ಹೊಸ ವರ್ಷ, ಹೊಸ ಹರ್ಷ: ಸೋಲಿನ ಕಹಿ ಉಂಡಿದ್ದ ಸೌತ್​ ಬ್ಯೂಟಿಗೆ ಗೆಲುವಿನ ಸಿಹಿ ನಿರೀಕ್ಷೆ | Pooja Hegde

ವಿಜಯವಾಣಿ - 2024-12-10T162217.632
Published on

ಆಂಧ್ರಪ್ರದೇಶ: ಒಂದು ಸಮಯದಲ್ಲಿ ಟಾಲಿವುಡ್​ ಸ್ಟಾರ್​ ನಟರೊಂದಿಗೆ ಬ್ಯಾಕ್​ ಟು ಬ್ಯಾಕ್​ ಮಿಂಚಿದ ಸೌತ್ ಬ್ಯೂಟಿ, ಕರಾವಳಿಯ ಬೆಡಗಿ ಪೂಜಾ ಹೆಗ್ಡೆ (Pooja Hegde), ಒಂದಷ್ಟು ಚಿತ್ರಗಳ ಸೋಲಿನಿಂದ ಚಿತ್ರರಂಗದಲ್ಲಿ ಅವಕಶ ಕಳೆದುಕೊಂಡಿದ್ದರು. ಟಾಪ್ ನಟಿಯರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದ ಪೂಜಾ, 2024ರಲ್ಲಿ ರಿಲೀಸ್ ಆದ 'ಗುಂಟೂರು ಕಾರಂ' ಚಿತ್ರದಿಂದ ಸಂಭಾವನೆ ವಿಷಯಕ್ಕೆ ಹೊರನಡೆದಿದ್ದೇ ತಡ ಅವರ ಕೈಯಲ್ಲಿ ಯಾವ ಸಿನಿಮಾಗಳು ಉಳಿಯಲಿಲ್ಲ. ಅವಕಾಶಗಳಿಂದ ದೂರವಿದ್ದ ನಟಿಗೆ ಇದೀಗ ಹೊಸ ವರ್ಷ, ಹೊಸ ಹರ್ಷ ತರುವ ಮುನ್ಸೂಚನೆ ನೀಡಿದೆ.

2024ರ ವರ್ಷ ಪೂಜಾ ಹೆಗ್ಡೆ ಸಿನಿವೃತ್ತಿಯಲ್ಲಿ ಮರೆಯಲಾಗದ ವರ್ಷ ಎಂದೇ ಹೇಳಬಹುದು. ಏಕೆಂದರೆ, ಈ ವರ್ಷದಲ್ಲಿ ಪೂಜಾ ಅಭಿನಯದ ಯಾವ ಸಿನಿಮಾಗಳು ತೆರೆ ಕಂಡಿಲ್ಲ. ಇದಕ್ಕೆ ಕಾರಣ ಅವರಿಗೆ ಅವಕಾಶಗಳು ಅಷ್ಟಾಗಿ ಸಿಗಲಿಲ್ಲ. ಇಷ್ಟು ದಿನಗಳು ಒಂದು ಲೆಕ್ಕಾವಾದರೆ, ಇನ್ನು ಮುಂದಿನ ದಿನಗಳು ಬೇರೇನೆ ಲೆಕ್ಕ ಎಂಬುದು ನಟಿಯ ಹೊಸ ಲೈನ್​ ಆದಂತಿದೆ. ಸದ್ಯ ಮೂರು ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ಅಭಿನಯಿಸಿರುವ ಪೂಜಾ ಹೆಗ್ಡೆ, ಸ್ಟಾರ್​ ನಟರ ಬಹುನಿರೀಕ್ಷಿತ ಸಿನಿಮಾದಲ್ಲಿ ಕಾಣಿಸಿಕೊಂಡಿರುವುದು ಗಮನಾರ್ಹ.

ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ, ತಮಿಳು ನಟ ಸೂರ್ಯ ಹಾಗೂ ಪೂಜಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಿತ್ರದ ಚಿತ್ರೀಕರಣ ಇದೀಗ ಪೂರ್ಣಗೊಂಡಿದೆ. ಪ್ರಸ್ತುತ, ದಳಪತಿ ವಿಜಯ್ ಅವರ ಕಡೆಯ ಸಿನಿಮಾ 'ದಳಪತಿ 69' ಸೇರಿದಂತೆ ಎರಡು ಬಿಗ್​ ತಮಿಳು ಪ್ರಾಜೆಕ್ಟ್‌ಗಳ ಜತೆಗೆ ಬಾಲಿವುಡ್​ ಚಿತ್ರದಲ್ಲಿಯೂ ಪೂಜಾ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಒಟ್ಟು ಮೂರು ಸಿನಿಮಾಗಳು 2025ರಲ್ಲಿ ತೆರೆ ಕಾಣಲು ಸಿದ್ಧವಾಗಿದ್ದು, ದಿನಾಂಕಗಳ ನಿಗದಿಗೆ ಮಾತ್ರ ಬಾಕಿ ಉಳಿದಿದೆ. ಒಟ್ಟಾರೆ ಮೂರು ಚಿತ್ರಗಳ ಮೂಲಕ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿರುವ ಪೂಜಾಗೆ ಗೆಲುವು ಸಿಗಲಿ ಎಂಬುದೇ ಸಿನಿಪ್ರಿಯರ ಆಶಯ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net