ಹಿಂದು ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ಆ. ೨ರಂದು

IMG-20220731-WA0025
Published on

ರಾಣೆಬೆನ್ನೂರ: ಮತೀಯ ಭಯೋತ್ಪಾದನೆ ಸಂಘಟನೆಗಳನ್ನು ನಿಷೇಽಸುವಂತೆ ಹಾಗೂ ರಾಷ್ಟಿçÃಯ ತನಿಕಾದಳ (ಎನ್‌ಐಎ) ಸ್ಥಾಪಿಸುವಂತೆ ಆಗ್ರಹಿಸಿ ಸ್ಥಳೀಯ ಹಿಂದು ಸಂಘಟನೆಗಳ ಒಕ್ಕೂಟದಿಂದ ಆ. ೨ರಂದು ಬೆಳಗ್ಗೆ ೧೦ ಗಂಟೆಗೆ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಸದಸ್ಯ ಹಾಗೂ ನಗರಸಭೆ ಸದಸ್ಯ ಪ್ರಕಾಶ ಬುರಡಿಕಟ್ಟಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆರವಣಿಗೆಯು ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಕುರುಬಗೇರಿ ಕ್ರಾಸ್ ಮೂಲಕ ದರ್ಗಾ ಸರ್ಕಲ್, ಎಂ.ಜಿ. ರಸ್ತೆ, ಪೋಸ್ಟ್ ಸರ್ಕಲ್ ಮೂಲಕ ಬಸ್ ನಿಲ್ದಾಣದ ವೃತ್ತಕ್ಕೆ ಬಂದು ತಲುಪುವುದು. ಅಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ಬಂದ್ ಮಾಡಲಾಗುವುದು. ಆದ್ದರಿಂದ ಈ ಮೆರವಣಿಗೆಯಲ್ಲಿ ತಾಲೂಕಿನ ಸಮಸ್ತ ಹಿಂದು ಭಾಂದವರು ಆಗಮಿಸಬೇಕು. ನಗರದ ಎಲ್ಲ ವ್ಯಾಪಾರಸ್ಥರು, ಅಂಗಡಿ ಮಾಲೀಕರು, ಆಟೋರಿಕ್ಷಾ ಹಾಗೂ ಚಾಲಕರು, ಹೋಟೆಲ್‌ನವರು, ಬೀದಿ ಬದಿ ವ್ಯಾಪಾರಸ್ಥರು ಮೆರವಣಿಗೆಯಲ್ಲಿ ಪಾಲ್ಗೊಂಡು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ನಗರಸಭೆ ಸದಸ್ಯರಾದ ಪ್ರಕಾಶ ಪೂಜಾರ, ನಾಗರಾಜ ಪವಾರ, ಪ್ರಮುಖರಾದ ರಾಘು ಚಿನ್ನಿಕಟ್ಟಿ, ಶಿವಕುಮಾರ ಹಿರೇಮಠ, ಕಿರಣ ಅಂಗಡಿ, ನೀಲಪ್ಪ ಕಸವಾಳ, ಮಾಲತೇಶ ಗೌಡರ, ಅಜಯ ಮಠದ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net