ಸೌರವಿದ್ಯುತ್​ ವ್ಯವಸ್ಥೆಗೆ ಹೆಚ್ಚಿದ ಆಸಕ್ತಿ; ಆರ್ಥಿಕ ಉಳಿತಾಯ ಜತೆಗೆ ಪರಿಸರಸ್ನೇಹಿ

Solar
Published on

ಬೆಂಗಳೂರು: ದೇಶದಲ್ಲಿ ಇತ್ತೀಚೆಗೆ ಸೌರಕ್ರಾಂತಿಯಾಗುತ್ತಿದ್ದು, ಮನೆಯ ಮೇಲ್ಛಾವಣಿಯಲ್ಲಿ ಸೌರವಿದ್ಯುತ್​ ವ್ಯವಸ್ಥೆ ಅಳವಡಿಸಿಕೊಳ್ಳತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಈ ಮೂಲಕ ಆರ್ಥಿಕ ಉಳಿತಾಯ ಸಾಧಿಸುವ ಪ್ರಯತ್ನ ಹೆಚ್ಚುತ್ತಿದೆ.

ಸೋಲಾರ್​ ವ್ಯವಸ್ಥೆ ಸುಸ್ಥಿರ ಇಂಧನ ಪರಿಹಾರಗಳನ್ನು ನೀಡುತ್ತದೆ. ಮೇಲ್ಛಾವಣಿಯಲ್ಲಿ ಸೋಲಾರ್​ ಪ್ಯಾನಲ್​ ಅಳವಡಿಸುವುದರಿಂದ ಪರಿಸರಕ್ಕೂ ಉತ್ತಮ ಕೊಡುಗೆ ನೀಡುತ್ತದೆ. ಜತೆಗೆ ಮೇಲ್ಛಾವಣಿಯ ಬಾಳಿಕೆಯನ್ನೂ ಹೆಚ್ಚಿಸುತ್ತದೆ.

ಸೌರ ತಂತ್ರಜ್ಞಾನ ಸಾಕಷ್ಟು ಪ್ರಗತಿ ಹೊಂದುತ್ತಿರುವ ಪರಿಣಾಮ ಸೌರಶಕ್ತಿಯ ಬಳಕೆ ಹೆಚ್ಚುತ್ತಿದೆ. ಜನರು ಆಸಕ್ತಿಯಿಂದಲೇ ಸೋಲಾರ್​ ಪ್ಯಾನಲ್​ ಅಳವಡಿಸಿಕೊಳ್ಳುತ್ತಿದ್ದಾರೆ. ಇತರೆ ಇಂಧನಗಳ ಬಳಕೆಗೆ ಹೋಲಿಸಿದರೆ ಸೌರಶಕ್ತಿಯ ಬಳಕೆ ವೇಗವಾಗಿ ಹೆಚ್ಚುತ್ತಿದೆ ಎಂದು ಇಂಟರ್​ನ್ಯಾಷನಲ್​ ಎನರ್ಜಿ ಏಜೆನ್ಸಿ ವರದಿ ತಿಳಿಸಿದೆ.

ವಿದ್ಯುತ್​ ಉತ್ಪಾದನೆ ಹಾಗೂ ಇತರೆ ಇಂಧನಗಳ ಉತ್ಪಾದನೆ, ಬಳಕೆಯಲ್ಲಿ ಸಾಕಷ್ಟು ಮಾಲಿನ್ಯ ಉಂಟಾಗುತ್ತದೆ. ಇದು ಪರಿಸರದ ಮೇಲೆ ನೇರ ಪರಿಣಾಮ ಬೀರುತ್ತದೆ. ಆದರೆ ಸೌರಶಕ್ತಿಯ ಬಳಕೆ ಪರಿಸರಕ್ಕೆ ಪೂರಕವಾಗಿದೆ. ಮನೆಯಂಗಳಕ್ಕೆ ಸೋಲಾರ್​ ಲ್ಯಾಂಪ್​, ವಾಟರ್​ ಹೀಟರ್​ಗಾಗಿ ಸೋಲಾರ್​ ಬಳಕೆ, ಸಣ್ಣಪುಟ್ಟ ಕೃಷಿ ಚಟುವಟಿಕೆಗಳಿಗೆ ಸೌರ ವಿದ್ಯುತ್​ ಬಳಕೆಯಾಗುತ್ತಿದೆ.

ನಿರ್ವಹಣೆ ಕಡಿಮೆ

ಸೌರವಿದ್ಯುತ್​ ವ್ಯವಸ್ಥೆಯನ್ನು ಒಂದು ಬಾರಿ ಅಳವಡಿಸಿಕೊಂಡರೆ ಹೆಚ್ಚಿನ ನಿರ್ವಹಣೆ ಅಗತ್ಯವಿಲ್ಲ. ವರ್ಷಕ್ಕೆರಡು ಬಾರಿ ಸೋಲಾರ್​ ಪ್ಯಾನಲ್​ ಅನ್ನು ಸ್ವಚ್ಛಗೊಳಿಸುತ್ತಿದ್ದರೆ ಸಾಕು. ಜತೆಗೆ ದುರಸ್ತಿ ಕಾರ್ಯಗಳಿಗೆ ಕಡಿಮೆ ಖರ್ಚು ತಗಲುತ್ತದೆ. ಸೌರಶಕ್ತಿಯು ಸಾಂಪ್ರದಾಯಿಕ ವಿದ್ಯುತ್​ ಮೂಲಗಳಿಗಿಂತ ಹೆಚ್ಚು ಸುರತವಾಗಿದೆ. ಸೌರಶಕ್ತಿಯು ನವೀಕರಿಸಬಹುದಾದ ಶಕ್ತಿಯ ಮೂಲವಾಗಿದ್ದು, ಎಲ್ಲ ಸಂದರ್ಭದಲ್ಲೂ ಲಭ್ಯವಿರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net