Prabhas Birthaday: ಪ್ರಭಾಸ್ ಮನೆ ಬಳಿ ಅಭಿಮಾನಿಗಳ ಕಲರವ.. ನಿಯಂತ್ರಿಸಿದ ಪೊಲೀಸರು

prabhas
Published on

ಹೈದರಾಬಾದ್​: ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್(Prabhas Birthaday) ಹುಟ್ಟುಹಬ್ಬವನ್ನು ಬುಧವಾರ(ಅ.23) ಆಚರಿಸಲಾಗುತ್ತಿದೆ. ಅವರ ಅಭಿಮಾನಿಗಳಲ್ಲಿ ಸಡಗರ ಮೇರು ಮೀರಿದ್ದು, ಮಂಗಳವಾರ ರಾತ್ರಿಯಿಂದಲೇ ಆಯೋಜಿಸಲಾಗುತ್ತಿದ್ದು, ಫೋಟೋ, ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿವೆ.

ದೇಶ ವಿದೇಶಗಳಲ್ಲಿಯೂ ಕೇಕ್ ಕತ್ತರಿಸುವುದು ಮತ್ತು ಹಲವು ವಿಧಾಯಕ ಕಾರ್ಯಕ್ರಮಗಳ ಮೂಲಕ ಫ್ಯಾನ್ಸ್​ ಹುಟ್ಟು ಹಬ್ಬ ಆಚರಿಸುತ್ತಿದ್ದಾರೆ. ಇನ್ನು ಪ್ರಭಾಸ್ ಅಭಿನಯದ ಸಲಾರ್ ಚಿತ್ರ ಬುಧವಾರ ಮರು ಬಿಡುಗಡೆಯಾಗುತ್ತಿರುವ ಕಾರಣ ಥಿಯೇಟರ್‌ಗಳಲ್ಲಿ ಸಹ ಪ್ರೇಕ್ಷಕರು ಚಿತ್ರ ವೀಕ್ಷಣೆಗೆ ಮುಂದಾಗಿದ್ದಾರೆ.

ಇದರ ನಡುವೆ ಪ್ರಭಾಸ್ ಹೈದರಾಬಾದ್‌ನಲ್ಲಿ ಅಭಿಮಾನಿಗಳು ಜುಬಿಲಿ ಹಿಲ್ಸ್‌ನ ಪೆದ್ದಮ್ಮ ಮಟ್ಲ ದೇವಸ್ಥಾನದ ರಸ್ತೆಯಲ್ಲಿರುವ ಪ್ರಭಾಸ್​ ಮನೆ ಮುಂದೆ ಮಂಗಳವಾರ ಮಧ್ಯರಾತ್ರಿಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಕೆಲವು ಅಭಿಮಾನಿಗಳು ಉತ್ಸಾಹದಿಂದ ಪ್ರಭಾಸ್ ಮನೆಗೆ ಪ್ರವೇಶಿಸಲು ಪ್ರಯತ್ನಿಸಿದರು. ಮಾಹಿತಿ ಪಡೆದ ಪೊಲೀಸರು ತಕ್ಷಣ ಪ್ರಭಾಸ್ ಮನೆಗೆ ಆಗಮಿಸಿ ಅಭಿಮಾನಿಗಳನ್ನು ನಿಯಂತ್ರಿಸಿದರು. ಪ್ರಭಾಸ್ ಮನೆ ಮುಂದೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಅನುಮತಿ ಇಲ್ಲ ಎಂದು ಅಭಿಮಾನಿಗಳಿಗೆ ಪೊಲೀಸರು ಹೇಳಿ ಕಳುಹಿಸಿದ್ದಾರೆ. ಸದ್ಯ ಈ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net