ಮಕ್ಕಳಿಬ್ಬರನ್ನು ಕೊಂದು ಪತ್ನಿಯೊಂದಿಗೆ ಸಾವಿನ ಶರಣಾದ ಬಿಜೆಪಿ ನಾಯಕ: ಟ್ವೀಟ್​ನಲ್ಲಿತ್ತು ಸಾವಿನ ರಹಸ್ಯ

MP BPJ Leader
Published on

ಭೋಪಾಲ್​: ಮಕ್ಕಳಿಬ್ಬರನ್ನು ಕೊಲೆಗೈದು, ಬಿಜೆಪಿ ನಾಯಕ ಮತ್ತು ಆತನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ವಿಧಿಶಾದಲ್ಲಿ ನಡೆದಿದೆ.

ಮೃತರನ್ನು ಬಿಜೆಪಿ ನಾಯಕ ಸಂಜೀವ್​ ಮಿಶ್ರಾ (45), ಪತ್ನಿ ನೀಲಮ್​ (42) ಮತ್ತು ಅವರ ಮಕ್ಕಳಾದ ಅನ್ಮೋಲ್​ (13) ಹಾಗೂ ಸಾರ್ಥಕ್​ (7) ಎಂದು ಗುರುತಿಸಲಾಗಿದೆ. ಮಕ್ಕಳಿಬ್ಬರು ಮಸ್ಕುಲರ್​ ಡೈಸ್ಟ್ರೋಫಿ ಕಾಯಿಲೆಯಿಂದ ಬಳಲುತ್ತಿದ್ದರು. ಇದರಿಂದ ದಂಪತಿ ಒತ್ತಡಕ್ಕೆ ಒಳಗಾಗಿದ್ದರು ಎಂದು ತಿಳಿದುಬಂದಿದೆ.

ದೇವರು ಶತ್ರುವಿನ ಮಕ್ಕಳನ್ನು ಇಂತಹ ಕಾಯಿಲೆಯಿಂದ ಪಾರು ಮಾಡಲಿ. ನನ್ನ ಮಕ್ಕಳನ್ನು ಉಳಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ, ಇನ್ನು ನನಗೆ ಬದುಕಲು ಇಷ್ಟವಿಲ್ಲ ಎಂದು ಮಿಶ್ರಾ ಟ್ವೀಟ್ ಮಾಡಿದ್ದಾರೆ.

ಟ್ವೀಟ್ ನೋಡಿ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಬೀಗ ಹಾಕಿದ್ದ ಬಾಗಿಲು ಒಡೆದು ನಾಲ್ವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೇ ನಾಲ್ವರು ಕೂಡ ಮೃತಪಟ್ಟಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net