More

    ಲಸಿಕೆ ಇಲ್ಲದೆಯೂ ಕೊನೆಗಾಣಲಿದೆ ಕರೊನಾ ಸಂಕಷ್ಟ; ಇಟಲಿ ವೈದ್ಯರಿಂದ ಅಧ್ಯಯನ

    ನವದೆಹಲಿ: ಜಗತ್ತನ್ನು ಕಾಡುತ್ತಿರುವ ಕರೊನಾ ಸಂಕಷ್ಟ ಲಸಿಕೆ ಇಲ್ಲದೆಯೂ ಕೊನೆಯಾಗಲಿದೆ. ಇಂಥದ್ದೊಂದು ವಿಷಯವನ್ನು ಯಾರೋ ಜ್ಯೋತಿಷಿಗಳು ಹೇಳಿದ್ದಲ್ಲ, ಬದಲಿಗೆ ಇಟಲಿಯ ಖ್ಯಾತ ಹಾಗೂ ತಜ್ಞ ವೈದ್ಯರು ಇದನ್ನು ಕಂಡುಕೊಂಡಿದ್ದಾರೆ.

    ಇದಕ್ಕೆ ಕಾರಣ, ಆರಂಭದಲ್ಲಿ ಕೆಣಕಿದ ಹುಲಿಯಂತಿದ್ದ ಕರೊನಾ ವೈರಸ್​ ಈಗ ಕಾಡು ಬೆಕ್ಕಿನ ಸ್ಥಿತಿಗೆ ಬಂದಿದೆಯಂತೆ. ಹೀಗಾಗಿ ನಮಗೆ ಕರೊನಾ ವೈರಸ್​ ನಿಗ್ರಹಕ್ಕೆ ಲಸಿಕೆಯ ಅಗತ್ಯ ಉಂಟಾಗದು ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ; ಕೆಮ್ಮುತ್ತಿದ್ದ…ಕೇಳಿದವರಿಗೆ ತಮಾಷೆಗೆ ಕರೊನಾ‌ ಇದೆ ಎಂದ..!! ಇದನ್ನು ಕೇಳಿಸಿಕೊಂಡವರು ಮಾತ್ರ ಸುಮ್ಮನಾಗಲಿಲ್ಲ..

    ಈವರೆಗೆ ಜಗತ್ತಿನಲ್ಲಿ 4.65 ಲಕ್ಷ ಜನರನ್ನು ಬಲಿ ಪಡೆದಿರುವ ವೈರಸ್​ ಅಂತ್ಯಕಾಲ ಸಮೀಪಿಸಿದೆ ಎಂದೇ ಹೇಳಲಾಗಿದೆ. ವೈರಸ್​ ತನ್ನಷ್ಟಕ್ಕೆ ನಿರ್ನಾಮವಾಗಲಿದೆ ಎಂದು ತಜ್ಞ ವೈದ್ಯ ಪ್ರೊ. ಮ್ಯಾಟ್ಯೋ ಬಸ್ಸೆಟ್ಟಿ ಅಭಿಪ್ರಾಯಪಟ್ಟಿದ್ದಾರೆ. ಲಾಕ್​ಡೌನ್​ ಕಾರಣದಿಂದಾಗಿ ಜನರು ಪೂರ್ಣ ಪ್ರಮಾಣದ ಬದಲು ಕರೊನಾದ ಲಘು ಸೋಂಕಿಗೆ ಒಳಗಾಗುತ್ತಿರುವುದು ಇದಕ್ಕೆ ಕಾರಣವಾಗಿರಬಹುದು ಎಂದು ಅವರು ಹೇಳಿದ್ದಾರೆ.

    ಈ ಹಿಂದೆ ವಯಸ್ಸಾದವರು ಕರೊನಾಗೆ ಸುಲಭವಾಗಿ ಬಲಿಯಾಗುತ್ತಿದ್ದರು. ಈಗ ಆರಾಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಕಳೆದ ನಾಲ್ಕು ವಾರಗಳಿಗೆ ಹೋಲಿಸಿದಲ್ಲಿ ಕರೊನಾ ವೈರಸ್​ ತೀವ್ರತೆ ಕಳೆದುಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ನಿಶಕ್ತವಾಗಲಿದೆ ಎಂದು ತಜ್ಞರು ಹೇಳಿದ್ದಾರೆ.

    ಇದನ್ನೂ ಓದಿ; ಕರೊನಾಗೆ ಸಜ್ಜಾಯ್ತು ದೇಶೀಯ ಔಷಧ; ಮುಂಬೈ ಕಂಪನಿಗೆ ಡಿಸಿಜಿಐ ಸಮ್ಮತಿ 

    ಈ ಹಿಂದೆ ಜಿನೊವಾದ ಸ್ಯಾನ್​ ಮಾರ್ಟಿನೋ ಆಸ್ಪತ್ರೆಯ ಇಂಥದ್ದೇ ವಾದ ಮಂಡಿಸಿದ್ದಕ್ಕೆ ಟೀಕೆಗೆ ಒಳಗಾಗಿದ್ದರು. ಆದರೆ, ಇದಕ್ಕೆ ಈಗ ಮತ್ತಷ್ಟು ಬಲ ಬಂದಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ, ಕೊಲಂಬಿಯಾ ವಿವಿಯ ಡಾ. ಎಂಜೆಲಾ ರಾಮ್ಸುಸ್ಸೆನ್​ ಹೇಳುವ ಪ್ರಕಾರ ರೊನಾ ವೈರಸ್​ ಶಕ್ತಿಗುಂದುತ್ತಿದೆ ಎಂಬ ಬಗ್ಗೆ ಆಧಾರಗಳಿಲ್ಲ.

    ಕೇವಲ ಗಂಟಲ ದ್ರವದ ಮಾದರಿ ಆಧರಿಸಿ ಇಂಥದ್ದೊಂದು ತರ್ಕಕ್ಕೆ ಬರುವುದು ಸಲ್ಲ, ಇದನ್ನು ಪರೀಕ್ಷೆಗೊಳಪಡಿಸಿ ಸತ್ಯ ಸಾಬೀತುಪಡಿಸಬೇಕು. ಸಾಕ್ಷ್ಯಾಧಾರಗಳು ಇರಬೇಕು ಎಂದು ಗ್ಲಾಸ್ಗೋ ವಿವಿಯ ಡಾ. ಆಸ್ಕರ್​ ಮ್ಯಾಕ್​ಲೀನ್​ ಹೇಳುತ್ತಾರೆ.
    ಇಟಲಿಯಲ್ಲಿ ಈವರೆಗೆ 34,610 ಜನರು ಕೋವಿಡ್​ಗೆ ಬಲಿಯಾಗಿದ್ದಾರೆ. ಫೆ. 21ರಿಂದ ಈವರೆಗೆ 2,38 720 ಜನರು ಸೋಂಕಿಗೆ ಒಳಗಾಗಿದ್ದಾರೆ.

    ಕರೊನಾ ಸಂಕಷ್ಟ ಮುಗಿದರೂ, ಮುಂದೈತೆ ಮಾರಿ ಹಬ್ಬ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts