

ಹೈದರಾಬಾದ್: ಖ್ಯಾತ ಸಂಗೀತ ನಿರ್ದೇಶಕ ರಾಜ್ ಇಂದು ನಿಧನವಾಗಿದ್ಧಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹೃದಯಾಘಾತದಿಂದಾಗಿ ಕೊನೆಯುಸಿರೆಳೆದಿದ್ದು, ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
ರಾಜ್ 180ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿ ಟಾಲಿವುಡ್‌ನಲ್ಲಿ ಹಲವಾರು ಬ್ಲಾಕ್‌ಬಸ್ಟರ್ ಹಾಡುಗಳನ್ನು ನೀಡಿದ್ದಾರೆ. ಅವರ ಬಹುತೇಕ ಹಾಡುಗಳನ್ನು ಎಸ್.ಪಿ.ಬಾಲಸುಬ್ರಮಣ್ಯಂ ಮತ್ತು ಚಿತ್ರಾ ಹಾಡಿದ್ದಾರೆ. ತೆಲುಗು ಚಿತ್ರಗಳ ಜತೆಗೆ ಕನ್ನಡದ ರಾಯರು ಬಂದರು ಮಾವನ ಮನೆಗೆ, ಎದುರು ಮನೇಲಿ ಗಂಡ ಪಕ್ಕದ್ಮನೆ ಹೆಂಡ್ತಿ, ಸ್ನೇಹದ ಕಡಲಲ್ಲಿ ಮುಂತಾದ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದರು.
ರಾಜ್ ನಿಧನದಿಂದ ತೆಲುಗು ಚಿತ್ರರಂಗದಲ್ಲಿ ದುಃಖದ ಛಾಯೆ ಆವರಿಸಿದ್ದು, ಹಲವಾರು ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. ರಾಜು ಅವರ ಅಕಾಲಿಕ ನಿಧನ ಸಂಗೀತಾಸಕ್ತರನ್ನು ದಿಗ್ಭ್ರಮೆಗೊಳಿಸಿದೆ.(ಏಜೆನ್ಸೀಸ್)