Elon Musk: 'ಎಕ್ಸ್' ಅನ್ನು ಮುಗಿಸಲು ಕಮಲಾಹ್ಯಾರಿಸ್ ತಂಡ ಯೋಜನೆ! ಲೀಕ್ ಆದ ದಾಖಲೆಗಳು ಹೇಳೋದೇನು?

Elon Musk X
Published on

ವಾಷಿಂಗ್ಟನ್​: ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಇನ್ನೆರಡು ವಾರಗಳಲ್ಲಿ ನಡೆಯಲಿದ್ದು, ಇದೀಗ ಆಸಕ್ತಿಕರ ವಿಷಯಗಳು ಹೊರಬರುತ್ತಿವೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾಹ್ಯಾರಿಸ್ ಅವರ ಸಲಹಾ ತಂಡವು ಜನಪ್ರಿಯ ಸಾಮಾಜಿಕ ಮಾಧ್ಯಮ ಎಲೋನ್​ ಮಸ್ಕ್(Elon Musk)​ ಅವರ ಎಕ್ಸ್('X') ಮುಚ್ಚಿಹಾಕಿಸುವ ತಂತ್ರಮಾಡಿದೆ ಎನ್ನಲಾಗಿದೆ.

ಈ ತಂಡದಲ್ಲಿ ಬ್ರಿಟನ್​ನ ರಾಜಕೀಯ ಕಾರ್ಯಕರ್ತ ಮೋರ್ಗನ್ ಮೆಕ್‌ಸ್ವೀನಿ ಸಹ ಇದ್ದು, ಅವರು ಸೆಂಟರ್​ ಫಾರ್​ ಕೌಂಟರಿಂಗ್​ಡಿಜಿಟಲ್ ಹೇಟ್​ ಕೇಂದ್ರವನ್ನು ನಡೆಸುತ್ತಿದ್ದಾರೆ. ಇದು ಬ್ರಿಟಿಷ್ ಪ್ರಧಾನ ಮಂತ್ರಿ ಸ್ತ್ರೀಮರ್​ ಅವರ ಲೇಬರ್ ಪಾರ್ಟಿಯೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ. ಈ ಸಿಸಿಡಿಎಚ್​ ಸಂಸ್ಥೆಗೆ ಸೇರಿದ ದಾಖಲೆಗಳನ್ನು ದಿ ಡಿಸ್​ ಇನ್‌ಫರ್ಮೇಶನ್ ಕ್ರಾನಿಕಲ್ ಬಹಿರಂಗಪಡಿಸಿದ್ದು, ಈ ವಿಷಯ ಅದರಲ್ಲಿ ಬಹಿರಂಗವಾಗಿದೆ.

ಈ ವರ್ಷದ ಮಾರ್ಚ್‌ನಲ್ಲಿ ಸಿದ್ಧಪಡಿಸಿದ ದಾಖಲೆಗಳಲ್ಲಿ, ಎಲೋನ್ ಮಸ್ಕ್ ಅವರ ಟ್ವಿಟರ್ ಅನ್ನು ಹೇಗೆ ಸಂಘಟಿತವಾಗಿ ನಿಗ್ರಹಿಸಬೇಕು ಎಂಬ ಯೋಜನೆ ಹಲವಾರು ಹಂತಗಳಲ್ಲಿ ಸ್ಪಷ್ಟವಾಗಿದೆ. 'ಕಿಲ್ ಮಸ್ಕ್

'ಸ್ ಟ್ವಿಟರ್' ಎಂಬ ಶೀರ್ಷಿಕೆಯಡಿ, ಇದು ಹಣಕಾಸಿನ ಅಸ್ಥಿರಗೊಳಿಸುವಿಕೆ ಮತ್ತು ಜಾಹೀರಾತುದಾರರನ್ನು ಹೆದರಿಸುವುದನ್ನು ಒಳಗೊಂಡಿದೆ.

ಈ ವಿಷಯವನ್ನು ಎಕ್ಸ್​ ಗೆ ಸೇರಿದ ಡೈಲಿ ನ್ಯೂಸ್​ ವೇದಿಕೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಬೆಳವಣಿಗೆಗಳಿಗೆ ಪ್ರತಿಕ್ರಿಯಿಸಿರುವ ಎಲೋನ್ ಮಸ್ಕ್, "ಇದು ಯುನೈಟೆಡ್ ಸ್ಟೇಟ್ಸ್​ನಲ್ಲಿನ ಕ್ರಿಮಿನಲ್ ಕಾನೂನುಗಳನ್ನು ಉಲ್ಲಂಘಿಸುತ್ತ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡುವ ವಿಷಯವಾಗಿದೆ. ಸಿಸಿಡಿಎಚ್​ ಮತ್ತು ಅದರ ನಿರ್ವಾಹಕರ ವಿರುದ್ಧ ಹೋರಾಡುತ್ತದೆ ಎಂದು ಹೇಳಿದ್ದಾರೆ.

ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ ರಿಪಬ್ಲಿಕನ್ ಅಭ್ಯರ್ಥಿ ಟ್ರಂಪ್ ಅವರ ಪರವಾಗಿ ನಿಂತಿದ್ದಾರೆ. ಅವರನ್ನು ಬೆಂಬಲಿಸುವುದು ಮಾತ್ರವಲ್ಲದೆ ರಿಪಬ್ಲಿಕನ್​ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಸಹಾಯ ಮಾಡುತ್ತಿದ್ದಾರೆ. ಕೆಲವು ರಾಜ್ಯಗಳಲ್ಲಿ ಮಸ್ಕ್​ ಹಣವನ್ನೂ ಒದಗಿಸುತ್ತಿರುವ ವರದಿಗಳಿವೆ.

ಮತ್ತೊಂದೆಡೆ, ಅವರು ಡೆಮಾಕ್ರಟಿಕ್ ಪಕ್ಷದ ಆಡಳಿತದಲ್ಲಿನ ದೋಷಗಳನ್ನು ಎತ್ತಿ ತೋರಿಸುತ್ತಿದ್ದಾರೆ. ಪ್ರಸ್ತುತ ಅಧ್ಯಕ್ಷ ಬಿಡೆನ್ ಅವರ ಅಸಡ್ಡೆ ವರ್ತನೆಯಿಂದಾಗಿ ಮೆಕ್ಸಿಕೋದಿಂದ ಅಮೆರಿಕಕ್ಕೆ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚುತ್ತಿದೆ ಎಂದು ಸಾರ್ವಜನಿಕವಾಗಿ ಮಸ್ಕ್​ ಟೀಕಿಸಿದ್ದಾರೆ. ಅಷ್ಟೇ ಅಲ್ಲ, ಎಲೆಕ್ಟ್ರಿಕ್ ವಾಹನಗಳು ಮತ್ತು ಹಣಕಾಸು ನೀತಿಗಳಲ್ಲಿ ದೋಷಗಳಿವೆ ಎಂದು ದೂರಿದ್ದಾರೆ.

ಇನ್ನು ಟ್ರಂಪ್ ಅವರು ಗೆದ್ದರೆ ಮಸ್ಕ್ ಅವರನ್ನು ಸಲಹೆಗಾರರನ್ನಾಗಿ ನೇಮಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net