ಹೇಗಿದೆ ನೋಡಿ ಪೂಜಾ ಗಾಂಧಿ ಕೈಬರಹ!; ಕನ್ನಡದಲ್ಲೇ ಬರೆದು ಶುಭಾಶಯ ಕೋರಿದ 'ಮುಂಗಾರು ಮಳೆ' ಬೆಡಗಿ

Pooja Gandhi F
Published on

ಬೆಂಗಳೂರು: ಕನ್ನಡದ ಯಶಸ್ವಿ ಸಿನಿಮಾಗಳಲ್ಲಿ ಒಂದಾದ 'ಮುಂಗಾರು ಮಳೆ' ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ನಾಯಕಿಯಾಗಿ ಪ್ರವೇಶ ಮಾಡಿದ ಉತ್ತರ ಭಾರತೀಯ ನಟಿ ಪೂಜಾ ಗಾಂಧಿ, ಈ ಚಿತ್ರದ ಯಶಸ್ಸಿನ ಬಳಿಕ ಮತ್ತಷ್ಟು ಕನ್ನಡ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿ ಒಂಥರ ಕನ್ನಡಿಗರೇ ಆಗಿ ಹೋಗಿದ್ದಾರೆ.

ಆ ಬಳಿಕ ಬೆಂಗಳೂರಿನಲ್ಲೇ ನೆಲೆಸಲು ಆರಂಭಿಸಿ ಕನ್ನಡ ಮಾತನಾಡಲು ಕಲಿತಿರುವ ಪೂಜಾ ಗಾಂಧಿ, ನಂತರ ಕನ್ನಡ ಬರೆಯುವುದನ್ನೂ ಕಲಿಯುವುದಾಗಿ ಹೇಳಿದ್ದರು. ಬಳಿಕ ಕನ್ನಡದಲ್ಲಿ ಬರೆದಿದ್ದ ಇವರು ಇದೀಗ ಸ್ವಾತಂತ್ರ್ಯೋತ್ಸವದ ಶುಭಾಶಯವನ್ನು ಕೂಡ ಕನ್ನಡದಲ್ಲಿ ಅದೂ ಕೈಬರಹದಲ್ಲೇ ಬರೆಯುವ ಮೂಲಕ ಕೋರಿದ್ದಾರೆ.

'ಜೈಹಿಂದ್.. 77ನೇ ಸ್ವಾತಂತ್ರ್ಯ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ..' ಎಂದು ಆರಂಭಿಸಿರುವ ಅವರು, '144 ಕೋಟಿ ಭಾರತೀಯರ ಪರವಾಗಿ ನನ್ನ ಮನಪೂರ್ವಕ ನಮನಗಳು' ಎಂದು ಸ್ವಾತಂತ್ರ್ಯೋತ್ಸವದ ಶುಭ ಕೋರಿದ್ದಾರೆ.

ಪೂಜಾ ಗಾಂಧಿ ಕೈಬರಹ ಇರುವ ಶುಭಾಶಯ ಪತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net