

ವಿಜಯಪುರ: ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆ ಪಡೆದ ಬಳಿಕ ಕಾರಣಾಂತರಗಳಿಂದ ತಡೆ ಹಿಡಿದಿದ್ದ 6.35 ಕೋಟಿ ರೂ. ಕಾಮಗಾರಿಗಳಿಗೆ ಕೊಡಲೇಭೂಮಿಪೂಜೆ ನೆರವೇರಿಸುವುದಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ಪ್ರಾಧಿಕಾರದ 2022&23ನೇ ಸಾಲಿನ ವಿಡಿಎ ಸಾಮಾನ್ಯ ಸಭೆಯಲ್ಲಿ ಅಭಿವೃದ್ಧಿ ಕಾಮಗಾರಿ ಅನುಷ್ಠಾನಗೊಳಿಸಲು 23 ಸಿವಿಲ್ ಮತ್ತು 7 ವಿದ್ಯುತ್ ಕಾಮಗಾರಿಗಳಿಗಾಗಿ ಅನುಮೋದನೆ ಪಡೆದು, ಟೆಂಡರ್ ಕರೆದು, ಬಿಡ್ ಓಪನ್ ಆಗಿ ಗುತ್ತಿಗೆದಾರರಿಗೆ ಕಾಮಗಾರಿ ಆದೇಶ ನೀಡಿದ ಮೇಲೆ ತಡೆ ಹಿಡಿದಿದ್ದ 6.35 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಸದ್ಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದ್ದು, ಭೂಮಿಪೂಜೆ ನೆರವೇರಿಸುವುದಾಗಿ ತಿಳಿಸಿದ್ದಾರೆ.
ಚುನಾವಣೆಯ ನೀತಿ ಸಂಹಿತೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಕಾಮಗಾರಿಗಳನ್ನು ತಡೆ ಹಿಡಿಯಲಾಗಿತ್ತು. ಹೊಸ ಸರ್ಕಾರ ರಚನೆಯಾದ ನಂತರ ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿ ಅನುಮೋದನೆ ಪಡೆದ ಹಾಗೂ ಪ್ರಾರಂಭವಾಗದ ಎಲ್ಲ ಕಾಮಗಾರಿಗಳನ್ನು ತಡೆಹಿಡಿದು ಆದೇಶಿಸಿದ್ದರಿಂದ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಕಾಮಗಾರಿಗಳು ನೆನಗುದಿಗೆ ಬಿದ್ದಿದ್ದವು. ಅಧಿವೇಶನದಲ್ಲಿ ಈ ಕುರಿತಂತೆ ಪ್ರಶ್ನಿಸಿ, ಕಾಮಗಾರಿ ಆರಂಭಿಸಲು ಒತ್ತಾಯಿಸಲಾಗಿತ್ತು. ಇದರಿಂದ ಈ ಕೆಳಕಂಡ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಉದ್ಯಾನವನಗಳ ಅಭಿವೃದ್ಧಿ, ಜೈನ್ ಲಿಂಕ್, ವಾಕಿಂಗ್ ಟ್ರ್ಯಾಕ್ಸ್ : ಕೌತಾಳ ಲೇಔಟ್ ಜಯಲಕ್ಷ್ಮೀ ನಗರ, ಆಶ್ರಮ ರಸ್ತೆಯ ಶಿವ ಮಂದಿರ ಗುಮಾಸ್ತ ಕಾಲನಿ, ದರ್ಗಾ ರಸ್ತೆಯ ಗಂಗಾಪುರಂ ಹತ್ತಿರ, ರಾಮನಗರ, ಚಾಲುಕ್ಯ ನಗರ ವೆಂಕಟಗಿರಿ ಬಡಾವಣೆ, ದರ್ಗಾ ರಸ್ತೆಯ ಮಹಾಬಲೇಶ್ವರ ಕಾಲನಿ, ಶಾಸಿ ನಗರ ಗೋದಾವರಿ ಹೋಟೆಲ್ ಹತ್ತಿರ, ಆಶ್ರಮ ಹತ್ತಿರದ ಪಾರೇಖ ನಗರ, ದೇಸಾಯಿ ಲೇಔಟ್, ಸಾಯಿಪಾರ್ಕ್ ಏಳು ಮಕ್ಕಳ ತಾಯಿ ಗುಡಿ ಹತ್ತಿರ, ಅಂಕಲೀಕರ ಲೇಔಟ್, ಮಲ್ಲಿಕಾರ್ಜುನ ನಗರ ಶಿವಾಲಯ ಗುಡಿ ಹತ್ತಿರ, ಆದರ್ಶ ನಗರದ ಶಿವಾಲಯ ಗುಡಿ ಹತ್ತಿರ, ದರ್ಗಾ ರಸ್ತೆಯ ಗಂಗಾಪುರಂ ಹತ್ತಿರ, ತೊರವಿ ಗ್ರಾಪಂ ವ್ಯಾಪ್ತಿಯ ಟೀಚರ್ಸ್ ಕಾಲನಿ, ನೆಹರು ನಗರದ ಸಾಯಿಬಾಬಾ ಗುಡಿ ಹತ್ತಿರ, ಚನ್ನಬಸವೇಶ್ವರ ನಗರ, ಸಾಯಿಪಾರ್ಕ್ ಮಹಾಲಕ್ಷಿ$್ಮ ಗುಡಿ ಹತ್ತಿರ, ವಿದ್ಯಾನಗರದ ಆಯುರ್ವೇದಿಕ ಮಹಾವಿದ್ಯಾಲಯದ ಹಾಸ್ಟೇಲ್ ಹತ್ತಿರ, ಶಾಸಿ ನಗರ ಗೋದಾವರಿ ಹೋಟೆಲ್ ಹತ್ತಿರದ ಉದ್ಯಾನವನಗಳ ಅಭಿವೃದ್ಧಿ, ಚೈನ್ ಲಿಂಕ್ ಮತ್ತು ವಾಕಿಂಗ್ ಟ್ರಾಕ್ ನಿರ್ಮಿಸಲಾಗುತ್ತಿದೆ.
ಹೈಮಾಸ್ಟ್ಗಳ ಅಳವಡಿಕೆ: ನರಸಿಂಹ ನಗರದ ಕುಲಕರ್ಣಿ ಲೇಔಟ್, ಪಿಡಿಜೆ ಲೇಔಟ್ ಉದ್ಯಾನವನ, ಸಾಯಿ ವಿಹಾರ, ಪುಣ್ಯಕೋಟಿ ಗೋರಕ್ಷಣಾ ಕೇಂದ್ರ, ಗುಗ್ಗರಿ ಕಾಲನಿ ಸನ್ ಸಿಟಿ, ಎಂ.ಬಿ. ಪಾಟೀಲ ನಗರ, ಕೆಎಚ್ಬಿ ಕಾಲನಿ ಹನುಮಾನ ಗುಡಿ ಹತ್ತಿರ, ಇಟ್ಟಂಗಿಹಾಳ ರಸ್ತೆಯ ಸಚ್ಚಿದಾನಂದ ಆಶ್ರಮ ಹತ್ತಿರ, ಕಲ್ಯಾಣ ನಗರದ ಓಂ ಶಾಂತಿ ಉದ್ಯಾನವನ ಹತ್ತಿರ, ದರ್ಗಾ ರಸ್ತೆ ಗಂಗಾಪುರಂ ಪಲ್ಲೆ ಬಜಾರ್ ಹತ್ತಿರ, ಐಟಿಐ ಕಾಲೇಜು ಎದುರು, ಅಸ್ತೋಷ ಕಾಲನಿ, ಬಣ್ಣದ ಲೇಔಟ್ ಉದ್ಯಾನ, ನವರಸಪುರ ಲೇಔಟ್ ಸಂತೋಷಿ ಮಾತಾ ಗುಡಿ ಉದ್ಯಾನ, ಕೃಷ್ಣಾ ನಗರದ ಪಿಡಿಜೆ ಲೇಔಟ್, ಆದಿಲ್ ಶಾಹಿ ನಗರ, ಗ್ಯಾಂಗಬಾವಡಿ ಓಂ ಗಣಪತಿ ಗುಡಿ, ಎಂ.ಬಿ.ಪಾಟೀಲ ನಗರ (ಸಿ&ಬ್ಲಾಕ್) ತೋಂಟದಾರ್ಯ ಲೇಔಟ್, ಆನಂದ ನಗರ ದಾನಮ್ಮ ಗುಡಿ, ಲಿಂಗೇಶ್ವರ ಲೇಔಟ್ ಉದ್ಯಾನ, ಸಮರ್ಥ ನಗರ ಉದ್ಯಾನವನ, ಯೋಗಾಪುರ ಕಾಲನಿ ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಓನಕೆ ಓಬವ್ವ ಉದ್ಯಾನ, ಅಡಕಿಗಲ್ಲಿ ಗಣಪತಿ ಗುಡಿ, ಕಾಳಿಕಾ ನಗರ ಮುನೀಶ್ವರ ಗುಡಿ ಹತ್ತಿರ ಹೈಮಾಸ್ಟ್ ಗಳನ್ನು ಅಳವಡಿಸಲಾಗುತ್ತಿದೆ.