'ನನ್ನ ಜೀವನ ಪ್ರವೇಶಿಸಲಿದ್ದಾರೆ ವಿಶೇಷ ವ್ಯಕ್ತಿ'.. ಮದುವೆ ಬಗ್ಗೆ ಪ್ರಭಾಸ್ ಪೋಸ್ಟ್?

prabhas
Published on

ಹೈದರಾಬಾದ್​: ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮತ್ತೊಮ್ಮೆ ದೇಶದಾದ್ಯಂತ ಟ್ರೆಂಡಿಂಗ್ ಆಗಿದ್ದಾರೆ. ಆದರೆ ಈ ಬಾರಿ ಅದು ಸಿನಿಮಾಗೆ ಸಂಬಂಧಿಸಿದ್ದಲ್ಲ. ಅವರ ಇನ್‌ಸ್ಟಾಗ್ರಾಮ್​ ಸ್ಟೋರಿ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಈ ಪೋಸ್ಟ್ ನೋಡಿದವರೆಲ್ಲಾ ಪ್ರಭಾಸ್ ಮದುವೆ ಬಗ್ಗೆ ಮಾತನಾಡುತ್ತಿದ್ದು, ಈ ವಿಷಯ ಬಿಸಿ ಬಿಸಿ ಟಾಪಿಕ್ ಆಗಿದೆ. ಆ ಪೋಸ್ಟ್‌ನಲ್ಲಿ, ನನ್ನ ಜೀವನದಲ್ಲಿ ವಿಶೇಷವಾಗಿರುವ ಒಬ್ಬರು ಬರಲಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಆ ವಿಶೇಷವಾಗಿರುವವರು ಎಂದರೆ ಪತ್ನಿಯೇ ಎಂದು ಹಲವರು ಕಾಮೆಂಟ್ಸ್​ ಮಾಡುತ್ತಿದ್ದಾರೆ.

ಇದು ಪ್ರಭಾಸ್ ಮದುವೆ ಕುರಿತಾದ ಪೋಸ್ಟ್ ಆಗಿದ್ದು, ಶುಕ್ರವಾರ(ಮೇ.17)ಬೆಳಗ್ಗೆಯಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದು ಖಂಡಿತಾ ಮದುವೆಗೆ ಸಂಬಂಧಿಸಿದ ಸುದ್ದಿ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಆದರೆ ಇದು ಕಲ್ಕಿ (ಕಲ್ಕಿ 2898 ಕ್ರಿ.ಶ) ಚಿತ್ರದ ಅಪ್‌ಡೇಟ್ ಎಂದು ಇನ್ನೂ ಕೆಲವರು ಹೇಳುತ್ತಾರೆ. ಸುದ್ದಿ ಯಾವುದಾದರೂ ಪ್ರಭಾಸ್​ ಸ್ವತಃ ಬಂದು ಸ್ಪಷ್ಟನೆ ನೀಡುವವರೆಗೂ ಗೊಂದಲ ಮುಂದುವರಿಯಲಿದೆ. ಅಲ್ಲಿಯವರೆಗೆ ಕಾಯಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net