ಕೋಮಾದಲ್ಲಿಯೇ ಇದ್ದಾರೆ ಪ್ರಣಬ್​ ಮುಖರ್ಜಿ; ಶ್ವಾಸಕೋಶದ ಸೋಂಕಿಗೆ ಚಿಕಿತ್ಸೆ

Pranab Mukharjee
Published on

ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಅವರ ಆರೋಗ್ಯದಲ್ಲಿ ತುಸು ಚೇತರಿಕೆ ಕಂಡುಬಂದಿದೆ. ದುರ್ಬಲಗೊಂಡಿದ್ದ ಮೂತ್ರ ಪಿಂಡದ ನಿಯತಾಂಕಗಳು ಇದೀಗ ಸ್ವಲ್ಪ ಮಟ್ಟಿಗೆ ಸುಧಾರಿಸಿವೆ ಎಂದು ಆರ್ಮಿ ರಿಸರ್ಚ್​ ಆ್ಯಂಡ್​ ರೆಫರೆಲ್​ ಆಸ್ಪತ್ರೆ ಇಂದು ಹೆಲ್ತ್​ ಬುಲೆಟಿನ್​​ನಲ್ಲಿ ಮಾಹಿತಿ ನೀಡಿದೆ.

ಮಿದುಳಿನ ಸರ್ಜರಿಗಾಗಿ ಆಗಸ್ಟ್​ 10ರಂದು ದಾಖಲಾಗಿದ್ದ ಪ್ರಣಬ್​ ಮುಖರ್ಜಿ, ಸರ್ಜರಿಯ ಬಳಿಕ ವೆಂಟಿಲೇಟರ್​ನಲ್ಲಿ ಇದ್ದಾರೆ. ಅವರಲ್ಲಿ ಕೊವಿಡ್​-19 ಸೋಂಕು ಕೂಡ ದೃಢಪಟ್ಟಿದೆ.

ಪ್ರಸ್ತುತ ಪ್ರಣಬ್​ ಮುಖರ್ಜಿ ಅವರಿಗೆ ಶ್ವಾಸಕೋಶದ ಸೋಂಕಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೂತ್ರಪಿಂಡದ ನಿಯತಾಂಕಗಳೂ ಸುಧಾರಿಸಿವೆ. ಆದರೆ ಸಂಪೂರ್ಣ ಕೋಮಾದಲ್ಲಿಯೇ ಇದ್ದಾರೆ. ವೆಂಟಿಲೇಟರ್​ನಲ್ಲಿ ಇಡಲಾಗಿದೆ ಎಂದು ಆಸ್ಪತ್ರೆ ತಿಳಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net