಡಿದ ನೆಟ್ಟಿಗರು ಬಗೆಬಗೆಯ ಕಾಮೆಂಟ್​ ಮಾಡಿದ್ದಾರೆ. ಹೊಡೆಯುವ ಮೊದಲು ಎಚ್ಚರಿಕೆ ನೀಡಬೇಕಿತ್ತು ಎಂದು ನೆಟ್ಟಿಗನೊಬ್ಬ ಹೇಳಿದ್ದಾರೆ. ವಿಡಿಯೋ ನೋಡಿದರೆ ಸ್ಕ್ರಿಪ್ಟೆಡ್​ ಅನಿಸುತ್ತಿದೆ ಎಂದು ಮತ್ತೊಬ್ಬ ನೆಟ್ಟಿಗ ಕಾಮೆಂಟ್​ ಮಾಡಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸುತ್ತದೆ ಎಂಬುದನ್ನು ನಮಗೆ ಕಾಮೆಂಟ್​ ಮಾಡಿ ತಿಳಿಸಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net