More

    ಜುಲೈ 31ರ ವರೆಗೆ ಲಾಕ್​ಡೌನ್​; ಶಾಲಾ-ಕಾಲೇಜುಗಳು ಬಂದ್​; ಕರೊನಾ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೆಲ್ಲಿ?

    ನವದೆಹಲಿ: ಕರ್ನಾಟಕದಲ್ಲಿ ಅದರಲ್ಲೂ ಬೆಂಗಳುರಿನಲ್ಲಿ ಕರೊನಾ ಹೊಸ ಪ್ರಕರಣಗಳ ಸಂಖ್ಯೆ ಮಿತಿ ಇಲ್ಲದೇ ಏರುತ್ತಿದೆ. ಜತೆಗೆ ಟ್ರಾವೆಲ್​ ಹಿಸ್ಟರಿಯೇ ಇಲ್ಲದಿರುವ ಪ್ರಕರಣಗಳಿಂದಾಗಿ ಸಮುದಾಯಕ್ಕೆ ಹರಡಿದೆ ಎಂಬ ಆತಂಕವೂ ಎದುರಾಗಿದೆ. ಹೀಗಾಗಿ ಮತ್ತೆ ಲಾಕ್​​ಡೌನ್​ ವಿಧಿಸಬೇಕೆಂಬ ಕೂಗು ಎದ್ದಿದೆ.

    ಈ ನಡುವೆ, ಪಶ್ಚಿಮ ಬಂಗಾಳದಲ್ಲಿ ಕರೊನಾ ತಡೆಗೆ ಮತ್ತಷ್ಟು ಕಟ್ಟಿನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯದಲ್ಲಿ ಜುಲೈ 31ರ ವರೆಗೆ ಲಾಕ್​ಡೌನ್​ ವಿಸ್ತರಿಸಿದ್ದಾರೆ. ಅಲ್ಲಿವರೆಗೆ ಶಾಲಾ- ಕಾಲೇಜುಗಳು ಕೂಡ ಬಂದ್​ ಆಗಿರಲಿವೆ ಎಂದು ಆದೇಶ ಹೊರಡಿಸಿದ್ದಾರೆ.

    ಇದನ್ನೂ ಓದಿ; ಪರೀಕ್ಷೆ ಇರಲಿ; ಸಾರ್ವತ್ರಿಕ ಚುನಾವಣೆಯನ್ನೇ ನಡೆಸಲು ಮುಂದಾಗಿದೆ ಈ ದೇಶ

    ಬಂಗಾಳದಲ್ಲಿ 14,728 ಕರೊನಾ ಪ್ರಕರಣಗಳಿದ್ದು, ಈವರೆಗೆ 580 ಜನರು ಮೃತಪಟ್ಟಿದ್ದಾರೆ. ಆದರೆ, ಸಕ್ರಿಯ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದು, 4,930 ಜನರು ಚೇತರಿಸಿಕೊಳ್ಳಬೇಕಿದೆ.

    ಇದಲ್ಲದೆ, ಕರೊನಾ ಅಲ್ಲದ ರೋಗಿಗಳಿಗೆ ಅಗತ್ಯ ಚಿಕಿತ್ಸೆ ಸಿಗುವಂತಾಗಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಇದಲ್ಲದೇ, ಖಾಸಗಿ ಆಸ್ಪತ್ರೆಯಲ್ಲಿ ಕರೊನಾ ರೋಗಿಗಳಿಗೆ ಚಿಕಿತ್ಸಾ ದರವನ್ನು ಶೀಘ್ರದಲ್ಲಿಯೇ ನಿಗದಿ ಮಾಡಲಾಗುತ್ತದೆ ಎಂದು ಮಮತಾ ತಿಳಿಸಿದ್ದಾರೆ.

    ಲಸಿಕೆ ಇಲ್ಲದೆಯೂ ಕೊನೆಗಾಣಲಿದೆ ಕರೊನಾ ಸಂಕಷ್ಟ; ಇಟಲಿ ವೈದ್ಯರಿಂದ ಅಧ್ಯಯನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts