More

    ಸಾಲ ನೀಡುವಲ್ಲಿ ವಿನಾಕಾರಣ ವಿಳಂಬ ಬೇಡ: ಸಿಇಒ ಭರತ್ ಎಸ್

    ಗದಗ: ವಿವಿಧ ಇಲಾಖೆಯಿಂದ ನೀಡುವ ಸಬ್ಸಿಡಿ ಸಹಿತ ಸಾಲ ನೀಡುವಾಗ ಬ್ಯಾಂಕ್ ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೇ ಕಾರ್ಯನಿರ್ವಹಿಸಬೇಕು ಎಂದು ಜಿ.ಪಂ.ಸಿಇಒ ಭರತ್ ಎಸ್ ಅವರು ಹೇಳಿದರು.

    ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಶುಕ್ರವಾರ ಲೀಡ್ ಬ್ಯಾಂಕ್‍ನ ಡಿಎಲ್‍ಆರ್‍ಸಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

    ಶಾಖೆಯ ನೆಟ್‍ವರ್ಕ್, ಠೇವಣಿಗಳು, ಮುಂಗಡಗಳು ಮತ್ತು ಬ್ಯಾಂಕ್‍ಗಳ ಸಾಲ ಠೇವಣಿ ( ಸಿಡಿ) ಅನುಪಾತದ ವರದಿಯನ್ನು ಪಡೆದು ಮಾತನಾಡಿ ಬ್ಯಾಂಕ್ ಮ್ಯಾನೇಜರ್‍ಗಳು ರೈತರು ಮತ್ತು ಸಾರ್ವಜನಿಕರಿಗೆ ಒದಗಿಸಬೇಕಾದ ಸೌಲಭ್ಯಗಳನ್ನು ವಿಳಂಬ ಮಾಡದೇ ಸಮಯಕ್ಕೆ ಸರಿಯಾಗಿ ನೀಡಬೇಕು ಎಂದು ಸೂಚಿಸಿದರು.

    ಲೀಡ್ ಬ್ಯಾಂಕ್‍ನ ಮ್ಯಾನೇಜರ್ ಜಬ್ಬಾರ್ ಅವರು ಎಸಿಪಿ ಮತ್ತು ಆದ್ಯತಾ ವಲಯದ ಸಾಲದ ಅಡಿಯ ಸಾಧನೆ, ಪಿಎಂಎಸ್ ನಿಧಿ ಅಡಿಯ ಸಾಧನೆ, ಸರ್ಕಾರಿ ಪ್ರಾಯೋಜಿತ ಯೋಜನೆ ಸಾಲಗಳ ಅಡಿಯಲ್ಲಿ ಸಾಧನೆ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳ ಸಾಧನೆ ಕುರಿತು ವರದಿಯನ್ನು ನೀಡಿದರು.

    ನಂತರ ಅವರು ಮಾತನಾಡಿ ಆರ್‍ಬಿಐ ಹೊರಡಿಸಿದ ಇತ್ತೀಚಿನ ಮಾರ್ಗಸೂಚಿಗಳ ಕುರಿತು ಮಾಹಿತಿ ನೀಡಿದರು ಮತ್ತು ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು ಎಲ್ಲಾ ಬ್ಯಾಂಕಿಗಳಲ್ಲಿ ಸೈಬರ್ ಕ್ರೈಮ್ ಸಹಾಯವಾಣಿ ಸಂಖ್ಯೆ 1930 ಲಗತ್ತಿಸಬೇಕು ಎಂದು ಸೂಚಿಸಿದರು.

    ಸಭೆಯಲ್ಲಿ ಎಲ್ಲಾ ಪ್ರಾದೇಶಿಕ ಬ್ಯಾಂಕ್ ಮ್ಯಾನೇಜರ್, ಜಿಲ್ಲಾ ಸಂಯೋಜಕರು, ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts