

ಮುಂಬೈ: ಷೇರು ಷೇರು ಮಾರುಕಟ್ಟೆಯಲ್ಲಿ(Stock Market) ಬಜಾಜ್ ಷೇರುಗಳು ಬುಧವಾರ(ಅ.23)ರಂದು ಗಮನ ಸೆಳೆದಿದೆ. ಮಂಗಳವಾರ(ಅ.22) ಕಂಪನಿಯ ಎರಡನೇ ತ್ರೈಮಾಸಿಕ ಫಲಿತಾಂಶಗಳನ್ನು ಬಿಡುಗಡೆ ಮಾಡಿದ್ದು, ಇದರ ಬಳಿಕ ಷೇರುಗಳು ಲಾಭದೊಂದಿಗೆ ವಹಿವಾಟು ನಡೆಸುತ್ತಿವೆ.
ಇದನ್ನೂ ಓದಿ: ಷೇರುಪೇಟೆಯಲ್ಲಿ ಮತ್ತೆ ಕುಸಿತ
ಮಂಗಳವಾರ ನಷ್ಟದಲ್ಲಿ ಮುಕ್ತಾಯವಾಗಿದ್ದ ಎರಡೂ ಷೇರುಪೇಟೆಗಳು ಬುಧವಾರ ಲಾಭದೊಂದಿಗೆ ವಹಿವಾಟು ನಡೆಸುತ್ತಿವೆ. ಷೇರು ಮಾರುಕಟ್ಟೆ ಹೂಡಿಕೆದಾರರ ಗಮನ ಬಜಾಜ್ ಗ್ರೂಪ್ ಕಂಪನಿಯ ಷೇರುಗಳ ಮೇಲೆ ಕೇಂದ್ರೀಕೃತವಾಗಿದೆ.
ಬಜಾಜ್ ಫೈನಾನ್ಸ್ ಷೇರು ಸೆನ್ಸೆಕ್ಸ್‌ನ ಟಾಪ್ ಗೇನರ್ ಷೇರುಗಳಲ್ಲಿ ಒಂದಾಗಿದೆ. ಬಜಾಜ್ ಫೈನಾನ್ಸ್ ಷೇರುಗಳು ಆರಂಭಿಕ ವಹಿವಾಟಿನಿಂದ ವೇಗವಾಗಿ ವಹಿವಾಟಾಗುತ್ತಿವೆ. ಬೆಳಗ್ಗೆ 10.35ಕ್ಕೆ 346.25 ಪಾಯಿಂಟ್ ಏರಿಕೆಯೊಂದಿಗೆ ಪ್ರತಿ ಷೇರಿಗೆ 7,024.15 ರೂ. ಆಗಿದೆ.
ಬಜಾಜ್ ಫಿನ್‌ಸರ್ವ್ ಷೇರುಗಳು ವೇಗವಾಗಿ ವಹಿವಾಟಾಗುತ್ತಿವೆ. ಪ್ರತಿ ಷೇರಿಗೆ ರೂ 46.20 ರಷ್ಟು ಏರಿಕೆಯಾಗಿ ರೂ 1,768.80 ನಲ್ಲಿ ವಹಿವಾಟು ನಡೆಸುತ್ತಿವೆ. ಇನ್ನು ಬಜಾಜ್ ಆಟೋ ಷೇರುಗಳು ಶೇ.1.50ರಷ್ಟು ಏರಿಕೆ ಕಂಡಿವೆ. ಪ್ರತಿ ಷೇರಿಗೆ 169.70 ರೂಪಾಯಿ ಏರಿಕೆಯೊಂದಿಗೆ 10,538.05 ರೂ. ಆಗಿದೆ.
ಬಜಾಜ್ ಫಿನ್‌ಸರ್ವ್ ಷೇರುಗಳು ಕಳೆದ ಒಂದು ವರ್ಷದಲ್ಲಿ ಶೇಕಡಾ 9.07 ರಷ್ಟು ಲಾಭವನ್ನು ನೀಡಿವೆ. ಕಳೆದ ಆರು ತಿಂಗಳಲ್ಲಿ ಕಂಪನಿಯ ಷೇರುಗಳು ಶೇ.8.54ರಷ್ಟು ಏರಿಕೆ ಕಂಡಿವೆ.
ಬಜಾಜ್ ಫೈನಾನ್ಸ್ ತನ್ನ ಎರಡನೇ ತ್ರೈಮಾಸಿಕ ಫಲಿತಾಂಶದಲ್ಲಿ ಕಂಪನಿಯ ಏಕೀಕೃತ ಲಾಭವು 13 ಶೇಕಡಾದಿಂದ 4,014 ಕೋಟಿಗೆ ಏರಿಕೆಯಾಗಿದೆ ಎಂದು ವರದಿಯಾಗಿದೆ.