ದೇಶದಲ್ಲಿ ಒಂದೇ ದಿನ 75,000ಕ್ಕೂ ಅಧಿಕ ಕರೊನಾ ಕೇಸ್​​; 'ಇನ್ನಾದರೂ ಎಚ್ಚರಗೊಳ್ಳಿ' ಎಂದ ಕಾಂಗ್ರೆಸ್​

Covid 19 In Country
Published on

ನವದೆಹಲಿ: ದೇಶದಲ್ಲಿ ಒಂದೆಡೆ ಅನ್​ಲಾಕ್​-4ನೇ ಹಂತ ಜಾರಿಯಾಗಿದ್ದು, ಇನ್ನೊಂದೆಡೆ ಕೊವಿಡ್​-19 ಪ್ರಕರಣಗಳೂ ಹೆಚ್ಚುತ್ತಿವೆ.

ಕಳೆದ 24 ಗಂಟೆಯಲ್ಲಿ ಬರೋಬ್ಬರಿ 76, 472 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇದು ಇಲ್ಲಿಯವರೆಗಿನ ದಾಖಲೆಯಾಗಿದೆ. ಸದ್ಯ ದೇಶದ ಕರೊನಾ ಸೋಂಕಿತರ ಸಂಖ್ಯೆ 34,63,972ಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನ 1021 ಸೋಂಕಿತರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 62,635ಕ್ಕೆ ತಲುಪಿದೆ.

ಇಷ್ಟೆಲ್ಲ ಆದರೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಕಾಂಗ್ರೆಸ್​ ವಾಗ್ದಾಳಿ ನಡೆಸಿದೆ. ದೇಶ ಸಾವಿನ ಬಲೆಯಲ್ಲಿ ಸಿಲುಕಿದೆ. ಕಳೆದ 5 ತಿಂಗಳಲ್ಲಿ ನಮ್ಮ 62,635 ಸೋದರ-ಸೋದರಿಯರು ಕರೊನಾಕ್ಕೆ ಬಲಿಯಾಗಿದ್ದಾರೆ. ಮೋದಿ ಮತ್ತು ಅವರ ಸಂಗಡಿಗರಿಗೆ ಧನ್ಯವಾದ ಹೇಳಬೇಕು ಎಂದು ವ್ಯಂಗ್ಯಮಾಡಿದೆ.ಹಾಗೇ ಇನ್ನಾದರೂ ಬಿಜೆಪಿ ಸರ್ಕಾರ ಎಚ್ಚರಗೊಳ್ಳಲಿದೆಯಾ? ಎಂದು ಕಾಂಗ್ರೆಸ್​  ಆಕ್ರೋಶ ಹೊರಹಾಕಿದೆ.

ಸದ್ಯ ದೇಶದಲ್ಲಿ 26,48,999 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಡಿಸ್​ಚಾರ್ಜ್​ ಆಗಿದ್ದು, ಸಕ್ರಿಯ ಪ್ರಕರಣಗಳು 7, 52,424 .

ಇನ್ನು ಕೊವಿಡ್​-19 ವಿಚಾರಕ್ಕೆ ಬಂದರೆ ಮೊದಲಿನಿಂದಲೂ ಕಾಂಗ್ರೆಸ್ ಮುಖಂಡರು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕುತ್ತಲೇ ಬಂದಿದ್ದಾರೆ. ಕರೊನಾ ನಿಯಂತ್ರಣದಲ್ಲಿ ಮೋದಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ರಾಹುಲ್​ ಗಾಂಧಿಯವರೂ ಹಲವು ಬಾರಿ ಆರೋಪಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net