

ಬೆಂಗಳೂರು: ಹಾಸನದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ತಮ್ಮ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬರುತ್ತಿದ್ದಂತೆ ವಿದೇಶಕ್ಕೆ ಹಾರಿದ್ದರು. ಅಂದು ರಾಜ್ಯ ಬಿಟ್ಟು ಹೋದ ಪ್ರಜ್ವಲ್, ಇಷ್ಟು ದಿನಗಳು ಕಳೆದರೂ ಸಹ ಬೆಂಗಳೂರಿಗೆ ಮರಳಿ ಬಂದಿಲ್ಲ. ಸರಣಿ ಆರೋಪಗಳು ವ್ಯಕ್ತವಾದರು, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮನವಿಗೂ ಸ್ಪಂದಿಸದ ಪ್ರಜ್ವಲ್, ರಾಜ್ಯಕ್ಕೆ ಹಿಂತಿರುಗಲೇ ಇಲ್ಲ. ಆದ್ರೆ, ಇಂದು ವಿದೇಶದಿಂದಲೇ ವಿಡಿಯೋ ಸಂದೇಶ ಕಳುಹಿಸಿರುವ ಸಂಸದ, ರಾಜ್ಯದ ಜನತೆಗೆ ಕ್ಷಮೆಯಾಚಿಸಿದ್ದಾರೆ.
"ವಿದೇಶದಿಂದ ವಿಡಿಯೋ ರಿಲೀಸ್ ಮಾಡಿದ ಪ್ರಜ್ವಲ್ ರೇವಣ್ಣ, ರಾಜ್ಯದ ಜನತೆ, ನನ್ನ ತಾತ ಎಚ್.ಡಿ. ದೇವೇಗೌಡರು, ತಂದೆ ಮತ್ತು ತಾಯಿಗೆ ಕ್ಷಮೆಯಾಚಿಸಲು ಬಯಸುತ್ತೇನೆ. ಇದೇ ಮೇ.31ರಂದು ರಾಜ್ಯಕ್ಕೆ ಬರುತ್ತೇನೆ, ಎಸ್ಐಟಿ ಅಧಿಕಾರಿಗಳ ವಿಚಾರಣೆಗೂ ಹಾಜರಾಗುತ್ತೇನೆ. ನನ್ನ ವಿದೇಶ ಪ್ರವಾಸ ಮೊದಲೇ ನಿಗದಿಯಾಗಿತ್ತು. ಇದು ಪ್ರೀ-ಪ್ಲ್ಯಾನ್ ಆಗಿತ್ತು" ಎಂದಿದ್ದಾರೆ.