

ಮುಂಬೈ: ಬಾಲಿವುಡ್ನ ಸ್ಟಾರ್ ನಟ ವರುಣ್ ಧವನ್ ಮತ್ತು ತೆಲುಗು ನಟಿ ಮೃಣಾಲ್ ಥಾಕೂರ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ 'ಹೇ ಜವಾನಿ ತೋ ಇಷ್ಕ್ ಹೋನಾ ಹೈ' ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ನಟಿ ಪೂಜಾ ಹೆಗ್ಡೆ (Pooja Hegde) ಅವರನ್ನು ಆಯ್ಕೆ ಮಾಡಿಕೊಂಡಿದೆ ಎಂಬ ಸುದ್ದಿ ಇದೀಗ ಹೊರಬಿದ್ದಿದೆ.
ಇದನ್ನೂ ಓದಿ: ತಡೆ ಹಿಡಿದಿದ್ದ ಕಾಮಗಾರಿಗಳಿಗೆ ಸದ್ಯದಲ್ಲೇ ಭೂಮಿಪೂಜೆ
ಅಸಲಿಗೆ ಈ ಹಿಂದೆಯೇ ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರೆ ಎಂದು ಚಿತ್ರತಂಡ ತಿಳಿಸಿತ್ತು. ಹೀಗಾಗಿ ಮೊದಲ ನಟಿಯ ಪಾತ್ರಕ್ಕೆ ಮೃಣಾಲ್ ಫಿಕ್ಸ್ ಆಗಿದ್ದರು. ಇನ್ನು ಪ್ರಮುಖ ಪಾತ್ರದಲ್ಲಿ ಎರಡನೇ ನಾಯಕಿಯಾಗಿ ಶ್ರೀಲೀಲಾ ನಟಿಸಲಿದ್ದಾರೆ ಎಂದು ಹೇಳಿದ್ದ ಚಿತ್ರ ತಯಾರಕರು, ಇದೀಗ ಶ್ರೀಲೀಲಾರನ್ನು ಕೈಬಿಟ್ಟು ಟಾಲಿವುಡ್ ಬೆಡಗಿ ಪೂಜಾ ಹೆಗ್ಡೆ ಜತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಸದ್ಯ ಈ ಸುದ್ದಿ ಯುವ ನಟಿಯ ಅಭಿಮಾನಿಗಳಲ್ಲಿ ತೀರ ಬೇಸರ ಮೂಡಿಸಿದೆ.
ವರದಿಗಳ ಪ್ರಕಾರ, ಈಗಾಗಲೇ ಶ್ರೀಲೀಲಾ ಕೆಲವು ಚಿತ್ರಗಳಿಗೆ ಸಹಿ ಮಾಡಿದ್ದು, ಆ ಸಿನಿಮಾಗಳ ಚಿತ್ರೀಕರಣದಲ್ಲಿ ಬಿಜಿಯಾಗಿರುವ ಕಾರಣ ಶೂಟಿಂಗ್ ಕಾಲ್‌ಶೀಟ್‌ಗಳನ್ನು ಮೀಸಲಿಡಲು ಸಮಯವಾಗಿಲ್ಲ. ಡೇಟ್ಸ್ ಕೊಡಲು ಸಾಧ್ಯವಾಗದ ಕಾರಣ ಇದೀಗ ಈ ಚಿತ್ರದಿಂದ ಶ್ರೀಲೀಲಾ ಹೊರಗುಳಿಯಬೇಕಾಗಿದೆ. ಈ ಚಿತ್ರದ ಶೂಟಿಂಗ್ ನಿಗದಿತ ಸಮಯಕ್ಕಿಂತ ಸ್ವಲ್ಪ ತಡವಾಗಿ ಆರಂಭವಾಗಿದ್ದರಿಂದ ನಟಿ, ಬಾಲಿವುಡ್ ಪ್ರಾಜೆಕ್ಟ್ನಿಂದ ನಿರ್ಗಮಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).