ಶ್ರೀಶನೈಶ್ಚರಸ್ವಾಮಿ ಕುಂಭಾಭಿಷೇಕ ಮಹೋತ್ಸವ ಸಂಭ್ರಮ

18
ತಿ.ನರಸೀಪುರದ ಶ್ರೀ ಬಳ್ಳೇಶ್ವರಸ್ವಾಮಿ ದೇವಾಲಯದಲ್ಲಿ ಶ್ರೀ ಶನೈಶ್ಚರಸ್ವಾಮಿ ದೇಗುಲದ ವಾರ್ಷಿಕ ಬಾದಾಮಿ ಅಮಾವಾಸ್ಯೆ ಕುಂಭಾಭಿಷೇಕ ಮಹೋತ್ಸವ ಪ್ರಯುಕ್ತ ಶುಕ್ರವಾರ ವಿಶೇಷ ಪೂಜೆ ನೆರವೇರಿಸಲಾಯಿತು.
Published on

ತಿ.ನರಸೀಪುರ: ಪಟ್ಟಣದ ತ್ರಿವೇಣಿ ಸಂಗಮ ದಡದಲ್ಲಿರುವ ಶ್ರೀ ಬಳ್ಳೇಶ್ವರಸ್ವಾಮಿ ದೇವಾಲಯದಲ್ಲಿ ಶ್ರೀ ಶನೈಶ್ಚರಸ್ವಾಮಿ ದೇಗುಲದ ವಾರ್ಷಿಕ ಬಾದಾಮಿ ಅಮಾವಾಸ್ಯೆ ಕುಂಭಾಭಿಷೇಕ ಮಹೋತ್ಸವ ಶುಕ್ರವಾರ ಜರುಗಿತು.


ಶ್ರೀ ಗಣಪತಿ ಹೋಮ, ಪಂಚಬ್ರಹ್ಮ ಹೋಮ, ಪಂಚ ಕಳಸ ಆರಾಧನೆ, ಶ್ರೀ ಶನೈಶ್ಚರಸ್ವಾಮಿ ಹೋಮ, ನವಗ್ರಹ ಹೋಮ, ಶ್ರೀ ಶನೈಶ್ಚರ ಪ್ರಧಾನ ಪೂರ್ಣಾಹುತಿ, ಶ್ರೀ ಬಳ್ಳೇಶ್ವರ ಹಾಗೂ ಶ್ರೀ ಶನೈಶ್ಚರಸ್ವಾಮಿಗೆ ಪಂಚಾಮೃತ ಅಭಿಷೇಕ, ಕುಂಭಾಭಿಷೇಕ, ಅಲಂಕಾರ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.


ದೇಗುಲದಲ್ಲಿರುವ ಶ್ರೀ ಶಿರಡಿ ಸತ್ಯಸಾಯಿ ಬಾಬಾ, ಶ್ರೀ ಆಂಜನೇಯಸ್ವಾಮಿ ದೇವರಿಗೂ ವಿಶೇಷ ಪೂಜೆ ನೆರವೇರಿಸಲಾಯಿತು. ದೇವಾಲಯದ ಆವರಣದಲ್ಲಿ ಬದನವಾಳು ಬಿ.ಶಿವಕುಮಾರಶಾಸ್ತ್ರಿ ಅವರ ನಾದ ಸಂಗಮ ತಂಡದ ಸದಸ್ಯರಿಂದ ಶ್ರೀ ಶನೈಶ್ಚರಸ್ವಾಮಿ ಕಥೆ ಏರ್ಪಡಿಸಲಾಗಿತ್ತು.


ಅರ್ಚಕರಾದ ಆರ್.ಅರುಣ್‌ಕುಮಾರ್, ಎ.ಎನ್.ರಾಜೇಂದ್ರ, ವಿನಯ್, ನಾಗಮ್ಮ ಬಿ.ಮಹದೇವ ಶಾಸ್ತ್ರಿ, ವೇದಾ ಕೆ.ಎಸ್.ಮೂರ್ತಿ, ಭುವನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net