ಐರನ್​ಲೆಗ್ ಎಂದು ಕೆಣಕಿದವರಿಗೆ ಉತ್ತರ ಕೊಡಲು ಮುಂದಾದ ಪೂಜಾ ಹೆಗ್ಡೆ!

pooja
Published on

ಹೈದರಾಬಾದ್​: ಹತ್ತನ್ನೆರಡು ವರ್ಷದ ಹಿಂದೆ ದಕ್ಷಿಣ ಭಾರತದ ಬಹುಬೇಡಿಕೆ ನಟಿಯಾಗಿದ್ದ ಪೂಜಾಹೆಗ್ಡೆ ಚಿತ್ರಜಗತ್ತು ಎಂಬ ಮಾಯಾಲೋಕದಲ್ಲಿ ಸತತ ಸೋಲುಂಡಿದ್ದರು. ಆದರೆ ಮೆತ್ತಗೆ ಮೈಕೊಡವಿ ಎದ್ದು ನಿಲ್ಲುವ ಪ್ರಯತ್ನ ಮಾಡ್ತಿದ್ದಾರೆ. ಅವರು ಬೇರೆ ಯಾರು ಅಲ್ಲ, ಕನ್ನಡತಿ ಪೂಜಾ ಹೆಗ್ಡೆ.

ಹೌದು, ಪೂಜಾ ದಕ್ಷಿಣದಲ್ಲಿ ಬೇಡಿಕೆ ಹೊಂದಿದ್ದ ನಟಿ. ಒಂದಾದ ಮೇಲೊಂದು ಗೆಲುವನ್ನ ಕಂಡಿದ್ದ ಪೂಜಾ ಬಾಲಿವುಡ್ ಸಹವಾಸ ಮಾಡಿ ಬಡವರಾದರು.

ಪೂಜಾ ಅಭಿನಯದ 4 ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಗೆದ್ದಿದ್ದರೂ, ಪೂಜಾಗೆ ಕ್ರೆಡಿಟ್ ಸಿಗಲಿಲ್ಲ. ಉತ್ತರದ ಸಿನಿರಸಿಕರು ಇವರನ್ನ ಹೃದಯದಲ್ಲಿಟ್ಟು ಪೂಜೆ ಮಾಡಲಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಆ ನಂತರ ಪೂಜಾ ಅಭಿನಯದ ಸರ್ಕಸ್ ಮತ್ತು ಕಿಸಿ ಕಾ ಭಾಯಿ ಕಿಸಿ ಕಾ ಜಾನ್ ಸಿನಿಮಾ ಮಕಾಡೆ ಮಲಗಿಕೊಂಡವು.

ಇನ್ನೂ.. ರಾಧೆ ಶ್ಯಾಮ್.. ಬೀಸ್ಟ್ ಮತ್ತು ಆಚಾರ್ಯ.. ಪೂಜಾ ಅವರ ಖಾತೆಗೆ ಮತ್ತು ಖ್ಯಾತಿಗೆ ಕತ್ತರಿ ಹಾಕಿದವು. ಇದಕ್ಕೆ ಸಾಕ್ಷಿ ಎನ್ನುವಂತೆ ಒಂದು ಕಾಲದಲ್ಲಿ ಇವರದ್ದು ಗೋಲ್ಡನ್ ಲೆಗ್ ಅನ್ನುತ್ತಿದ್ದ ಜನ ಐರನ್ ಲೆಗ್ ಅನ್ನಲು ಶುರು ಮಾಡಿದರು. ನಾಲ್ಕು ಕೋಟಿ ರೂ. ಕೊಟ್ಟು ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದ ನಿರ್ಮಾಪಕರು, ಒಂದು ಕೋಟಿ ಕೊಡಲು ಕೂಡ ಯೋಚನೆ ಮಾಡಲು ಆರಂಭ ಮಾಡಿದರು. ಇದರ ನಡುವೆ ಪೂಜಾ ಹೆಗ್ಡೆ ಸ್ಥಾನವನ್ನ ಬೇರೆ ನಾಯಕಿಯರು ಆಕ್ರಮಿಸಿಕೊಂಡರು. ಈ ಎಲ್ಲ ಕಾರಣದಿಂದ ಪೂಜಾ ಹೆಗ್ಡೆ ಕೆರಿಯರ್ ಖತಂ ಎಂದೇ ಎಲ್ಲರು ಅಂದುಕೊಂಡಿದ್ದರು.

ಆದರೆ ಈಗ ಪೂಜಾ ಹೆಗ್ಡೆ ಮತ್ತೆ ಮರಳಿ ಬರುವ ಪ್ರಯತ್ನ ಮಾಡ್ತಿದ್ದಾರೆ. ಈ ದಾರಿಯಲ್ಲಿ ಸೌಥ್ ಇಂಡಸ್ಟ್ರೀಯಲ್ಲಿ ಪೂಜಾ ಮೊದಲನೇ ಮೆಟ್ಟಿಲನ್ನು ಮತ್ತೆ ಹತ್ತಿರುವ ಸುದ್ದಿಯೊಂದು ಬಂದಿದೆ.

ನಾಗಚೈತನ್ಯ ಹೊಸದೊಂದು ಸಿನಿಮಾ ಶುರು ಮಾಡಲಿದ್ದು, ಇನ್ನೂ ಮಾತುಕಥೆ ಹಂತದಲ್ಲಿರುವ ಈ ಚಿತ್ರಕ್ಕೆ ಪೂಜಾ ಹೆಗ್ಡೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ಹೈದ್ರಾಬಾದ್ ನ ಜನ ಮಾತನಾಡುತ್ತಿದ್ದಾರೆ.

ಇನ್ನೂ ಎಲ್ಲವೂ ಅಂದುಕೊಂಡತೆ ಆದರೆ ಇದೇ ಅಕ್ಟೋಬರ್ ನಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ ಅನ್ನುವ ಮಾತು ಕೂಡ ಕೇಳಿ ಬರುತ್ತಿದೆ. ಪೂಜಾ ಹೆಗ್ಡೆ ಸದ್ಯಕ್ಕೆ ಹಿಂದಿಯಲ್ಲಿ ಕೂಡ ಒಂದು ಸಿನಿಮಾ ಮಾಡಿದ್ದಾರೆ. ಶಾಹಿದ್ ಕಪೂರ್ ನಾಯಕನಾಗಿರುವ ಈ ಚಿತ್ರಕ್ಕೆ ದೇವಾ ಎಂದು ಹೆಸರಿಡಲಾಗಿದೆ. ಇನ್ನೂ ಈ ಚಿತ್ರ ತೆರೆಗೆ ಬರುವುದು ಕೂಡ ಅಕ್ಟೋಬರ್ ನಲ್ಲಿಯೇ. ಹೀಗಾಗಿಯೇ ಅಕ್ಟೋಬರ್ ನಿಂದ ಪೂಜಾ ಹೆಗ್ಡೆ ಬದುಕಿನಲ್ಲಿ ಮತ್ತೆ ಶುಕ್ರದಸೆ ಆರಂಭವಾಗಲಿದೆ ಅನ್ನುವ ಭವಿಷ್ಯವಾಣಿಯನ್ನ ಅನೇಕರು ಈಗ ಹೇಳ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net