

ಪ್ರಾಣಮುದ್ರೆಯ ಬಗ್ಗೆ ಹಾಗೂ ಅದರ ಪ್ರಯೋಜನದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿ.
| ಕೃಷ್ಣ ಬೆಂಗಳೂರು.
ಪ್ರಾಣಮುದ್ರೆಯು ಪ್ರಾಣಶಕ್ತಿ ಹೆಚ್ಚಿಸಿ, ನರದೌರ್ಬಲ್ಯ, ಆಯಾಸವನ್ನು ಪರಿಹರಿಸಿ ಶರೀರದಲ್ಲಿ ಲವಲವಿಕೆಯನ್ನು ತುಂಬುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ ದೇಹದ ವಿಟಮಿನ್ಗಳ ಪೂರೈಕೆಗೆ ಸಹಕಾರಿಯಾಗುತ್ತದೆ. ನೇತ್ರಸಂಬಂಧಿ ತೊಂದರೆ, ಕಾಲುಗಳಲ್ಲಿಯೂ ನೋವು ನಿಯಂತ್ರಣ. ಉಪವಾಸ ಸಮಯದಲ್ಲಿ ಹಸಿವು, ಬಾಯಾರಿಕೆ ನಿಯಂತ್ರಿಸಲು ಸಹಾಯ ಮಾಡುತ್ತದೆ.
ಮುದ್ರೆಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ತಿಳಿಸಿ
| ಡಿ.ವಿ. ಭಟ್ ಮೈಸೂರು
ಮುದ್ರೆಯು ಒಂದು ಗೆಸ್ಚರ್ ಅಥವಾ ಸ್ಥಾನವಾಗಿದೆ. ಸಾಮಾನ್ಯವಾಗಿ ಕೈಗಳು ಶಕ್ತಿಯ ಹರಿವನ್ನು ಲಾಕ್ ಮಾಡುತ್ತದೆ ಮತ್ತು ಮಾರ್ಗದರ್ಶನ ಮಾಡುತ್ತದೆ. ಕುಲಾರ್ಣವ ತಂತ್ರ ಗ್ರಂಥದ ಪ್ರಕಾರ ಮುದ್ರೆಯ ಬಗ್ಗೆ ಈ ರೀತಿ ತಿಳಿಸಲಾಗಿದೆ. ಮುದ್ರೆ ಎಂದರೆ ಆನಂದ, ಸಂತೋಷ ಮತ್ತು ಹೊರಸೆಳೆಯುವುದು. ಮುದ್ರೆಗಳು ಉನ್ನತ ಹಂತದ ಅಭ್ಯಾಸಗಳಾಗಿವೆ. ಗುರುಮುಖೇನವೇ ಕಲಿತು ಅಭ್ಯಾಸ ಮಾಡಿ.
ಮುದ್ರೆಗಳನ್ನು ಯೋಗದ ಅಂಶವೆಂದು ಪರಿಗಣಿಸಲಾಗುತ್ತಿದೆ. ಕೈಯ ಬೆರಳುಗಳನ್ನು ವ್ಯವಸ್ಥಿತ ಭಂಗಿಯಲ್ಲಿ ಜೋಡಿಸುವ ಕ್ರಿಯೆಯೇ ಮುದ್ರೆ. ನಮ್ಮ ಭೌತಿಕ ದೇಹವು ಐದು ಮೂಲಭೂತ ಅಂಶಗಳಿಂದ (ಪಂಚತತ್ತ್ವ) ಕೂಡಿದೆ. ಅವುಗಳೆಂದರೆ ಬೆಂಕಿ, ಗಾಳಿ, ನೀರು, ಆಕಾಶ ಮತ್ತು ಭೂಮಿ. ಪ್ರತಿಯೊಂದು ಬೆರಳು ತನ್ನದೇ ಆದ ಚೈತನ್ಯಶಕ್ತಿಯನ್ನು ಹೊಂದಿದೆ. ಹೆಬ್ಬೆರಳು ಅಗ್ನಿತತ್ವ; ತೋರುಬೆರಳು ವಾಯುತತ್ವ, ಮಧ್ಯದ ಬೆರಳು ಆಕಾಶತತ್ವ; ಉಂಗುರದ ಬೆರಳು ಪೃಥ್ವಿತತ್ವ; ಕಿರುಬೆರಳು ವರುಣತತ್ವಗಳನ್ನು ಪ್ರತಿನಿಧಿಸುತ್ತವೆ. ಪಂಚಭೂತಗಳನ್ನು ಪ್ರತಿನಿಧಿಸುವ ಹೆಬ್ಬೆರಳಿನ ತುದಿಯನ್ನು ಆಯಾ ಬೆರಳುಗಳ ತುದಿಗೆ ರ್ಸ³ಸಿದಾಗ ಪಂಚತತ್ವಗಳು ಸಮತೋಲನ ಸ್ಥಿತಿಗೆ ಬರುತ್ತವೆ. ಆರೋಗ್ಯವನ್ನು ಪುನಃ ಸ್ಥಾಪಿಸಲು ಮತ್ತು ಕಾಪಾಡಿಕೊಳ್ಳಲು ಮುದ್ರೆಗಳನ್ನು ಸಾವಿರಾರು ವರ್ಷಗಳಿಂದ ಬಳಸಲಾಗುತ್ತದೆ. ಮೂಲತಃ ಮುದ್ರೆಗಳನ್ನು ಋಷಿಗಳು ಆಚರಣೆಗಳು, ವಿಶ್ರಾಂತಿ ಮತ್ತು ಆಳವಾದ ಧ್ಯಾನಕ್ಕಾಗಿ ಬಳಸುತ್ತಿದ್ದರು. ಹಿಂದೂದೇವರ ಮತ್ತು ದೇವತೆಗಳ ಹೆಚ್ಚಿನ ವಿಗ್ರಹಗಳು ಮತ್ತು ಚಿತ್ರಗಳು ಕೆಲವು ರೀತಿಯ ಮುದ್ರೆಗಳನ್ನು ಹೊಂದಿವೆ.
ಎಲ್ಲಿ ಬೇಕಾದರೂ ಮುದ್ರಾಭ್ಯಾಸವನ್ನು ಮಾಡಬಹುದು. ಮನೆಯಲ್ಲಿ, ಬಸ್ / ರೈಲು ನಿಲ್ದಾಣದಲ್ಲಿ, ಸಿನಿಮಾ ಥಿಯೇಟರ್ನಲ್ಲಿ ಅಥವಾ ಕಚೇರಿಯಲ್ಲಿ ಆಸನದಲ್ಲಿ ಕುಳಿತೇ ಮಾಡಬಹುದು. ಮುದ್ರೆಗಳನ್ನು ಯಾವುದೇ ಸ್ಥಿತಿಯಲ್ಲೂ ಮಾಡಬಹುದಾದರೂ ವಿಶೇಷವಾಗಿ ಪದ್ಮಾಸನ, ಸ್ವಸ್ತಿಕಾಸನ, ಸುಖಾಸನ ಅಥವಾ ವಜ್ರಾಸನ ಹಾಕಿ ಧ್ಯಾನಾವಸ್ಥೆಯಲ್ಲಿ ಕುಳಿತು ಮಾಡುವುದರಿಂದ ದೇಹಕ್ಕೆ ಹೆಚ್ಚಿನ ಚೈತನ್ಯ ಹಾಗೂ ಮನಸ್ಸಿಗೆ ನೆಮ್ಮದಿ ದೊರಕುತ್ತದೆ. ಒಂದೊಂದು ಮುದ್ರೆಯನ್ನು ಕನಿಷ್ಠ 10ರಿಂದ 30 ನಿಮಿಷಗಳವರೆಗೆ ಮಾಡಿದಲ್ಲಿ ಫಲ ದೊರಕುವುದು. ಈ ಸ್ಥಿತಿಯಲ್ಲಿ ಸಮ ಉಸಿರಾಟ ನಡೆಸುತ್ತಿರಬೇಕು ಹಾಗೂ ಶರೀರವನ್ನು ಪೂರ್ತಿ ಸಡಿಲಗೊಳಿಸಿರಬೇಕು.