ಲೋಕ ಸಮರ 2024: ಜಗದೀಶ್ ಶೆಟ್ಟರ್​ ಟಿಕೆಟ್​​ ಬಗ್ಗೆ ಸತ್ಯ ಬಿಚ್ಚಿಟ್ಟ ಸಚಿವ ಪ್ರಲ್ಹಾದ್​ ಜೋಶಿ

WhatsApp Image 2024-03-14 at 4.32.01 PM
Published on

ಧಾರವಾಡ: ಇಂದು ಧಾರವಾಡದ ಮುರುಘಾಮಠ ಸ್ವಾಮೀಜಿ ಭೇಟಿ ಬಳಿಕ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ, ನಿನ್ನೆ ಬಿಜೆಪಿಯ ಎರಡನೇ ಪಟ್ಟಿ ಬಿಡುಗಡೆಯಾಗಿದೆ. ರಾಜ್ಯದ 20 ಸ್ಥಾನಗಳಿಗೆ ಅಭ್ಯರ್ಥಿ ಆಯ್ಕೆ ಮಾಡಿದ್ದಾರೆ. ಇದನ್ನು ಅಳೆದು ತೂಗಿ ಆಯ್ಕೆ ಮಾಡಲಾಗಿದೆ ಎಂದರು.

"ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅರ್ಥದಲ್ಲಿ ಟಿಕೆಟ್ ಹಂಚಿಕೆಯಾಗಿದೆ. ಹತ್ತು ವರ್ಷದಲ್ಲಿ ದೇಶದಲ್ಲಿನ ಅಭೂತಪೂರ್ವ ಬದಲಾವಣೆಯಾಗಿದೆ. ಆರ್ಥಿಕ, ಭದ್ರತೆ, ಮೂಲಭೂತ ಸೌಲಭ್ಯ ಸೇರಿ ಎಲ್ಲ ಕ್ಷೇತ್ರದಲ್ಲಿ ಸುಧಾರಣೆ ಕಂಡುಬಂದಿದೆ. ದೆಹಲಿಯಲ್ಲಿ ದೊಡ್ಡ ಜವಾಬ್ದಾರಿ ನನಗೆ ಕೊಟ್ಟಿದ್ದರು. ಅಭಿವೃದ್ಧಿ ಕೆಲಸದ ಜತೆ ಜನರೊಂದಿಗೆ ಸಂಪರ್ಕದಲ್ಲಿದ್ದೇನೆ. ಮೂರುವರೆ ಲಕ್ಷ ಹೆಚ್ಚಿನ ಅಂತರದಲ್ಲಿ ಜನ ನನ್ನನ್ನು ಗೆಲ್ಲಿಸುತ್ತಾರೆ" ಎಂದರು.

"ನಾಲ್ಕು ಸಲ ಆಯ್ಕೆ ಮಾಡಿದ ಮತದಾರ ಪ್ರಭುಗಳಿಗೆ ನಾನು ಮತ್ತೊಮ್ಮೆ ವಂದಿಸುವೆ. ಇನ್ನೊಮ್ಮೆ ಆಶೀರ್ವಾದ ಮಾಡುವಂತೆ ಕೇಳುವೆ ಎಂದ ಕೇಂದ್ರ ಸಚಿವರು, ಕೆಲ ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪಿದ ವಿಚಾರಕ್ಕೆ ಸ್ಪಂದಿಸಿ, ಯಾರೂ ರೆಬೆಲ್ ಆಗುವುದಿಲ್ಲ, ಎಲ್ಲರೊಂದಿಗೆ ಮಾತನಾಡುವೆ, 3-4 ಸಲ ಟಿಕೆಟ್ ಪಡೆದವರಿದ್ದಾರೆ. ಅದರಲ್ಲಿ ಕೆಲವರನ್ನು ಮುಂದುವರೆಸಿದ್ದಾರೆ" ಎಂದರು.

"ಆಯಾ ರಾಜಕೀಯ ನೋಡಿ ನಿರ್ಣಯ ಮಾಡಿದ್ದಾರೆ. ಎಲ್ಲರೂ ಪಕ್ಷಕ್ಕೆ ಅನಿವಾರ್ಯ, ಎಲ್ಲರೊಂದಿಗೆ ಮಾತನಾಡಿ ಸರಿಪಡಿಸಲಾಗುವುದು.

ಬೆಳಗಾವಿ ಲಿಸ್ಟ್​ನಲ್ಲಿ ಜಗದೀಶ ಶೆಟ್ಟರ್​ ಅವರ ಹೆಸರಿದೆ. ಎಲ್ಲಿಯೆ ಟಿಕೆಟ್ ಸಿಕ್ಕರೂ ಸಂತೋಷ ಪಡುವೆ, ಅವರು ನಮ್ಮ ಪಕ್ಷದ ಹಿರಿಯ ನಾಯಕರು. ನರೇಂದ್ರ ಮೋದಿ ನೇತೃತ್ವದಲ್ಲಿ ಯಾರೂ ಬಿಜೆಪಿ ಬಿಡುವುದಿಲ್ಲ" ಎಂದರು.

"ನಾಲ್ಕು ಅವಧಿ ಮುಗಿಸಿ ಐದಕ್ಕೆ ಪದಾಪರ್ಪಣೆ ಮಾಡುತ್ತಿರುವೆ. ವಿಕಸಿತ ಭಾರತದಲ್ಲಿ ಧಾರವಾಡ ವಿಕಸಿತವಾಗುತ್ತಿದೆ. ಜನ ಮತ್ತೆ ಆಶೀರ್ವಾದ ಮಾಡ್ತಾರೆ, ಇದೊಂದು ದಾಖಲೆಯಾಗುತ್ತದೆ" ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net